ಮುಂಬೈ : ಟ್ರಸ್ಟ್‌ನ ಹಣ ದುರುಪಯೋಗ ಹಾಗೂ ಮೌಢ್ಯತೆಯಲ್ಲಿ ಭಾಗಿಯಾಗಿದ್ದು ಎಂಬ ಆರೋಪದ ಮೇಲೆ ಮೂರು ಜನ ಹಾಲಿ ನ್ಯಾಯಾಧೀಶರನ್ನು ಬಂಧಿಸುವ ಸಾಧ್ಯತೆ ಇದೆ.
ಈ ಮೂವರೂ ಹತ್ತು ವರ್ಷಗಳ ಹಿಂದೆ ತಾವು ಟ್ರಸ್ಟಿಗಳಾಗಿದ್ದ ದೇವಸ್ಥಾನವೊಂದರಲ್ಲಿ ಮಾಡಿದ್ದರೆನ್ನಲಾದ ಮೌಢ್ಯ ಆಚರಣೆ ಹಾಗು ಅದರ ಹೆಸರಲ್ಲಿ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ದುಡ್ಡು ಗುಳುಂ ಮಾಡಿದ ವಿಚಿತ್ರ ಹಾಗು ಗಂಭೀರ ಆರೋಪ ಎದುರಿಸುತ್ತಿದ್ದಾರೆ.
2019ರಲ್ಲಿ ನಾಮದೇವ್ ಗರಾದ್ ಅವರು ಬಾಂಬೆ ಹೂಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ ಟ್ರಸ್ಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕ್ರಿಮಿನಲ್ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ನಾಮದೇವ್ ಗರಾದ್ ಎಂಬುವರು ಭಾರತೀಯ ಸಂಡ ಸಂಹಿತೆ ಮತ್ತು ಮಹಾರಾಷ್ಟ್ರದ ಮಾನವ ಬಲಿ ಮತ್ತು ಇತರೆ ಅಮಾನವೀ, ದುಷ್ಟ ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ 2013ರ ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ನಿತಿನ್ ತ್ರಿಭುವನ್ ಅವರು ಈ ಕಾಯ್ದೆಯು ಪ್ರಕರಣ ನಡೆದ ಮೂರು ವರ್ಷಗಳ ನಂತರ ಜಾರಿಗೆ ಬಂದಿದ್ದು ಇದನ್ನು ತಿರಸ್ಕರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಎನ್.ಎಲ್.ಕೇಲ್ ಅವರು ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಆರೋಪಿಗಳ ವಿರುದ್ಧ ಇರುವ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ ಎಂದು ಗಮನಿಸಿದ ನ್ಯಾಯಾಲಯವು ತ್ರಿಭುವನ್ ಅವರ ಅರ್ಜಿಯನ್ನು ತಿರಸ್ಕರಿಸಿದರು.
ಹಾಲಿ ಮೂರು ಜನ ನ್ಯಾಯಾಧೀಶರಲ್ಲಿ ಒಬ್ಬರಾದ ನಿತಿನ್ ತ್ರಿಭುವನ್ ತಮ್ಮನ್ನು ಬಂಧನ ಮಾಡಬಾರದೆಂದು ಮತ್ತೊಂದು ಸೆಷನ್ಸ್ ನ್ಯಾಯಾಲಯದಲ್ಲಿ ತುರ್ತು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಮಾರ್ಚ್ 05ರಂದು ಅಹಮದ್‌ನಗರ ಸೆಷನ್ಸ್ ನ್ಯಾಯಾಲಯದ ಆದೇಶ ಪಡೆದ ಪಥಾರ್ಡಿ ಪೊಲೀಸರು, ಆರೋಪಿಗಳನ್ನು ಬಂಧಿಸಲು ಹೈಕೋರ್ಟ್ ಮತ್ತು ಇತರ ಉನ್ನತ ಅಧಿಕಾರಿಗಳ ಆದೇಶಕ್ಕಾಗಿ ಕಾಯಬೇಕಾಗಿದೆ. ಯಾವುದೇ ಪ್ರಕರಣದಲ್ಲಿ ನ್ಯಾಯಾಧೀಶರನ್ನು ಬಂಧಿಸಬೇಕಾಗಿ ಬಂದಲ್ಲಿ ಕ್ರಿಮಿನಲ್ ಪ್ರೋಸೀಜರ್ ಸಂಹಿತೆಯ ಸೆಕ್ಷನ್ 197ರ ಅಡಿಯಲ್ಲಿ ಅನುಮತಿ ಪಡೆಯಬೇಕಾಗುತ್ತದೆ.
ತ್ರಿಭುವನ್ ಅವರು ಅಹ್ಮದ್‍ನಗರ್ ಜಿಲ್ಲೆಯ ಮೊಹ್ತಾ ದೇವಳದ ಶ್ರೀ ಜಗದಂಬಾ ದೇವಿ ಸಾರ್ವಜನಿಕ ಟ್ರಸ್ಟ್ ದೇವಸ್ಥಾನದ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ, ನಾಂದೇಡ್ ಜಿಲ್ಲೆಯ ಕಂಧರ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ಸೇವೆಯಲ್ಲಿದ್ದಾರೆ. ಟ್ರಸ್ಟಿನ ಇತರ ಸದಸ್ಯರ ಪೈಕಿ ಅಹ್ಮದ್‍ನಗರ ಮುಖ್ಯ ನ್ಯಾಯಾಧೀಶ ನಾಗೇಶ್ ನವ್ಕರ್ ಹಾಗೂ ಇನ್ನೊಬ್ಬ ನ್ಯಾಯಾಧೀಶರಿದ್ದರು.
ಪ್ರತಿ ವರ್ಷ ಈ ಸ್ಥಳಕ್ಕೆ ಲಕ್ಷಾಂತರ ಜನತೆ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ದೇವಸ್ಥಾನವು ಹಲವು ವರ್ಷಗಳಿಂದ ಒಂದಲ್ಲೊಂದು ವಿಷಯದ ಕುರಿತು ವಿವಾದದಲ್ಲಿರುತ್ತದೆ. ಭಾರೀ ಅಕ್ರಮ ಮತ್ತು ಹಣದ ದುರುಪಯೋಗದ ಕುರಿತು ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಸಾಕಷ್ಟು ಚರ್ಚೆಯೂ ಸಹ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಧವ್ ಮತ್ತು ಟ್ರಸ್ಟ್ ಸದಸ್ಯ ಸಂದೀಪ್ ಪಾಲ್ವೆಯವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ಪ್ರಕರಣದ ಹಿನ್ನೆಲೆ ಪಥ್ರಾಡಿ ತಾಲೂಕಿನ ಮೊಹೊಟೆ ಗ್ರಾಮದಲ್ಲಿರುವ ಶ್ರೀ ಜಗದಾಂಬ ದೇವಿ ಸಾರ್ವಜನಿಕ ಟ್ರಸ್ಟ್ ನಲ್ಲಿ ಟ್ರಸ್ಟಿಯಾಗಿ ನಿತಿನ್ ತ್ರಿಭುವನ್ ಸಹ ಇದ್ದರು. ಟ್ರಸ್ಟಿಗಳ ಸಭೆಯಲ್ಲಿ ಸೆಪ್ಟಂಬರ್ 12, 2010 ಮತ್ತು ಡಿಸೆಂಬರ್ 12, 2010ರಂದು ಅಗೀಕರಿಸಲ್ಪಟ್ಟ ನಿರ್ಣಯಗಳಾಗಿದೆ.
ಸ್ಥಳೀಯ ‘ದೇವಮಾನವ’ ಪ್ರದೀಪ್ ಜಾಧವ್ ಎಂಬಾತ 2 ಕೆಜಿ ಚಿನ್ನದ ಆಯುಧ ತಯಾರಿಸುವಂತೆ ದೇವಳದ ಶ್ರೀ ಜಗದಂಬಾ ದೇವಿ ಸಾರ್ವಜನಿಕ ಟ್ರಸ್ಟ್ ಗೆ ಸೂಚಿಸಿದ್ದನೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಚಿನ್ನವನ್ನು ದೇವಸ್ಥಾನದಡಿ ಹೂತು ಹಾಕಲು ಇನ್ನೊಂದು ರೂ 25 ಲಕ್ಷ ಖರ್ಚು ಮಾಡಲಾಗಿತ್ತು.
ಘಟನೆ 2010ರಲ್ಲಿ ನಡೆದಿದ್ದರೂ 2017ರಲ್ಲಿ ಮರಾಠಿ ದೈನಿಕ ‘ಲೋಕಮತ್’ ಈ ಕುರಿತು ವರದಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದು ನಾಮದೇವ್ ಗರದ್ ಎಂಬವರು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠಕ್ಕೆ ಅಪೀಲು ಸಲ್ಲಿಸಿ ಟ್ರಸ್ಟ್ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿದ್ದರು.ಈ ಪ್ರಕರಣ 2010ರಲ್ಲಿ ನಡೆದಿದ್ದರೂ 2017ರಲ್ಲಿ ಸ್ಥಳೀಯ ಮರಾಠಿ ದಿನಪತ್ರಿಕೆ ಲೋಕಮತದಲ್ಲಿ ಸರಣಿ ವರದಿಗಳು ಪ್ರಕಟವಾಗಿತ್ತು. ದಿವಂಗತ ನರೇಂದ್ರ ದಾಭೋಲ್ಕರ್ ಸ್ಥಾಪಿಸಿದ್ದ ಅಂಧಶ್ರದ್ಧ ನಿರ್ಮೂಲನ್ ಸಮಿತಿ (ಎಎನ್‌ಐಎಸ್) ಟ್ರಸ್ಟ್ ಕಾಯ್ದೆಗಳ ಆಯುಕ್ತಾಲಯಕ್ಕೆ ಕ್ರಮದ ಕುರಿತು ಹೆಚ್ಚಿನ ಸಾಕ್ಷ್ಯಗಳನ್ನು ಒದಗಿಸಿದರು. ಆದರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.