ಹಣದುಬ್ಬರದ ಅಡಿಯಲ್ಲಿ ನರಳುತ್ತಿರುವವರ ಮೇಲೆ ಈಗ ಅನಿಲ ಸಿಲಿಂಡರ್‌ಗಳ ಬೆಲೆ ಏರಿಕೆಯ ಹೊರೆ – ಪ್ರತಿಭಟಿಸಲು ಸಿಪಿಐ(ಎಂ) ಕರೆ

ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಅಬಕಾರಿ ಸುಂಕ ವಿಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.

ಕೇಂದ್ರ ಸರ್ಕಾರವು ಸಾಮಾನ್ಯ ಮತ್ತು ಸಬ್ಸಿಡಿ ವಿಧಗಳೆರಡಕ್ಕೂ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 50 ರೂ. ಹೆಚ್ಚಳವನ್ನು ಘೋಷಿಸಿದ್ದು, ಜನರ ಮೇಲೆ ಸುಮಾರು 7,000 ಕೋಟಿ ರೂ.ಗಳಷ್ಟು ಹೊರೆ ಹಾಕಲಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಸುಪ್ರೀಂ ಕೋರ್ಟ್‌

ಇದಲ್ಲದೆ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ನ ವಿಶೇಷ ಅಬಕಾರಿ ಸುಂಕವನ್ನು 32,000 ಕೋಟಿ ರೂ.ಗಳಷ್ಟು ಹೆಚ್ಚಿಸಿದೆ.

ಅನಿಲ ಬೆಲೆಗಳ ಏರಿಕೆಯು ಹಣದುಬ್ಬರದ ಹೊರೆಯಿಂದಾಗಿ ಈಗಾಗಲೇ ನಲುಗಿರುವ ಜನರ ಜೀವನದ ಮೇಲೆ ಇನ್ನಷ್ಟು ಹೊರೆ ಹಾಕುವ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ:ರಾಜ್ಯಪಾಲರಿಗೆ ಮಸೂದೆಗಳನ್ನು ತಡೆಯುವ ಅಧಿಕಾರವಿಲ್ಲ – ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಮತ್ತು ಅನಿಲ ಬೆಲೆಗಳು ಕುಸಿಯುತ್ತಿರುವ ಪ್ರಯೋಜನಗಳನ್ನು ಜನರಿಗೆ ವರ್ಗಾಯಿಸುವ ಬದಲು, ಸರ್ಕಾರವು ಹೆಚ್ಚುವರಿ ಹೊರೆಗಳನ್ನು ಹೇರುತ್ತಿದೆ. ವಿಶೇಷ ಅಬಕಾರಿ ಸುಂಕದ ಹೆಸರಿನಲ್ಲಿ, ಒಕ್ಕೂಟ ತತ್ವಗಳನ್ನು ಉಲ್ಲಂಘಿಸಿ ಎಲ್ಲಾ ಸುಂಕ ಆದಾಯ ತನಗೇ ದಕ್ಕುವಂತೆ ಸಂಗ್ರಹಿಸ ಬಯಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಸರ್ಕಾರವು ತಕ್ಷಣವೇ ಬೆಲೆ -ಏರಿಕೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ ಮತ್ತು ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಪ್ರತಿಭಟಿಸಲು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *