- ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 15 ಪದಕ
- ಸಿಂಗ್‌ರಾಜ್ ಅಧಾನಗೆ ಕಂಚು-ಬೆಳ್ಳಿ ಪದಕ
- ಅವನಿ ಲೇಖರಾಗೆ ಒಂದು ಚಿನ್ನ-ಒಂದು ಕಂಚು
- 3 ಚಿನ್ನ, 7 ಬೆಳ್ಳಿ, 5 ಕಂಚು
- ಎರಡೆರಡು ಪದಕಗಳು ಜಯಿಸಿದ ಇಬ್ಬರು ಕ್ರೀಡಾಪಟುಗಳು
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿದ್ದು, ಒಂದು ಚಿನ್ನ ಮತ್ತು ಒಂದು ಬೆಳ್ಳಿ ಜಯಿಸಲು ಸಾಧ್ಯವಾಗಿದೆ. ಪ್ಯಾರಾಥ್ಲೀಟ್‌ಗಳು ಭರ್ಜರಿ ಶುಭಾರಂಭ ಮಾಡಿದ್ದಾರೆ. ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನದ ಪದಕ ಹಾಗೂ ಸಿಂಗ್‌ರಾಜ್ ಅಧಾನ ಬೆಳ್ಳಿ ಪದಕ ಜಯಿಸಿದ್ದಾರೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್: ಶೂಟರ್ ಸಿಂಗ್‌ರಾಜ್‌ಗೆ ಒಲಿದ ಕಂಚಿನ ಪದಕ
ಇದರೊಂದಿಗೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಗಳಿಕೆಯ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದು ಭಾರತದ ಪರ ಗರಿಷ್ಠ ದಾಖಲೆಯಾಗಿದೆ.
ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ 19 ವರ್ಷದ ಮನೀಶ್ ನರ್ವಾಲ್ 218.2 ಅಂಕ ಗಳಿಸಿ ದಾಖಲೆಯ ಸಾಧನೆ ಮಾಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 38 ವರ್ಷದ ಸಿಂಗ್‌ರಾಜ್ ಅಧಾನ 216.7 ಅಂಕ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸಕ್ತ ಕ್ರೀಡಾಕೂಟದಲ್ಲಿಯೇ ಸಿಂಗ್‌ರಾಜ್ ಅಧಾನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಇಂದು ಮತ್ತೊಂದು ಪದಕ ಪಡೆದು, ಎರಡು ಪದಕ ಜಯಿಸಿದ ಎರಡನೇ ಅಥ್ಲೇಟ್ ಆಗಿದ್ದಾರೆ.
ಶೂಟಿಂಗ್ ಕ್ರೀಡಾ ವಿಭಾಗದಲ್ಲಿ ಭಾರತಕ್ಕೆ 5ನೇ ಪದಕ ಲಭಿಸಿದೆ. ಮನೀಶ್ ಹಾಗೂ ಸಿಂಗ್‌ರಾಜ್ ಅಧಾನ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.
ಇದನ್ನು ಓದಿ: ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
ಹಾಲಿ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಪಡೆದು ದಾಖಲೆಯ ಸಾಧನೆಯಾಗಿದೆ.
ನಾಳೆ ಕೊನೆಗೊಳ್ಳಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವು ಭಾರತದ ಕ್ರೀಡಾಪಟುಗಳು ಮತ್ತೆ ಮೂರು ಪದಕ ಗೆಲ್ಲುವು ಸಾಧ್ಯತೆಗಳಿವೆ.