ಡಿಸ್ಕಸ್ ಥ್ರೊ: ಫೈನಲ್‌ ಪ್ರವೇಶಿಸಿ ಶ್ರೇಷ್ಠ ಸಾಧಕಿ ಕಮಲ್‌ಪ್ರೀತ್ ಕೌರ್‌

ಟೋಕಿಯೊ: ಒಲಿಂಪಿಕ್ಸ್ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿಗೆ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇಂದು ನಡೆದ ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿರುವ ಕಮಲ್‌ಪ್ರೀತ್‌ ಕೌರ್‌ ಒಲಿಂಪಿಕ್ಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಿಯಿಂದ ದಾಖಲೆಯ ಸಾಧನೆ ಆಗಿದೆ.

64.00 ಮೀಟರ್  ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸುವ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ ಪಂಜಾಬ್‌ ದವರಾದ 25 ವರ್ಷದ ಕಮಲ್ ಪ್ರೀತ್ ಕೌರ್ ಈ ಬಾರಿಯ ಒಲಿಂಪಿಕ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಎರಡನೇ ಆಟಗಾರ್ತಿ. ಅಮೆರಿಕಾದ ವಲರೈ ಅಲ್ಲಮ್ ಸಹ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

ಇದನ್ನು ಓದಿ: ಒಲಿಂಪಿಕ್ಸ್: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಡಿಸ್ಕಸ್ ಥ್ರೋ  ಎಸೆತದಲ್ಲಿ ಕಮಲ್‌ಪ್ರೀತ್ ಕೌರ್ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 60.29 ಮೀ, 63.97 ಮೀ. ಮತ್ತು 64 ಮೀ. 64 ಮೀಟರ್ ದೂರಕ್ಕೆ ಎಸೆದರು. ಈ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು. ಕೇವಲ ಇಬ್ಬರು ಅಥ್ಲೀಟ್‌ಗ‌ಳಿಗೆ ಮಾತ್ರ ಪದಕ ಸುತ್ತಿಗೆ ನೇರ ಅರ್ಹತೆ ಲಭಿಸಿದೆ.

ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್ (63.75 ಮೀಟರ್), ಕ್ಯೂಬಾದ ವಿಶ್ವ ಚಾಂಪಿಯನ್ ಯೈಮ್ ಪೆರೆಜ್ (63.18 ಮೀಟರ್) ಸಾಧನೆಯನ್ನು ಕಮಲ್‌ಪ್ರೀರ್ ಮೀರಿಸಿದರು. ಮಹಿಳೆಯರ ಡಿಸ್ಕಸ್ ಥ್ರೊ ಫೈನಲ್ ಸ್ಪರ್ಧೆಯು ಆಗಸ್ಟ್ 2ರಂದು ನಡೆಯಲಿದ್ದು, ದೇಶದ ಕೋಟ್ಯಂತರ ಕ್ರೀಡಾಭಿಮಾನಿಗಳ ಭರವಸೆಯಾಗಿರುವ ಕಮಲ್‌ಪ್ರೀತ್ ಕೌರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕೆಲವು ತಿಂಗಳುಗಳ ಹಿಂದೆ ನಡೆದ ಫೆಡರೇಷನ್ ಕಪ್‌ನಲ್ಲಿ 65 ಮೀಟರ್ ದೂರ ಕ್ರಮಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಕಮಲ್‌ಪ್ರೀತ್ ಭಾಜನರಾಗಿದ್ದರು. ಕಮಲ್‌ಪ್ರೀತ್‌ಗೆ ಮತ್ತದೇ ಸಾಧನೆ ಪುನರಾವರ್ತಿಸಲು ಸಾಧ್ಯವಾದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಜೂನ್‌ನಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ-4 ಟೂರ್ನಿಯಲ್ಲಿ 66.59 ಮೀಟರ್ ದೂರ ಡಿಸ್ಕಸ್ ಎಸೆದು ತಮ್ಮದೇ ದಾಖಲೆ ಮಾಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಏಳನೇ ಹಾಗೂ ಒಟ್ಟಾರೆಯಾಗಿ 16ನೇ ಸ್ಥಾನ ಪಡೆದಿರುವ ಸೀಮಾ ಪೂನಿಯಾ, ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಸೀಮಾ ಗರಿಷ್ಠ 60.57 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದರು.

Donate Janashakthi Media

Leave a Reply

Your email address will not be published. Required fields are marked *