ಬಿಜೆಪಿ ಟಿಕೆಟ್ ಹಗರಣ | ಚೈತ್ರಾ ಕುಂದಾಪುರ ಮತ್ತು ಸಹಚರರ ವಿರುದ್ಧ 800 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು: ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಅಭಿನವ ಹಾಲಶ್ರೀ ಸೇರಿದಂತೆ ಏಳು ಜನರ ವಿರುದ್ಧ ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಬುಧವಾರ  800 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡುವುದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪ ಅವರ ಮೇಲಿದೆ.

75 ಸಾಕ್ಷಿಗಳ ಹೇಳಿಕೆಗಳೊಂದಿಗೆ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಚೈತ್ರಾ ಅವರನ್ನು ಸೆಪ್ಟೆಂಬರ್ 13 ರಂದು ಬಂಧಿಸಲಾಗಿತ್ತು.

ಇದನ್ನೂ ಓದಿ: ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಸಂಸದ ಡಿ.ವಿ ಸದಾನಂದ ಗೌಡ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ದ್ವೇಷ ಭಾಷಣಗಳಿಗೆ ಚೈತ್ರಾ ಕುಂದಾಪುರ ಕುಖ್ಯಾತಿಯಾಗಿದ್ದಾರೆ. ಅದಾಗ್ಯೂ ತನ್ನ ವಿರುದ್ಧ ಎಫ್‌ಐಆರ್ ದಾಖಲಾದಾಗ ಚೈತ್ರ ಮುಸ್ಲಿಂ ಮಹಿಳೆಯೊಬ್ಬರ ನಿವಾಸದಲ್ಲಿ ಆಶ್ರಯ ಪಡೆದಿದ್ದರು ಎಂದು ವರದಿಯಾಗಿದೆ.

“ಗೋವಿಂದ ಬಾಬು ಪೂಜಾರಿ ಮತ್ತು ಚೈತ್ರಾ ಕುಂದಾಪುರ ನಡುವಿನ ಹಣಕಾಸಿನ ವಹಿವಾಟು ಜುಲೈ 2022 ರಲ್ಲಿ ಪ್ರಾರಂಭವಾಗಿದ್ದು, ಅದು ಮಾರ್ಚ್ 2023 ರವರೆಗೆ ನಡೆದಿತ್ತು” ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ. ಈ ವೇಳೆ ಚೈತ್ರಾ ಅವರು ವಿಶ್ವನಾಥ್ ಎಂಬ ಆರ್‌ಎಸ್‌ಎಸ್ ನಾಯಕನ ಬಳಿ ಹಣ ನೀಡಿದ್ದಾಗಿ ಪ್ರತಿಪಾದಿಸಿದಾಗ ದೂರುದಾರ ಗೋವಿಂದ ಅವರಿಗೆ ತಾನು ವಂಚನೆಗೆ ಒಳಗಾಗಿದ್ದು ತಿಳಿದಿದೆ.

ಇದನ್ನೂ ಓದಿ: ಹರಿಯಾಣ| ನಕಲಿ ಮದ್ಯ ಸೇವನೆ ಶಂಕೆ; 6 ಮಂದಿ ಸಾವು

ವಿಶ್ವನಾಥ್ ಎಂಬ ವ್ಯಕ್ತಿಯೆ ಇಲ್ಲ ಎಂದು ತಿಳಿದ ನಂತರ ಗೋವಿಂದ ಬಾಬು ಅವರು ತನ್ನ ಹಣವನ್ನು ಹಿಂದಿರುಗಿಸುವಂತೆ ಚೈತ್ರ ಅವರಿಗೆ ಬೆನ್ನು ಬಿದ್ದಿದ್ದರು. ಈ ವೇಳೆ ಚೈತ್ರಾ ಮತ್ತು ಅವರ ಸಹಚರ ಗಗನ್ ಕಡೂರ್ ಕಣ್ಮರೆಯಾಗಿದ್ದರು. ಇದರ ನಂತರ ಗೋಂವಿದ ಬಾಬು ಅವರು ಪೊಲೀಸ್ ದೂರು ನೀಡಿದ್ದಾರೆ. ಗಗನ್ ಕಡೂರ್ ಅವರು ಚಿಕ್ಕಮಗಳೂರು ಬಿಜೆಪಿಯ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದಾರೆ.

ವಿಜಯನಗರದ ಹಾಲಶ್ರೀ ಮಠದ ಪೀಠಾಧಿಪತಿ ಅಭಿನವ ಹಾಲಶ್ರೀ ಎಂಬಾತನಿಗೆ 1.5 ಕೋಟಿ ರೂಪಾಯಿ ಹಸ್ತಾಂತರಿಸಿರುವುದಾಗಿ ದೂರುದಾರ ಗೋವಿಂದ ಬಾನು ಅವರು ತಿಳಿಸಿದ್ದಾರೆ. ತಲೆಮರೆಸಿಕೊಂಡಿದ್ದ ಈತನನ್ನು ಒಂದು ವಾರದ ನಂತರ ಒಡಿಶಾದ ಕಟಕ್ ಬಳಿ ರಾಜ್ಯ ಪೊಲೀಸರು ಬಂಧಿಸಿದ್ದರು.

ವಿಡಿಯೊ ನೋಡಿ: ಹಾಲಿ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯಕೇಂದ್ರ ಸರ್ಕಾರದ ಉತ್ಸುಕತೆಗೆ ಕಾರಣವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *