ಕಾಂಗ್ರೆಸ್‌ನ ಶಶಿತರೂರ್‌ ಪ್ರತಿನಿಧಿಸುವ ತಿರುವನಂತಪುರಂ ಕ್ಷೇತ್ರಕ್ಕೆ ನಿರ್ಮಲಾ ಸೀತಾರಾಮನ್ ಅಭ್ಯರ್ಥಿ; ಕೇರಳ ಬಿಜೆಪಿ ಒಲವು

ತಿರುವನಂತಪುರಂ: ರಾಜ್ಯದ ಬಹುತೇಕ ಲೋಕಸಭಾ ಸ್ಥಾನಗಳಲ್ಲಿ ಅಭ್ಯರ್ಥಿ ಯಾರೆಂಬುದರ ಬಗ್ಗೆ ಕೇರಳ ಬಿಜೆಪಿ ನಾಯಕತ್ವಕ್ಕೆ ಇನ್ನೂ ಯಾವುದೇ ಸುಳಿವು ಇಲ್ಲದಿದ್ದರೂ, ತಿರುವನಂತಪುರ ಕ್ಷೇತ್ರಕ್ಕೆ ಪಕ್ಷದ ರಾಷ್ಟ್ರೀಯ ನಾಯಕತ್ವವು ನಡೆಸಿದ ಆಂತರಿಕ ಸಮೀಕ್ಷೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪರವಾಗಿದೆ ಎಂದು TNIE ವರದಿ ಹೇಳಿದೆ. ಶಶಿತರೂರ್‌

ಬಿಜೆಪಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರು ಮತ್ತು ತಿರುವನಂತಪುರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಕಾಂಗ್ರೆಸ್‌ನ ಶಶಿತರೂರ್‌ ಅವರ ಕ್ಷೇತ್ರವಾಗಿರುವ ತಿರುವನಂತಪುರಂ ಕ್ಷೇತ್ರಕ್ಕೆ ಬಿಜೆಪಿಯು ಹಣಕಾಸು ಸಚಿವರನ್ನು ಕಣಕ್ಕಿಳಿಸಬೇಕು ಎಂದು ಸೀತಾರಾಮನ್ ಒಲವು ಹೊಂದಿರುವವರು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಚಲೋ ದೆಹಲಿ | ರೈತ ಮುಖಂಡರ ಮೇಲೆ ಎನ್‌ಎಸ್‌ಎ ಜಾರಿ ಮಾಡಲ್ಲ ಎಂದ ಹರಿಯಾಣ ಸರ್ಕಾರ

ಅದಾಗ್ಯೂ, ನಿರ್ಮಾ ಅವರ ನಂತರ ಎರಡನೇ ಸ್ಥಾನದಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಇದ್ದಾರೆ. ನಟ ಸುರೇಶ್ ಗೋಪಿ, ಕುಮ್ಮನಂ ರಾಜಶೇಖರನ್, ನಟ ಮೋಹನ್ ಲಾಲ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ವಿವಿ ರಾಜೇಶ್ ಅವರ ಹೆಸರುಗಳು ಕೂಡಾ ಪ್ರಸ್ತಾಪವಾಗಿವೆ.

ಈ ನಡುವೆ, ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗುವುದಾದರೆ ಪಕ್ಷದ ಚುನಾವಣಾ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಾಜ್ಯ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ನಂಬಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ರಾಜೀವ್ ಚಂದ್ರಶೇಖರ್ ಪ್ರಯತ್ನ ನಡೆಸುತ್ತಿದ್ದರೂ, ಅಲ್ಲಿ ಕೂಡಾ ಅವರ ಉಮೇದುವಾರಿಕೆಗೆ ಸ್ವಲ್ಪ ವಿರೋಧವಿದೆ.ಶಶಿತರೂರ್‌

ಹೆಚ್ಚಿನ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ರಾಷ್ಟ್ರೀಯ ನಾಯಕತ್ವವು ಇನ್ನೂ ನಿರ್ಧರಿಸಿಲ್ಲವಾದರೂ, ಅಚ್ಚರಿಗಾಗಿ ಕಾಯುವಂತೆ ಕೇರಳ ಬಿಜೆಪಿಗೆ ಹೇಳಲಾಗಿದೆ ಎಂದು ವರದಿಯಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ರಾಷ್ಟ್ರೀಯ ಸಂಸದೀಯ ಮಂಡಳಿ ಸಭೆಯು ನವದೆಹಲಿಯಲ್ಲಿ ಶನಿವಾರ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಪಾಲಿಕೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಬಿಲ್ಕೀಸ್ ಬಾನೋ ಪ್ರಕರಣದ ಮತ್ತೊಬ್ಬ ಅಪರಾಧಿಗೆ ಪೆರೋಲ್ ನೀಡಿದ ಗುಜರಾತ್ ಹೈಕೋರ್ಟ್

ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ‘ಎ’ ವರ್ಗದ ಕ್ಷೇತ್ರಗಳು ಎಂದು ಬಿಜೆಪಿ ಪಟ್ಟಿಮಾಡಿರುವ ಆರು ಕ್ಷೇತ್ರಗಲ್ಲಿ ಮಾವೇಲಿಕ್ಕರ ಮತ್ತು ಕಾಸರಗೋಡಿನಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ. ಅಟ್ಟಿಂಗಲ್‌ನಲ್ಲಿ ವಿ. ಮುರಳೀಧರನ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ತ್ರಿಶೂರ್ ಮತ್ತು ಪಾಲಕ್ಕಾಡ್‌ನಲ್ಲಿ ಕ್ರಮವಾಗಿ ಸುರೇಶ್ ಗೋಪಿ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಕೃಷ್ಣ ಕುಮಾರ್ ಅವರು ಅಭ್ಯರ್ಥಿಗಳಾಗಿದ್ದಾರೆ.

ಕೋಝಿಕ್ಕೋಡ್‌ನಲ್ಲಿ ರಾಜ್ಯ ನಾಯಕತ್ವ ಶೋಭಾ ಸುರೇಂದ್ರನ್ ಅವರತ್ತ ವಾಲುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಈ ಬಾರಿ ಸ್ಪರ್ಧಿಸದಿರುವ ನಿರ್ಧಾರವನ್ನು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಭಾಷಿಕ ವಿಭಾಗದ ಅಭ್ಯರ್ಥಿಯ ಪ್ರತಿನಿಧಿಗಾಗಿ ಪಕ್ಷವು ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ವ್ಯಕ್ತಪಡಿಸಿರುವ ಹಿರಿಯ ನಾಯಕರ ವಿರುದ್ಧ ರಾಜ್ಯ ನಾಯಕತ್ವವೂ ಕಠಿಣ ನಿಲುವು ತಳೆದಿದೆ. ಮಲಬಾರ್ ಭಾಗದಲ್ಲಿ ಮಾಜಿ ಅಧ್ಯಕ್ಷ ಸಿ ಕೆ ಪದ್ಮನಾಭನ್ ಅವರ ಹೆಸರನ್ನು ಸೂಚಿಸಲಾಗಿದ್ದರೂ, ನಾಯಕತ್ವವು ಅವರ ವಯಸ್ಸನ್ನು ಉಲ್ಲೇಖಿಸಿ ಅದನ್ನು ತಳ್ಳಿಹಾಕಿತು. ಗೋವಾ ಗವರ್ನರ್ ಪಿ ಎಸ್ ಶ್ರೀಧರನ್ ಪಿಳ್ಳೈ ಅವರ ಹೆಸರು ಪಥನಂತಿಟ್ಟ ಕ್ಷೇತ್ರಕ್ಕಾಗಿ ಪ್ರಸ್ತಾಪಿಸಲಾಗಿದ್ದು, ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅವರು ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಪಿ.ಸಿ. ಜಾರ್ಜ್ ಪರವಾಗಿದ್ದಾರೆ ಎಂದು ವರದಿ ಹೇಳಿದೆ. ಇದೇ ಕ್ಷೇತ್ರಕ್ಕೆ ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಅವರ ಹೆಸರು ಕೂಡಾ ಚರ್ಚೆಯಾಗುತ್ತಿದೆ.

ಆದರೆ, ಕುಮ್ಮನಂ ಅವರನ್ನು ಕೊಲ್ಲಂನಿಂದ ಯುಡಿಎಫ್ ಪ್ರಬಲ ಎನ್ ಕೆ ಪ್ರೇಮಚಂದ್ರನ್ ಮತ್ತು ಎಲ್‌ಡಿಎಫ್‌ನ ಅಭ್ಯರ್ಥಿ ಎಂ ಮುಖೇಶ್ ವಿರುದ್ಧ ಸ್ಪರ್ಧಿಸಲು ರಾಜ್ಯ ಬಿಜೆಪಿ ಬಯಸಿದೆ. ಅದಾಗ್ಯೂ, ಕುಮ್ಮನಂ ಅವರು ಈ ಪ್ರಸ್ತಾಪಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ.

ವಿಡಿಯೊ ನೋಡಿ: ಮೈಸೂರು | ತೆರಿಗೆ ಪಾಲಿನಲ್ಲಿ ಕೇಂದ್ರದಿಂದ ಅನ್ಯಾಯ : ಕರ್ನಾಟಕ ಜನರಂಗದಿಂದ ಅಹೋರಾತ್ರಿ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *