ಎರ್ನಾಕುಲಂ: ಕೇರಳ ರಾಜ್ಯದ ಎರ್ನಾಕುಲಂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೃಕ್ಕಾಕರ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಡಾ. ಜೋ ಜೋಸೆಫ್‌ರವರುಎಡರಂಗದ ಅಭ್ಯರ್ಥಿಯಾಗಿ ಸಿಪಿಐ(ಎಂ) ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಖ್ಯಾತ ಹೃದ್ರೋಗ ತಜ್ಞ ಡಾ. ಜೋ ಜೋಸೆಫ್ ಇಂದು(ಮೇ 9) ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಯೊಂದಿಗೆ ಅಪಾರ ಪ್ರಮಾಣದ ಬೆಂಬಲಿಗರು ಮತ್ತು ಸಿಪಿಐ(ಎಂ) ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಪಿ. ರಾಜು ಮತ್ತು ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎಮ್ ಸ್ವರಾಜ್ ಮತ್ತಿತರರು ಜೊತೆಗೂಡಿದ್ದರು.
ದಿವಂಗತ ಶಾಸಕ ಪಿ ಟಿ ಥಾಮಸ್ ನಿಧನ ಹೊಂದಿದ್ದರಿಂದ ಉಪಚುನಾವಣೆ ಘೋಷಣೆಯಾಗಿದೆ. ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್‌ಡಿಎಫ್ ಪ್ರಬಲ ಪೈಪೋಟಿಯನ್ನು ನೀಡಿದ್ದು, ಡಾ. ಜೋ ಜೋಸೆಫ್ ಅವರನ್ನು ಕಣಕ್ಕೆ ಇಳಿಸಿದೆ. ಜೋ ಜೋಸೆಫ್ ಕೇವಲ ಹೃದ್ರೋಗ ತಜ್ಞರಲ್ಲ, ಎರ್ನಾಕುಲಂನ ಸಾಮಾಜಿಕ ವಲಯಗಳಲ್ಲಿ ಪರಿಚಿತ ವ್ಯಕ್ತಿಯೂ ಹೌದು, ಹಾಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಎಡರಂಗ ಗೆಲುವಿನ ನೀರಿಕ್ಷೆಯನ್ನು ಹೊಂದಿದೆ.