ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡವು ಶುಕ್ರವಾರದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸುವು ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶದ ಆಸೆ ಜೀವಂತವಾಗಿದೆ.
ಈ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಐರ್ಲೆಂಡ್ ಮತ್ತು ಭಾರತ ಆರಂಭದಿಂದಲೇ ಪೈಪೋಟಿ ನೀಡಿದವು. ಪಂದ್ಯದ ಕೊನೆಯ ಹಂತದವರೆಗೂ ಎರಡೂ ತಂಡಗಳ ಯಾವುದೇ ಆಟಗಾರರೂ ಗೋಲ್ ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ನವನೀತ್ ಕೌರ್ 57ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತ ತಂಡ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಜಯ ಸಾಧಿಸಿದೆ.
ಇದನ್ನು ಓದಿ: ಭಾರತಕ್ಕೆ ಎರಡನೇ ಪದಕ ಖಚಿತ: ಬಾಕ್ಸರ್ ಲೊವ್ಲಿನಾಗೆ ಒಲಿಂಪಿಕ್ಸ್ ಪದಕ
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್-2020ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ಮತ್ತೊಂದೆಡೆ ಭಾರತೀಯ ಪುರುಷರ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿದ್ದು, ಗೆಲುವಿನ ಜಿದ್ದಾಜಿದ್ದಿಗೆ ಮುಂದಾಗಿವೆ.
ರಾಣಿ ರಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡದ ಮೊದಲ ಮೂರು ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಐರ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಬಲವಾಗಿ ಉಳಿಸಿಕೊಂಡಿದೆ.