ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪೊಲಿಟ್ ಬ್ಯೂರೊ ಪತ್ರಿಕಾ ಹೇಳಿಕೆ
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಕೈದಿಗಳು ಮತ್ತು ಒತ್ತೆಯಾಳುಗಳ ವಿನಿಮಯಕ್ಕೆ ಅವಕಾಶ ನೀಡುವ ಕದನ ವಿರಾಮ ಜಾರಿಗೆ ಬಂದಿರುವ ‘ಶಾಂತಿ ಒಪ್ಪಂದ’ದ ಮೊದಲ ಹಂತದ ಅನುಷ್ಠಾನವನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪೊಲಿಟ್ ಬ್ಯೂರೋ ಸ್ವಾಗತಿಸುತ್ತದೆ.
ಇಸ್ರೇಲ್ ಹಿಂದಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿರುವುದನ್ನು ನಾವು ನೋಡಿದ್ದೇವೆ ಮತ್ತು ಅಂತಹ ಉಲ್ಲಂಘನೆಗಳು ಮರುಕಳಿಸಲು ಬಿಡಬಾರದು. ಒಪ್ಪಂದವನ್ನು ಸುಗಮಗೊಳಿಸಿದೆ ಎಂದು ಹೇಳಿಕೊಳ್ಳುವ ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಕದನ ವಿರಾಮಕ್ಕೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: ರಾಜ್ಯದ ಔಷಧಿ ನಿಯಂತ್ರಣ – ಖರೀದಿ ವ್ಯವಸ್ಥೆಯಲ್ಲಿ ಭಾರೀ ಲೋಪ: ಸಿಎಜಿ ವರದಿ
ತನ್ನ ಆಕ್ರಮಣವನ್ನು ಪುನರಾರಂಭಿಸುವುದನ್ನು ತಡೆಯಲು ಇಸ್ರೇಲ್ ಮೇಲೆ ಒತ್ತಡ ಹೇರುವುದನ್ನು ಅಂತರರಾಷ್ಟ್ರೀಯ ಸಮುದಾಯವು ಮುಂದುವರೆಸಬೇಕು.
ಪ್ಯಾಲೆಸ್ಟೈನ್ ಗೆ ಸಂಭಂಧಿಸಿದ ಎಲ್ಲಾ ಯು.ಎನ್. ನಿರ್ಣಯಗಳನ್ನು ಪಾಲಿಸಲು ಮತ್ತು ಪ್ಯಾಲೆಸ್ಟೀನಿಯನ್ ಪ್ರದೇಶಗಳ ಮೇಲಿನ ಅದರ ಆಕ್ರಮಣವನ್ನು ಕೊನೆಗೊಳಿಸಲು ಇಸ್ರೇಲ್ ಅನ್ನು ಒತ್ತಾಯಿಸಬೇಕು.
1967ರ ಪೂರ್ವದ ಗಡಿಗಳ ಆಧಾರದ ಮೇಲೆ ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯಾಗಿಟ್ಟುಕೊಂಡು ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಸ್ಥಾಪಿಸುವ ಮೂಲಕ ಮಾತ್ರ ಈ ಪ್ರದೇಶದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸಬಹುದು ಎಂದು ಸಿ.ಪಿ.ಎಂ ನಂಬುತ್ತದೆ.
ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ | ಕೊಲೆ ಮಾಡುವುದು ಧರ್ಮ ರಕ್ಷಣೆಯಾ? ಬಿ.ಎಂ ಭಟ್ Janashakthi Media
