ದಾವಣಗೆರೆ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಇಬ್ಬರು ಯುವತಿಯರು ಒಬ್ಬ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಕ್ಷ್ಮೀ ಸಾಗರದಲ್ಲಿ ನಡೆದಿದೆ.
ಲಕ್ಷ್ಮೀಸಾಗರ ಗ್ರಾಮದ 28 ವರ್ಷದ ವಿವಾಹಿತೆ ದೀಪಾ, 19 ವರ್ಷದ ಚಂದನ, 33 ವರ್ಷದ ದಿವ್ಯ ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ಇಂದು ಎಂದಿನಂತೆ ಗ್ರಾಮದ ಹೊರ ಕೆರೆಯಲ್ಲಿ ಬಟ್ಟೆ ತೊಳೆಯಲು ಮೂವರು ಹೋಗಿದ್ದು ಬಟ್ಟೆ ತೊಳೆದ ನಂತರ ನಿಂತು ಮಾತನಾಡುತ್ತಿದ್ದಾಗ ಚಂದನ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾಳೆ.
ಇದನ್ನು ಓದಿ:ಖೋಟಾನೋಟು ದಂಧೆಯ ಅಡ್ಡೆ ಮೇಲೆ ಪೊಲೀಸರು ದಾಳಿ; ನಾಲ್ವರ ಬಂಧನ
ಆಕೆಯನ್ನು ರಕ್ಷಣೆ ಮಾಡಲು ದೀಪಾ, ಹಾಗೂ ದಿವ್ಯ ಹೋಗಿದ್ದು, ಮೂರು ಜನರಿಗೆ ಈಜು ಬಾರದ ಹಿನ್ನಲೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಲ್ಲದೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ದರಿಂದ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ಇದು ಕೂಡ ಈ ಮಹಿಳೆಯರು ಸಾವನ್ನಪ್ಪಲು ಕಾರಣ ಎಂದು ಅರೋಪ ಕೇಳಿ ಬರುತ್ತಿದೆ.
ಚನ್ನಗಿರಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಕುಮಾರ್ ಮತ್ತು ಸಿಬ್ಬಂದಿ ಆಗಮಿಸಿ ಶವಗಳನ್ನು ಮೇಲಕ್ಕೆತ್ತಿದ್ದಾರೆ, ಸ್ಥಳಕ್ಕೆ ತಹಶೀಲ್ದಾರ್ ಎನ್.ಜೆ. ನಾಗರಾಜ್, ಇನ್ಸ್‌ಪೆಕ್ಟರ್ ರವೀಶ್ ಕೆ ಎನ್. ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಇದನ್ನು ಓದಿ: ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ