ಬೆಂಗಳೂರು: ರಾಜ್ಯದಲ್ಲಿ ಉಗ್ರರಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಮೂವರನ್ನು ಎನ್‌ಐಎ ಬಂಧಿಸಿದೆ. ಪರಪ್ಪನ ಅಗ್ರಹಾರದ ಎಎಸ್‌ಐ ಚಾಂದ್ ಪಾಷಾ ಸಹ ಬಂಧನಕ್ಕೊಳಗಾಗಿದ್ದು, ಕರ್ತವ್ಯ ನಿರ್ವಹಿಸಬೇಕಾದ ಆರಕ್ಷಕನೇ ಶಂಕಿತ ಉಗ್ರನಾಗಿ ಬಂಧನಕ್ಕೊಳಗಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ನೆರವು
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಎಂಬಾತನನ್ನೂ ಸಹ ಬಂಧಿಸಲಾಗಿದ್ದು, ನಾಪತ್ತೆಯಾದ ಮತ್ತೋರ್ವ ಆರೋಪಿ ಜುನೈದ್ ತಲೆ ಮರೆಸಿಕೊಂಡಿದ್ದು, ಆತನ ತಾಯಿ ಆನಿಸ್ ಫಾತಿಮಾ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು| 50 ಹೊಸ ಮೌಲಾನಾ ಆಜಾದ್ ಮಾದರಿ ಶಾಲೆ ಪ್ರಾರಂಭಿಸಲು ಮಂಜೂರಾತಿ
ಬೆಂಗಳೂರು ಹಾಗೂ ಕೋಲಾರದ ಐದು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ವಾಕಿ ಟಾಕಿ ಹಾಗೂ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.
ಉಗ್ರರಿಗೆ ಬೇಕಾದ ನೆರವನ್ನು ನೀಡಿದ್ದ ಗಂಭೀರ ಆರೋಪ ಈ ಮೂವರ ಮೇಲಿದ್ದು, ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ತನಿಖೆಯಲ್ಲಿ ಮತ್ತಷ್ಟು ಮಾಹಿತಿಯನ್ನು ಹೊರತರಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳಿಬ್ಬರು ಉಗ್ರರ ಜೊತೆ ನಂಟು ಹೊಂದಿದ್ದಾರೆ ಎಂಬ ವಿಷಯ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ನೋಡಿ: ಜುಲೈ 09 ರಂದು ಕಾರ್ಮಿಕರ ಮುಷ್ಕರ | ಮುಷ್ಕರಕ್ಕೆ ಕಾರಣಗಳೇನು? – ವಿಶ್ಲೇಷಣೆ ಎಸ್ ವರಲಕ್ಷ್ಮಿ Janashakthi Media
