ಬಿಹಾರ: ನೆನ್ನೆ ಸೋಮವಾರ ರಾಜ್ಯದ ಆರ್ರಾ ಪ್ರದೇಶದಲ್ಲಿರುವ ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್ನಲ್ಲಿ ಅಂದಾಜು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಬಿಹಾರ
ಇಲ್ಲಿನ ಅರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆಭರಣ ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಸೆರೆಯಾಗಿವೆ.ಇನ್ನು ಈ ಕುರಿತು ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು| ಬಡ ರೈತರಿಗೆ ಭೂ ಮಂಜೂರು ಮಾಡಲು ಸಭೆ; ಅರ್ಜಿ ವಿಲೇವಾರಿ
ಶೋರೂಮ್ ಮಾಲೀಕ ಕುಮಾರ್ ಮೃತ್ಯುಂಜಯ ಮಾಧ್ಯಮಗಳ ಜತೆ ಮಾತನಾಡಿದ್ದು, ‘ ದರೋಡೆಕೊರರು ನಗದು ಜತೆಗೆ ಚಿನ್ನಾಭರಣ, ಬಂಗಾರ ಸರಗಳು, ನೆಕ್ಲೇಸ್ ಮತ್ತು ಕೆಲ ವಜ್ರಗಳು ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 25 ಕೋಟಿ ರೂ. ಮೌಲ್ಯದಷ್ಟು ವಸ್ತುಗಳು ಕಳುವಾಗಿವೆ. ಅಲ್ಲದೆ, ಶೋರೂಮ್ನ ಕರೆಗೆ ಪೊಲೀಸರು ಮೊದಲು ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ.’
ಸಿಸಿಟಿವಿಯಲ್ಲಿ ಸೆರೆ
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ 8-9 ಜನರು ಒಳನುಗ್ಗಿ ಶೋರೂಮ್ ಒಳಗೆ ಇದ್ದ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಗನ್ ತೋರಿಸಿ ಬೆದರಿಸುತ್ತಿರುವುದು ಕಂಡುಬಂದಿದೆ. ನಂತರ ದರೋಡೆಕೋರರು ಕೌಂಟರ್‌ನಲ್ಲಿದ್ದ ನಗದು ಮತ್ತು ಹಲವಾರು ಆಭರಣಗಳನ್ನು ದೋಚಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ.
ಇದನ್ನೂ ನೋಡಿ: Karnataka Legislative Assembly Live Day 06 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ