ಗದಗ : ಟಿಪ್ಪು ಜಯಂತಿ ಆಚರಿಸುವ ಮೂಲಕ ಅವರ ಸಾಧನೆ, ರಾಜಕೀಯ ನಿಲುವು, ದೇಶಪ್ರೇಮವನ್ನು ಇಂದಿನ ಯುವ ಸಮುದಾಯಕ್ಕೆ ಅವಶ್ಯಕತೆಯಿದೆ ಹಾಗಾಗಿ ಟಿಪ್ಪು ಜಯಂತಿಗಾಗಿ ಯಾರ ಅನುಮತಿಗಾಗಿ ಕಾಯುವುದಿಲ್ಲ ಎಂದು ಪ್ರಗತಿಪರ ಚಿಂತಕ ಶರೀಫ್ ಬಿಳೆಯಲಿ ಹೇಳಿದರು.
ಟಿಪ್ಪು ಸುಲ್ತಾನರ 270ನೇ ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಆಚರಣೆ ರದ್ದು ಮಾಡಿರುವುದರಿಂದ ಜಿಲ್ಲೆಯಲ್ಲಿ ಆಚರಣೆಗೆ ಅನುಮತಿ ನೀಡುವುದು ಅನುಮಾನ, ಅವರ ಅನುಮಯಿಗಾಗಿ ನಾವೇನು ಕಾಯುವುದಿಲ್ಲ ನಾವಂತು ಜಯಂತಿ ಮಾಡುತ್ತವೆ ಎಂದರು.
ಟಿಪ್ಪು ಜಯಂತಿಯಲ್ಲಿ 35ಕ್ಕೂ ಹೆಚ್ಚಿನ ವಿವಿಧ ಸಂಘಟನೆಗಳು ಹಾಗು ಪ್ರಗತಿಪರ ಚಿಂತಕರು ಭಾಗವಹಿಸಲಿದ್ದು ವಿಚಾರ ಸಂಕಿರ್ಣ ನಡೆಸಿ ಜಯಂತಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದರು.
ಇಶಾಪ್ ನಮಾಜಿ, ಇಮ್ತಿಯಾಜ್ ಮಾನ್ವಿ, ಯಲ್ಲಪ್ಪ ರಾಮಗೇರಿ, ವಿಜಯ್ ಕಲ್ಮನಿ, ಮುತ್ತು ಬಿಳೆಯಲಿ, ಶಿವಾನಂದ ತಮ್ಮನ್ನವರ ಸೆರಿದಂತೆ ಇತರರು ಉಪಸ್ಥಿತರಿದ್ದರು.