ಹೆಡ್ ಕಾನ್ಸ್ ಟೇಬಲ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಹಾಸನ: ಹೆಡ್ ಕಾನ್ಸ್ ಟೇಬಲ್ ನಿಂದಲೇ ಮೀಟರ್ ಬಡ್ಡಿ ದಂದೆ ನಡೆಯುತ್ತಿದ್ದು, ಕಿರುಕುಳ ನೀಡಿರುವ ಆರೋಪ ನಗರದಲ್ಲಿ ಕೇಳಿಬದಿದೆ. ಹೆಡ್ ಕಾನ್ಸ್ ಟೇಬಲ್ ಅರುಣ್ ಎಂಬುವವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಿರುಕುಳಕ್ಕೆ

ಮೀಟರ್ ಬಡ್ಡಿ ದಂಧೆಯನ್ನು ಹಾಸನ ಎಸ್ ಪಿ ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ನಡೆಸುತ್ತಿದ್ದು, ವ್ಯಕ್ತಿಯೊಬ್ಬರಿಗೆ 80 ಸಾವಿರ ರೂಪಾಯಿಗೆ 2 ಲಕ್ಷ ರೂಪಾಯಿ ಬಡ್ಡಿ ಕಟ್ಟಿದರೂ ಬಿಡದೇ ಕಿರುಕುಳ ನೀಡುತ್ತಿದ್ದಾರೆ.

ಇದನ್ನೂ ಓದಿ: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ: ಚ್.ಕೆ. ಪಾಟೀಲ್ ಒತ್ತಾಯ

ಎರಡು ವರ್ಷಗಳ ಹಿಂದೆ ಕೋಳಿ ಅಂಗಡಿ ಮಾಡಲು ತನ್ವೀರ್ ಎಂಬುವವರು 80 ಸಾವಿರ ರೂಪಾಯಿ ಸಾಲ ಪಡೆದಿದರಂತೆ. ಅದಕ್ಕೆ ವಾರಕ್ಕೆ 7000 ರೂಪಾಯಿ ಬಡ್ಡಿ ವಸೂಲಿ ಮಾಡಿದ್ದಾರಂತೆ. ತಿಂಗಳಿಗೆ 28 ಸಾವಿರ ರೂಪಾಯಿ ಬಡ್ಡಿ ಕಟ್ಟಿ ಹೈರಾಣಾಗಿದ್ದರು.

ಅರುಣ್ ಗೆ ಬಡ್ಡಿ ಕಟ್ಟಲೆಂದೇ ವಕೀಲ ದುಶ್ಯಂತ್ ಸೇರಿ ಹಲವರಿಂದ ಸಾಲ ಪಡೆದಿದ್ದರಂತೆ. ಎರಡು ವಾರದಿಂದ ಬಡ್ಡಿ ಕಡ್ಡಿ ಕಟ್ಟದ ಕಾರಣಕ್ಕೆ ಹೆಡ್ ಕಾನ್ಸ್ ಟೇಬಲ್ ಅರುಣ್ ಕಿರುಕುಳ ನೀಡಿದ್ದರಂತೆ ಇದರಿಂದ ಬೇಸತ್ತು ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ತನ್ವೀರ್ ಅವರನ್ನು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ

ಮೀಟರ್ ಬಡ್ಡಿ ಆರೋಪ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಮೇ ದಿನ | ಸ್ವದೇಶಿ ಎನ್ನುವ ಸರ್ಕಾರ ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸುತ್ತಿರುವುದೇಕೆ? – ಡಾ. ಕೆ.ಪ್ರಕಾಶ್‌

Donate Janashakthi Media

Leave a Reply

Your email address will not be published. Required fields are marked *