ರಾಜ್ಯದ  ಸಿಂಗಲ್ ಥಿಯೇಟರ್‌ ಸೇರಿದಂತೆ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲೂ ಟೋಬಿ ಮೋಡಿ

ಬೆಂಗಳೂರು: ಒಂದು ಮೊಟ್ಟೆ ಕಥೆ ಖ್ಯಾತಿಯ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾ ಇಂದು ಬಿಡುಗಡೆಯಾಗಿದೆ. ರಾಜ್ಯಾದ್ಯಾಂತ ಗ್ರ್ಯಾಂಡ್‌ ರೀಲಿಸ್‌ ಆಗಿದೆ. ರಾಜ್ಯದ  ಸಿಂಗಲ್ ಥಿಯೇಟರ್‌ ಸೇರಿದಂತೆ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲೂ ಟೋಬಿ ಮೋಡಿ ಶುರುವಾಗಿದೆ.

ಟೋಬಿ ಸಿನಿಮಾ ರಾಜ್ಯದ 175 ಸಿಂಗಲ್ ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದು, ಮಲ್ಟಿಪ್ಲೆಕ್ಸ್‌ನಲ್ಲೂ ಟೋಬಿಯನ್ನ ನೋಡಬಹುದಾಗಿದೆ.ಸದ್ಯ ಟೋಬಿ ಸಿನಿಮಾ ಜನರಿಂದ ಒಳ್ಳೆಯ ಪತ್ರಿಕಿಯೆ ದೊರೆಯುತ್ತಿದ್ದು, ರಾಜ್‌ ಬಿ ಶೆಟ್ಟಿ ನಟನೆಗೆ ಜನರು ಫಿದಾ ಆಗಿದ್ದಾರೆ.

ಇಂದು ಬೆಂಗಳೂರಿನ ನರ್ತಕಿ ಥಿಯೇಟರ್‌ಗೆ ಭೇಟಿ ನೀಡಿದ್ದ ರಾಜ್‌ ಬಿ ಶೆಟ್ಟಿ ಅಭಿಮಾನಿಗಳ ಜೊತೆ ಡೊಳ್ಳು ಬಾರಿಸಿ ರಂಜಿಸಿದರು.

ಇದನ್ನೂ ಓದಿ:ಕೋರೆಗಾವ್‌ನ ಬುದ್ಧ ಈ ಮಾಮನ್ನನ್!

ಟೋಬಿ-ಮಾರಿ ಮಾರಿ ಮಾರಿಗೆ ದಾರಿ ಎಂಬ ಶೀರ್ಷಿಕೆ ಹೊತ್ತ ಈ ಸಿನಿಮಾವನ್ನು ರಾಜ್‌ ಅವರೇ ಬರೆದಿದ್ದು, ಲೀಡ್‌ ರೋಲ್‌ನಲ್ಲೂ ನಟಿಸಿದ್ದಾರೆ. ಈ ಚಿತ್ರಕ್ಕೆ ಬಾಸಿಲ್‌ ಅಲ್ಚಲಕ್ಕಲ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

ರಾಜ್‌ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾ ನಿರೀಕ್ಷೆಯ ಸಿನಿಮಾವಾಗಿದ್ದು. ಈ ಸಿನಿಮಾ 10 ಕೋಟಿ ಬಜೆಟ್‌ನಲ್ಲಿಯೇ ಇಡೇ ಸಿನಿಮಾ ನಿರ್ಮಾಣಗೊಂಡಿದೆ.ಟೋಬಿ ಸಿನಿಮಾದಲ್ಲಿ ರಾಜ್ ಬಿ ಶೆಟ್ರಿಗೆ ಇಬ್ಬರು ನಾಯಕಿಯರಿದ್ದಾರೆ. ಚೈತ್ರಾ ಆಚಾರ್ ಮತ್ತು ಸಂಯುಕ್ತಾ ಹೊರನಾಡು ಇಲ್ಲಿ ಜೊತೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *