ಟೋಕಿಯೋ ಒಲಿಂಪಿಕ್ಸ್‌: ಭಾರತದ ಸ್ಪರ್ಧಿಗಳು ಪಟ್ಟಿ ಹೀಗಿವೆ

  • ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್‌ -2020
  • ಜುಲೈ 23 ರಿಂದ ಆಗಸ್ಟ್‌ 8ರವರೆಗೆ
  • ವಿವಿಧ ವಿಭಾಗಗಳಲ್ಲಿ ಭಾರತ ಸ್ಪರ್ಧಿಗಳು ಭಾಗಿ – ಹಲವು ಪ್ರಶಸ್ತಿಗಳ ನಿರೀಕ್ಷೆಯಲ್ಲಿ
  • ಉದ್ಘಾಟನೆಗೆ ಭಾರತ ಧ್ವಜಧಾರಿಗಳಾಗಿ ಬಾಕ್ಸರ್‌ ಮೇರಿ ಕೋಮ್, ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌
  • ಸಮಾರೋಪ ಸಮಾರಂಭ ಧ್ವಜಧಾರಿ ಕುಸ್ತಿಪಟು ಬಜರಂಗ್ ಪೂನಿಯಾ

ನವದೆದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 18 ಕ್ರೀಡೆಗಳಲ್ಲಿ ಸ್ಪರ್ಧಿಸಲಿರುವ ಭಾರತದ ಒಟ್ಟು 120 ಅಥ್ಲೀಟ್‌ಗಳು ಅರ್ಹತೆ ಪಡೆದುಕೊಂಡಿದ್ದಾರೆ. 2020ರಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್‌ ಅನ್ನು ಕೋವಿಡ್‌ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಜಪಾನ್‌ ದೇಶದ ಟೋಕಿಯೊದಲ್ಲಿ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.

ಕ್ರೀಡಾಕೂಟದಲ್ಲಿನ  ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿರುವ ಭಾರತದ ಸ್ಪರ್ಧಿಗಳ ವಿವರಗಳು ಜುಲೈ 08ರವರೆಗೆ ಅಂತಿಮಗೊಂಡಂತೆ ಕೆಳಗೆ ಹೆಸರಿಸಲಾಗಿದೆ.

ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾಕೂಟವು ಪ್ರೇಕ್ಷರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್ಚರಿ (ತಂಡಗಳ ವಿವರ)
ಪುರುಷರ ರಿಕರ್ವ್‌ ವೈಯಕ್ತಿಕ: ತರುಣ್‌ದೀಪ್‌ ರಾಯ್, ಅತನು ದಾಸ್, ಪ್ರವೀಣ್ ಜಾಧವ್.
ಮಹಿಳಾ ರಿಕರ್ವ್ ವೈಯಕ್ತಿಕ: ದೀಪಿಕಾ ಕುಮಾರಿ.

ಅಥ್ಲೆಟಿಕ್ಸ್‌
ನೀರಜ್ ಚೋಪ್ರಾ ಮತ್ತು ಶಿವಪಾಲ್ ಸಿಂಗ್ (ಪುರುಷರ ಜಾವೆಲಿನ್/ಭರ್ಜಿ ಎಸೆತ)
ಭಾವನಾ ಜಟ್ (ಮಹಿಳೆಯರ 20 ಕಿ.ಮೀ ರೇಸ್‌ ವಾಕ್)
ಕೆಟಿ ಇರ್ಫಾನ್‌ ಥೋಡಿ (ಪುರುಷರ 20 ಕಿ.ಮೀ ರೇಸ್‌ ವಾಕ್)
ಗುರುಪ್ರೀತ್‌ ಸಿಂಗ್ (ಪುರುಷರ 50 ಕಿ.ಮೀ ರೇಸ್‌ ವಾಕ್)
ಅವಿನಾಶ್ ಸಾಬ್ಲೆ (ಪುರುಷರ 3000 ಮೀ. ಸ್ಟೀಪಲ್‌ಚೇಸ್‌)
ಸಂದೀಪ್‌ ಕುಮಾರ್‌ (ಪುರುಷರ 20 ಕಿ.ಮೀ ರೇಸ್‌ ವಾಕ್)
ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿ.ಮೀ ರೇಸ್‌ ವಾಕ್)
ರಾಹುಲ್‌ ರೊಹಿಲ್ಲಾ (ಪುರುಷರ 20 ಕಿ.ಮೀ ರೇಸ್‌ ವಾಕ್)
ಎಂ ಶ್ರೀಶಂಕರ್‌ (ಪುರುಷರ ಲಾಂಗ್ ಜಂಪ್)
ಕಮಲ್‌ಪ್ರೀತ್‌ ಕೌರ್‌ (ಮಹಿಳೆಯರ ಡಿಸ್ಕಸ್ ಥ್ರೋ)
ತಜಿಂದರ್‌ಪಾಲ್ ಸಿಂಗ್ ತೂರ್‌ (ಪುರುಷರ ಶಾಟ್‌ ಪುಟ್‌)
ಸೀಮಾ ಪೂನಿಯಾ (ಮಹಿಳೆಯರ ಡಿಸ್ಕಸ್‌ ಥ್ರೋ)
ದೂತೀ ಚಾಂದ್ (ಮಹಿಳೆಯರ 100 ಮೀ. ಮತ್ತು 200 ಮೀ. ಓಟ)
ಎಂಪಿ ಜಬಿರ್‌ (ಪುರುಷರ 400 ಮೀ. ಹರ್ಡಲ್ಸ್‌)
ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಎಸೆತ)
ಅಮೋಲ್ ಜಾಕೋಬ್, ರಾಜೀವ್‌ ಅರೋಕಿಯಾ, ಮುಹಮ್ಮದ್ ಅನಾಸ್, ನಾಗನಾಥ್ ಪಾಂಡಿ, ನೊಹಾ ನಾರ್ಮಲ್‌ ಟಾಮ್ (ಪುರುಷರ 4×400 ಮೀ. ರಿಲೇ ತಂಡ)
ಸಾತಂಕ್ ಭಾಂಬ್ರಿ, ಅಲೆಕ್ಸ್‌ ಆಂಥೊನಿ, ರೇವತಿ ವೀರಮಣಿ, ಶುಭಾ ವೆಂಕಟೇಶನ್, ಧನಲಕ್ಷ್ಮೀ ಶೇಕರ್‌ (ಮಿಶ್ರ 4×400 ಮೀ. ರಿಲೇ ತಂಡ)

ಬ್ಯಾಡ್ಮಿಂಟನ್‌
ಪಿವಿ ಸಿಂಧೂ (ಮಹಿಳಾ ಸಿಂಗಲ್ಸ್‌)
ಬಿ ಸಾಯ್‌ ಪ್ರಣೀತ್ (ಪುರುಷರ ಸಿಂಗಲ್ಸ್‌)
ಸಾಥ್ವಿಕ್‌ ಸಾಯ್‌ ರಾಜ್ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್‌)

ಬಾಕ್ಸಿಂಗ್‌
ಸತೀಶ್ ಕುಮಾರ್‌ (ಪುರುಷರ 91 ಕೆ.ಜಿ)
ಆಶೀಶ್ ಕುಮಾರ್ (ಪುರುಷರ 75 ಕೆ.ಜಿ)
ಲೊವ್ಲಿನಾ ಬೊರ್ಗೊಹೇನ್ (ಮಹಿಳಾ 69 ಕೆ.ಜಿ)
ವಿಕಾಸ್‌ ಕೃಷ್ಣನ್ (ಪುರುಷರ 69 ಕೆ.ಜಿ)
ಪೂಜಾ ರಾಣಿ (ಮಹಿಳಾ 75 ಕೆ.ಜಿ)
ಅಮಿತ್‌ ಪಂಘಲ್‌ (ಪುರುಷರ 52 ಕೆ.ಜಿ)
ಮೇರಿ ಕೋಮ್ (ಮಹಿಳಾ 51 ಕೆ.ಜಿ)
ಸಿಮ್ರನ್‌ಜೀತ್ (ಮಹಿಳಾ 60 ಕೆ.ಜಿ)
ಮನೀಶ್ ಕೌಶಿಕ್ (ಪುರುಷರ 63 ಕೆ.ಜಿ)

ಈಕ್ವೇಸ್ಟ್ರಿಯನ್
ಫವಾದ್ ಮಿರ್ಝಾ (ಪುರುಷರ ವೈಯಕ್ತಿಕ ವಿಭಾಗ)

ಫೆನ್ಸಿಂಗ್
ಭಾವನಿ ದೇವಿ (ಮಹಿಳಾ ಸಬ್ರೆ)

ಗಾಲ್ಫ್
ಅನಿರ್ಬನ್ ಲಾಹಿರಿ
ಅದಿತಿ ಅಶೋಕ್
ಉದಯನ್ ಮಾನೆ

ಜಿಮ್ನಾಸ್ಟಿಕ್ಸ್‌
ಪ್ರಣತಿ ನಾಯಕ್ (ಮಹಿಳಾ ಆರ್ಟಿಸ್ಟಿಕ್ಸ್‌)

ಹಾಕಿ (ಸ್ಪರ್ಧಿಗಳ ಪಟ್ಟಿ ಅಂತಿಮಗೊಳ್ಳಬೇಕಿದೆ)
ಪುರುಷರ ತಂಡ:
ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್, ಸಂಶೀರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಾನ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ್ ಸೇರಿದಂತೆ 10 ಆಟಗಾರರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಆಡಲು ಸಜ್ಜಾಗಿದ್ದಾರೆ. – ಮನ್‌ಪ್ರೀತ್‌ ಸಿಂಗ್ ಭಾರತ ಹಾಕಿ ತಂಡದ ನಾಯಕ

ಮಹಿಳಾ ತಂಡ: ರಾಣಿ ರಾಂಪಾಲ್ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ.
ಗೋಲ್‌ ಕೀಪರ್ಸ್- ಸವಿತಾ, ಡಿಫೆಂಡರರ್ಸ್​- ಡೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್, ಗುರ್ಜಿತ್ ಕೌರ್, ಉದಿತಾ.
ಮಿಡ್‌ಫೀಲ್ಡರ್‌ಗಳು- ನಿಶಾ, ನೇಹಾ, ಸುಶೀಲಾ ಚಾನು ಪುಖ್ರಾಂಬಮ್, ಮೋನಿಕಾ, ನಂಜೋತ್ ಕೌರ್, ಸಲೀಮಾ ಟೆಟೆ.
ಫಾರ್ವರ್ಡ್‌ಗಳು: ರಾಣಿ ರಾಂಪಾಲ್, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ವಂದನಾ ಕಟಾರಿಯಾ ಮತ್ತು ಶರ್ಮಿಳಾ ದೇವಿ.

ಜೂಡೊ
ಸುಶೀಲಾ ದೇವಿ (ಮಹಿಳಾ ವಿಭಾಗ)

ರೋಯಿಂಗ್
ಅರ್ಜುನ್ ಲಾಲ್ ಜಟ್‌ ಮತ್ತು ಅರವಿಂದ್ ಸಿಂಗ್ (ಪುರುಷರ ಲೈಟ್‌ ವೇಟ್‌ ಡಬಲ್‌ ಸ್ಕಲ್ಸ್‌)

ಸೇಲಿಂಗ್
ನೇತ್ರಾ ಕುಮಾನನ್ (ಮಹಿಳಾ ಲೇಸರ್‌ ರೇಡಿಯಲ್)
ವಿಷ್ಣು ಸರವಣನ್ (ಪುರುಷರ ಲೇಸರ್‌ ಸ್ಟ್ಯಾಂಡರ್ಡ್‌)
ಕೆಸಿ ಗಣಪತಿ ಮತ್ತು ವರುಣ್ ಥಕ್ಕರ್‌ (ಪುರುಷರ ಸ್ಕಿಫ್ 49ಎರ್)

ಶೂಟಿಂಗ್ (ತಂಡಗಳು ಪ್ರಕಟವಾಗಬೇಕಿದೆ)
ವೈಯಕ್ತಿಕ ವಿಭಾಗ
ಅಂಜುಮ್‌ ಮೌದ್ಗಿಲ್, ತೇಜಸ್ವಿನಿ ಸಾವಂತ್‌ (ಮಹಿಳಾ 50 ಮೀ. ರೈಫಲ್ 3 ಪೊಸಿಷನ್)
ಅಪೂರ್ವಿ ಚಾಂದೇಲಾ, ಎಲಾವೆನಿಲ್ ವಲಾರಿವನ್ (ಮಹಿಳಾ 10 ಮೀ. ಏರ್‌ ರೈಫಲ್)
ಮನು ಭಾಕರ್‌ (ಮಹಿಳಾ 10 ಮೀ. ಏರ್‌ ಪಿಸ್ತೂಲ್, ಮಹಿಳಾ 25 ಮೀ. ಪಿಸ್ತೂಲ್)
ಯಶಸ್ವಿನಿ ದೇಸ್ವಾಲ್ (ಮಹಿಳಾ 10 ಮೀ. ಏರ್‌ ಪಿಸ್ತೂಲ್)
ರಾಹು ಸರ್ನೋಬಾತ್ (ಮಹಿಳಾ 25 ಮೀ. ಪಿಸ್ತೂಲ್)
ದಿವ್ಯಾನ್ಷ್‌ ಪನ್ವರ್‌ (ಪುರುಷರ 10 ಮೀ. ಏರ್‌ ರೈಫಲ್)
ಸಂಜೀವ್ ರಜಪೂತ್ (ಪುರುಷರ 50 ಮೀ. ರೈಫಲ್ 3 ಪೊಸಿಷನ್)
ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್‌ (ಪುರುಷರ 50 ಮೀ. ರೈಫಲ್ 3 ಪೊಸಿಷನ್)
ಸೌರಭ್ ಚೌಧರಿ, ಅಭಿಷೇಕ್‌ ವರ್ಮಾ, ದೀಪಕ್ ಕುಮಾರ್‌ (ಪುರುಷರ 10 ಮೀ. ಏರ್‌ ರೈಫಲ್)
ಅಂಗದ್‌ ವೀರ್‌ ಸಿಂಗ್‌ ಬಾಜ್ವಾ, ಮೈರಾಜ್ ಅಹ್ಮದ್ ಖಾನ್ (ಪುರುಷರ ಸ್ಕೀಟ್)

ಮಿಶ್ರ ತಂಡ ವಿಭಾಗ
10 ಮೀ. ಏರ್‌ ರೈಫಲ್ (ದಿವ್ಯಾನ್ಷ್‌ ಸಿಂಗ್ ಪನ್ವರ್‌ ಮತ್ತು ಎಲಾವೆನಿಲ್ ವಲಾರಿವನ್; ದೀಪಕ್ ಕುಮಾರ್‌ ಮತ್ತು ಅಂಜುಮ್ ಮೌದ್ಗಿಲ್).
10 ಮೀ. ಏರ್‌ ಪಿಸ್ತೂಲ್ – (ಸೌರಭ್ ಚೌಧರಿ ಮತ್ತು ಮನು ಭಾಕರ್‌; ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್)

ರಿಸರ್ವ್ಸ್‌
ಪುರುಷರ 10 ಮೀ. ಏರ್ ರೈಫಲ್ (ಸಂದೀಪ್ ಸಿಂಗ್ ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್‌)
ಪುರುಷರ 50 ಮೀ. ರೈಫಲ್‌ 3 ಪೊಸಿಷನ್ (ಸ್ವಪ್ನಿಲ್ ಕುಸಾಲೆ ಮತ್ತು ಚೇತನ್ ಸಿಂಗ್)
ಪುರುಷರ 10 ಮೀ. ಏರ್‌ ಪಿಸ್ತೂಲ್ (ಶಾಹ್ಜಾರ್‌ ರಿಝ್ವಿ ಮತ್ತು ಓಂ ಪ್ರಕಾಶ್ ಮಿತ್ರವಲ್)
ಪುರುಷರ ಸ್ಕೀಟ್‌ (ಗುರುಜೋತ್ ಸಿಂಗ್ ಖಾಂಗುರಾ ಮತ್ತು ಶೇರಝ್ ಶೇಖ್)
ಮಹಿಳಾ 10 ಮೀ. ಏರ್‌ ರೈಫಲ್ (ಅಂಜುಮ್ ಮೌದ್ಗಿಲ್ ಮತ್ತು ಶ್ರೇಯಾ ಅಗರ್ವಾಲ್)
ಮಹಿಳಾ 50 ಮೀ. ರೈಫಲ್ 3 ಪೊಸಿಷನ್ (ಸುನಿಧಿ ಚೌಹಾಣ್ ಮತ್ತು ಗಾಯತ್ರಿ ನಿತ್ಯಾನಂದಮ್)
ಮಹಿಳಾ 10 ಮೀ. ಏರ್‌ ಪಿಸ್ತೂಲ್ (ಪಿ ಶ್ರೀ ನಿವೇತಾ ಮತ್ತು ಶ್ವೇತಾ ಸಿಂಗ್)
ಮಹಿಳಾ 25 ಮೀ. ಪಿಸ್ತೂಲ್ (ಚಿಂಕಿ ಯಾದವ್ ಮತ್ತು ಅಭಿನಯಾ ಪಾಟಿಲ್)

ಈಜು
ಸಾಜನ್ ಪ್ರಕಾಶ್ (ಪುರುಷರ 200 ಮೀ. ಬಟರ್‌ಫ್ಲೈ)
ಶ್ರೀಹರಿ ನಟರಾಜ್ (ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್)
ಮಾನಾ ಪಟೇಲ್ (ಮಹಿಳಾ 100 ಮೀ. ಬ್ಯಾಕ್‌ಸ್ಟ್ರೋಕ್)

ಟೇಬಲ್‌ ಟೆನಿಸ್‌
ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್ – ಪುರುಷರ ಸಿಂಗಲ್ಸ್
ಮಾನಿಕಾ ಬಾತ್ರಾ, ಸುತೀರ್ಥಾ ಮುಖರ್ಜಿ – ಮಹಿಳಾ ಸಿಂಗಲ್ಸ್
ಅಚಂತ ಶರತ್ ಕಮಲ್ ಮತ್ತು ಮಾನಿಕಾ ಬಾತ್ರಾ – ಮಿಶ್ರ ಡಬಲ್ಸ್

ಟೆನಿಸ್‌
ಸಾನಿಯಾ ಮಿರ್ಜಾ – ಅಂಕಿತಾ ರೈನಾ (ಮಹಿಳಾ ಡಬಲ್ಸ್‌)

ವೇಟ್‌ಲಿಫ್ಟಿಂಗ್
ಸಾಯ್‌ಖೋಮ್ ಮೀರಾಬಾಯ್ ಚಾನು (ಮಹಿಳಾ 48 ಕೆ.ಜಿ)

ಕುಸ್ತಿ
ರವಿ ದಹಿಯಾ – ಪುರುಷರ 57 ಕೆ.ಜಿ ಫ್ರೀಸ್ಟೈಲ್
ಬಜರಂಗ್ ಪೂನಿಯಾ – ಪುರುಷರ 65 ಕೆ.ಜಿ ಫ್ರೀಸ್ಟೈಲ್
ದೀಪಕ್ ಪೂನಿಯಾ – ಪುರುಷರ 86 ಕೆ.ಜಿ ಫ್ರೀಸ್ಟೈಲ್
ವಿನೇಶ್ ಫೋಗಾಟ್ – ಮಹಿಳೆಯರ 53 ಕೆ.ಜಿ ಫ್ರೀಸ್ಟೈಲ್
ಅನ್ಶು ಮಲಿಕ್ – ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್
ಸೋನಮ್ ಮಲಿಕ್ – ಮಹಿಳೆಯರ 62 ಕೆ.ಜಿ ಫ್ರೀಸ್ಟೈಲ್
ಸೀಮಾ ಬಿಸ್ಲಾ – ಮಹಿಳೆಯರ 50 ಕೆ.ಜಿ ಫ್ರೀಸ್ಟೈಲ್

Donate Janashakthi Media

Leave a Reply

Your email address will not be published. Required fields are marked *