ಕ್ರಿಕೆಟ್‌ ಪಂದ್ಯದ ಮಧ್ಯೆ ಕೊಹ್ಲಿ ಮಾಡಿದ ಕೆಲಸವೊಂದರ ಫೋಟೋ ವೈರಲ್‌

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ವಿರಾಟ್‌ ಕೊಹ್ಲಿ ಒಬ್ಬರು ಸ್ಟಾರ್‌ ಆಟಗಾರ ಎಂಬುದು ಎಲ್ಲಾರಿಗೂ ತಿಳಿದೇ ಇದೆ. ಹಾಗೇ, ಮೈದಾನದಲ್ಲಿ ಅವರು ಕೆಲವು ವರ್ತನೆಗಳು, ನಡವಳಿಕೆಗಳು ಸದಾ ಸುದ್ದಿಯಾಗುತ್ತವೆ..ಫೋಟೋ-ವಿಡಿಯೊಗಳೂ ವೈರಲ್‌ ಆಗುತ್ತವೆ. ಇಂದು ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಪಂದ್ಯ ಭಾರತ-ಪಾಕಿಸ್ತಾನ ಮಧ್ಯೆ ನಡೆಯುತ್ತಿದೆ.

ಈ ಪಂದ್ಯದ ಮಧ್ಯೆ ಕೊಹ್ಲಿ ಮಾಡಿದ ಕೆಲಸವೊಂದರ ಫೋಟೋ ಸಾಕಷ್ಟು ವೈರಲ್‌ ಆಗುತ್ತಿದ್ದೂ, ಸೋಷಿಯಲ್‌ ಮೀಡಿಯಾದಲ್ಲಿ ಕೊಹ್ಲಿಯನ್ನ ಅನೇಕರು ಹೊಗಳುತ್ತಿದ್ದಾರೆ.

ಇದನ್ನೂ ಓದಿ: ದುಡಿಯುವ ಬಡಜನರ ಬಗ್ಗೆ ನಾಚಿಕೆಗೆಟ್ಟ ಸಿನಿಕತನದ ಬಜೆಟ್

ಕೊಹ್ಲಿ ಮಾಡಿದ್ದೇನು?

ಇಂದು ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿದೆ. ಈ ವೇಳೆ ಬ್ಯಾಟರ್‌ ನಸೀಮ್‌ ಶಾ ಅವರು ನಾನ್‌ ಸ್ಟ್ರೈಕರ್‌ ಬದಿಯಲ್ಲಿ ನಿಂತಿದ್ದರು. ಅವರ ಶೂ ಲೇಸ್‌ಗಳು ಬಿಚ್ಚಿದ್ದವು. ಆಗ ಅಲ್ಲಿಯೇ ಇದ್ದ ವಿರಾಟ್‌ ಕೊಹ್ಲಿ ಬಳಿ ಅವರು ತಮ್ಮ ಶೂಲೇಸ್‌ ಕಟ್ಟಲು ಸಹಾಯ ಮಾಡುವಂತೆ ಮನವಿ ಮಾಡಿದರು. ಆಗ ಕೊಹ್ಲಿ ಒಂದು ಕ್ಷಣವೂ ಹಿಂಜರಿಯಲಿಲ್ಲ. ನಾನು ಕಟ್ಟೋದಿಲ್ಲ ಎಂದೂ ಹೇಳಿಲ್ಲ. ಕೂಡಲೇ ತಾವು ಕುಳಿತು ನಸೀಮ್‌ ಅವರ ಶೂ ಲೇಸ್‌ ಕಟ್ಟಿದ್ದಾರೆ. ಇದು ಕ್ಯಾಮರಾಮೆನ್‌ಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಫೋಟೋ ಸದ್ಯ ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ಭಾರತೀಯರು ಮಾತ್ರವಲ್ಲ, ಪಾಕಿಸ್ತಾನದ ಜನರೂ ಕೂಡ ವಿರಾಟ್‌ ಕೊಹ್ಲಿ ನಡವಳಿಕೆಯನ್ನ ಬಾಯ್ತುಂಬ ಹೊಗಳುತ್ತಿದ್ದಾರೆ.

ಇದನ್ನೂ ನೋಡಿ: ಉಳಿಮೆ ಮಾಡುತ್ತಿದ್ದ ಭೂಮಿಯಲ್ಲಿ ಗುಂಡಿ ತೋಡಿದ ಅರಣ್ಯ ಇಲಾಖೆ : ಗುಂಡಿ ಮುಚ್ಚಿ ಆಕ್ರೋಶ ವ್ಯಕ್ತ ಪಡಿಸಿದ ರೈತರು

Donate Janashakthi Media

Leave a Reply

Your email address will not be published. Required fields are marked *