ಬೆಂಗಳೂರು : ರಾಜ್ಯದಲ್ಲಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಸಂಘಟನೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಿಐಟಿಯು ನೂತನವಾಗಿ ಆಯ್ಕೆಯಾದ ಸಚಿವರು ಹಾಗೂ ಶಾಸಕರುಗಳಿಗೆ ತಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಲು ಇಂದು ರಾಜ್ಯಾದ್ಯಂತ ಕಾರ್ಮಿಕರು ಆಯಾ ಕ್ಷೇತ್ರದ ಶಾಸಕರುಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅದರ ಭಾಗವಾಗಿ ದಕ್ಷಿಣ.ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದಲ್ಲಿ ವಿಧಾನ ಸಭಾ ಸ್ಪೀಕರ್ ಸ್ವತಃ ಹಾಜರಿದ್ದು ಮನವಿ ಸ್ವೀಕರಿಸಿ ಬೆಂಗಳೂರಿನಲ್ಲಿ ಫೆಡರೇಶನ್ ರಾಜ್ಯ ನಾಯಕತ್ವದ ಜತೆ ನೀವು ಸಲ್ಲಿಸುವ ಬೇಡಿಕೆಗಳ ಕುರಿತು ಸಮಾಲೋಚಿಸಿ ಸರ್ಕಾರಕ್ಕೆ ಮತ್ತು ಕಾರ್ಮಿಕ ಸಚಿವರಿಗೆ ಅವುಗಳ ಬಗ್ಗೆ ಈಡೇರಿಸಲು ಅಗತ್ಯ ಕ್ರಮವಹಿಸಲು ಸೂಚನೆ ನೀಡುತ್ತೇನೆ ಎಂದು ವಿಧಾನ ಸಭಾ ಸ್ಪೀಕರ್ ಶ್ರೀ ಯು.ಟಿ.ಖಾದರ್, ಭರವಸೆ ನೀಡಿದರು.
ಮನವಿಗಳನ್ನು ಸ್ವೀಕರಿಸಿದ ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್, ಸ್ಥಳೀಯ ಶಾಸಕರಾದ ಶ್ರೀ ವಿರೇಂದ್ರಕುಮಾರ್, ಸುಳ್ಯ ದಲ್ಲಿ ಶ್ರೀಮತಿ ಭಾಗೀರಥಿ,ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ,ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ, ಕೋಲಾರದಲ್ಲಿ ಶಾಸಕರಾದ ಶ್ರೀ ಕೊತ್ನೂರು ಮಂಜುನಾಥ್, ಮಾಲೂರು ಶಾಸಕರಾದ ಶ್ರೀಕೆ.ವೈ ನಂಜೇಗೌಡ ವಿಜಯನಗರ ಕ್ಷೇತ್ರದಲ್ಲಿ ಶ್ರೀ ಗವಿಯಪ್ಪ,ತುಮಕೂರು ನಗರ ಶಾಸಕ ಶ್ರೀ ಜ್ಯೋತಿ ಗಣೇಶ್ ಅವರುಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರ ಕುರಿತಾದ ಬೇಡಿಕೆಗಳನ್ನು ಈಡೇರಿಸುವ ಕುರಿತು ಚರ್ಚೆ ನಡೆಸುವುದಾಗಿ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಾದ್ಯಂತ ಇನ್ನೂ ಹತ್ತಾರು ಕೇಂದ್ರಗಳಲ್ಲಿ ಶಾಸಕರ ಕಚೇರಿಗಳಿಗೆ ಹಾಗೂ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರ ಮೂಲಕ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೇ ಮನವಿಯನ್ನು ಈಗಾಗಲೇ ರಾಜ್ಯ ಮಟ್ಟದ ಮುಖಂಡರು ಜೂನ್ 7 ರಂದು ಕಾರ್ಮಿಕ ಸಚಿವ ಶ್ರೀ ಸಂತೋಷ್ ಲಾಡ್ ಅವರನ್ನು ಕಲ್ಯಾಣ ಮಂಡಳಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದವೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ರವರು ತಿಳಿಸಿದರು.
ಇದನ್ನೂ ಓದಿ:ಕೆಲಸ ನಿಲ್ಲುವ ಭೀತಿಯಲ್ಲಿ ಕಟ್ಟಡ ಕಾರ್ಮಿಕರು: ಸರಕಾರ ನೆರವು ನೀಡಬೇಕೆಂದು ಆಗ್ರಹ
ಕಾರ್ಮಿಕರ ಪ್ರಮುಖ ಬೇಡಿಕೆಗಳು
1.2021-2022 ಸಾಲಿನಲ್ಲಿ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಬೇಕು.
2.ಮನೆಕಟ್ಟಲು 5 ಲಕ್ಷ ಸಹಾಯಧನ ನೀಡಬೇಕು.
3.ವೈದ್ಯಕೀಯ ವೆಚ್ಚ ಆರೋಗ್ಯ ಸಂಜೀವಿನಿ ಅಡಿಯಲ್ಲಿ ನೀಡಬೇಕು.ವೈದ್ಯಕೀಯ ವೆಚ್ಚ ಮಂಜೂರು ಮಾಡುವಾಗ ವಿಳಂಭ ಮಾಡಬಾರದು.
4.ಪಿಂಚಣಿ,ನವೀಕರಣ ಅರ್ಜಿಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು.
5.ರಾಜ್ಯಾದ್ಯಂತ ಖಾಲಿ ಇರುವ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು.
6.ಕಲ್ಯಾಣ ಮಂಡಳಿಯಲ್ಲಿ ಸಿಐಟಿಯು ಪ್ರಾತಿನಿಧ್ಯ ನೀಡಬೇಕು.
7.ಸ್ಲಂ ಬೋರ್ಡ್ ಗೆ ಮಂಡಳಿಯಿಂದ ನೀಡಿದ ಹಣ ಮರುಪಾವತಿ ಮಾಡಬೇಕು.
8.ಈ ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಕಿಟ್ ಹಗರಣ ಸೇರಿ ಎಲ್ಲ ಖರೀದಿಗಳ ತನಿಖೆ ನಡೆಸಬೇಕು.
8.ಕರೋನ ಸಂಕಷ್ಟ ಸಮಯದಲ್ಲಿ ತಿರಸ್ಕರಿಸಿದ ಅರ್ಜಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರು ಮಾಡಬೇಕು.
9.ಕಲ್ಯಾಣ ಮಂಡಳಿಯಿಂದ ಘೋಷಿಸಲ್ಪಟ್ಟ ಎಲ್ಲ ಕಾರ್ಯಕ್ರಮಗಳ ಧನಸಹಾಯ DBT ಮೂಲಕ ತ್ವರಿತಗತಿಯಲ್ಲಿ ಆಗಬೇಕ
- ನಕಲಿ ಕಾರ್ಡುಗಳನ್ನು ಹಾಗೂ ಬ್ರೂಕರ್ ಗಳ ಹಾವಳಿ ತಡೆಗಟ್ಟಬೇಕು ಕಾರ್ಮಿಕ ಇಲಾಖೆಯಲ್ಲಿ ಫಲಾನುಭವಿಗಳಿಂದ ಲಂಚ ವಸೂಲಿ ಮಾಡುವ ಅಧಿಕಾರಿಗಳನ್ನು ವಜಾಗೊಳಿಸಬೇಕು