– ಬಸು, ಬಳ್ಳಾರಿ.
ಕಳ್ಳರು ಬಂದರು ಸುಳ್ಳು ತಗೊಂಡು
ಎಚ್ಚೆತ್ತು ಕೊಳ್ಳಿರಿ ಜನರೆಲ್ಲ !
ಹೊಟ್ಟೆಗೆ ಹೊಡಿವರು, ರಕ್ತವ ಕುಡಿವರು
ಎದ್ದೇಳಿ ಸೆಣಸದೆ ಬದುಕಿಲ್ಲ !!
ಇಲ್ಲದ್ದು ಇದೆಯೆಂದು
ಇದ್ದದ್ದು ಇಲ್ಲವೆಂದು ಸಾರುವರೋ
ಸುಳ್ಳಿಗೆ ಗಂಧವ ಪೂಸುವರೋ,
ನಂಬಿಸಿ ಕುತ್ತಿಗೆ ಕೊಯ್ಯುವರೋ ?!
ಇವರು! ನಂಬಿಕೆ ವ್ಯಾಪಾರ ಮಾಡುವರೋ ?
ಹಿಂದಿನ ಜನುಮದ ಪಾಪವ ತೋರುತಾ
ಕೊಳ್ಳೆಯ ಹೊಡೆವರು ದಿನವೆಲ್ಲ!
ಹಿಂದಿನ ಮುಂದಿನ ಜನುಮಗಳಿಲ್ಲ
ಈಗಿನ ಜನುಮವೊಂದೆ ನಿಜವೆಂಬುವುದ ತಿಳಿರೆಲ್ಲಾ !!
ಪುರುಷನು ಮೇಲು ಮಹಿಳೆ ಕೀಳು ! ಜಾತಿ ವಿಜಾತಿ, ಮೇಲು ಕೀಳು !! ಧರ್ಮಾಚಾರದಲಿ ಶ್ರೇಷ್ಠ ಕನಿಷ್ಟ ಎಂಬುದಿಲ್ಲ ! ಇದು
ಮಾನವ ಸೃಷ್ಠಿ ತಿಳಿರೆಲ್ಲ ! ಇದು ವಂಚಕ ದೃಷ್ಠಿ ಬಿಡಿರೆಲ್ಲ !!
ಲೂಟಿಕೋರನು ರಕ್ಷಿಪನೆಂಬ ಬಣ್ಣದ ಮಾತ ನಂಬದಿರಿ !
ಎಂಜಲು ತಿನ್ನುತಾ,ಬಾಳನು ಸವೆಸುವ ಏಜೆಂಟರೆಂಬುದು ಮರೆಯದಿರಿ ! ಇವರು
ಏಜೆಂಟರೆಂಬುದು ಮರೆಯದಿರಿ.
ಹುಲಿಯನು ಕೊಲುವ
ಪುಣ್ಯಕೋಟಿ ಕಥೆ ನಂಬದಿರಿ !
ಹಿಂಡಾದ ಹಕ್ಕಿ, ಬಲೆಯೊಂದಿಗೆ ಪಾರಾದ ಕಥೆಯನು ನೆನಪಿಡಿರಿ !!