ಬೆಂಗಳೂರು: 73 ವರ್ಷಗಳ ನಂತರ ಥಾಮಸ್ ಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ಬ್ಯಾಡ್ಮಿಂಟನ್ ತಂಡದಲ್ಲಿ ಒಬ್ಬರಾದ ಕನ್ನಡಿಗ ಲಕ್ಷ್ಯ ಸೇನ್‌ಗೆ, 5 ಲಕ್ಷ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತ ತಂಡದ ಆಟಗಾರ. ಕನ್ನಡದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅವರಿಗೆ, ಕರ್ನಾಟಕ ಸರ್ಕಾರ 5 ಲಕ್ಷ ರೂ.ಗಳನ್ನು ಬಹುಮಾನವನ್ನಾಗಿ ಘೋಷಿಸಿದೆ. ಮಿನಿ ಒಲಿಂಪಿಕ್ಸ್ ಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡಿಗ ಲಕ್ಷ್ಯ ಸೇನ್ ಅವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಥಾಮಸ್ ಕಪ್ ಕೀರಿಟವನ್ನ ತನ್ನದಾಗಿಸಿಕೊಂಡು ಇತಿಹಾಸ ದಾಖಲಿಸಿದ ಭಾರತದ ತಂಡದಲ್ಲಿ, ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಲ್ಲಿ ಲಕ್ಷ್ಯ ಸೇನ್ ಕೂಡ ಒಬ್ಬರು. ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರು ಮೊದಲ ಸಿಂಗಲ್ಸ್ ನಲ್ಲಿ ಆ್ಯಂಟನಿ ಜಿಂಟಿಂಗ್ ವಿರುದ್ಧ 8-21, 21-17,21-16 ಅಂಕಗಳೊಂದಿಗೆ ಗೆಲುವು ದಾಖಲಿಸಿದ್ದು. ಭಾರತ ಜೊತೆ ರಾಜ್ಯದ ಕೀರ್ಥಿ ಪತಾಕೆಯನನು ಎತ್ತಿಹಿಡಿದ ಲಕ್ಷ್ಯ ಸೇನ್‌ಗೆ ಸಿ ಎಂ ಬೊಮ್ಮಾಯಿ ಅವರು ಬಹುಮಾನ ನೀಡುವುದರೊಂದಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.