ಹಾವೇರಿ: ಹಾಸ್ಟೆಲ್‌ಗೆ ಮೂಲ ಸೌಲಭ್ಯ ನೀಡಬೇಕು ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ವಾರ್ಡನ್‌ರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹಾವೇರಿ ತಾಲ್ಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಸರಿಯಾದ ಉತ್ತಮ ಗುಣಮಟ್ಟದ ಆಹಾರ ನೀಡುವುದಿಲ್ಲ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕು ಅಧಿಕಾರಗಳಿಗೆ ಅನೇಕ ಬಾರಿ ಮನವಿ ಪತ್ರ ಬರೆಯಲಾಗಿದೆ ಹಾಗೂ ಕಳೆದ ಡಿಸೆಂಬರ್ ತಿಂಗಳಲ್ಲಿ ಹೋರಾಟವನ್ನು ಕೂಡ ಮಾಡಿದ್ದಾರೆ. ಆದರೂ ಅಧಿಕಾರಿಗಳ ಯಾವುದೇ ರೀತಿಯ ಕ್ರಮಕೈಗೊಳದೆ ಕೇವಲ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಗಳು ನಡೆಸುತ್ತಿರುವ ನ್ಯಾಯಯುತ ಹೋರಾಟ ಧರಣಿಯನ್ನು ಬೆಂಬಲಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಹಾಸ್ಟೆಲ್ ಅವ್ಯವಸ್ಥೆ, ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರ ಪಾಲಕರಿಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಪಿತೂರಿ ಮಾಡುತ್ತಿರುವುದು ಸರಿಯಲ್ಲ ಖಂಡನೀಯ ಎಂದರು.
ಇದನ್ನೂ ಓದಿ: ಜಾತ್ರೆಗೆ ಬಂದಿದ್ದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ; ದೂರು ದಾಖಲು
ವಾರ್ಡನ್ ತಾನು ಮಾಡಿದ ಭ್ರಷ್ಟಾಚಾರ, ಅವ್ಯವಸ್ಥೆ, ಅನ್ಯಾಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿಗಳ ಮನೆಗೆ ಹೋಗಿ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದು ಸೂಕ್ತ ತನಿಖೆಯಾಗಬೇಕು. ಸಂಬಂಧಿಸಿದ ವಾರ್ಡನ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿ, ಊಟ, ವಸತಿ ಸಮಸ್ಯೆಗಳು, ಪುಸ್ತಕ, ಕಂಪ್ಯೂಟರ್ ಲ್ಯಾಬ್ ತೆರೆಯಿರಿ ಎಂದು ಕೇಳಿದರೆ ಸರಿಯಾಗಿ ಸ್ಪಂದಿಸದ ವಾರ್ಡನ್ ವರ್ಗಾವಣೆ ಮಾಡಿ ಎಂದು ತಾಲ್ಲೂಕು ಅಧಿಕಾರಿಗಳಿಗೆ ದೂರ ನೀಡಿದರಿಂದ ವಿದ್ಯಾರ್ಥಿಗಳ ಮನೆಗೆ ವಾರ್ಡನ್ ಲಕ್ಷ್ಮಣ ಅವರು ಹೋಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಆತಂಕಕ್ಕೆ ಒಳಗಾದ ಪಾಲಕರು ವಿದ್ಯಾರ್ಥಿಗಳಿಗೆ ಬೈದಾಡಿ ಕಾಲೇಜಿಗೆ ಹೋಗಬೇಡಿ ಎಂದು ಗಲಾಟೆ ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡುರು ಎಂದರು.
ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಆಂಜನೇಯ ಅವರನ್ನು ಕಿರಾಣಿ, ತರಕಾರಿ ದಾಸ್ತಾನು ಕೊಠಡಿ ಪರಿಶೀಲನೆ ನಡೆಸಲು ಒತ್ತಾಯಿಸಿದರು. ಒತ್ತಡಕ್ಕೆ ಮಣಿದು ಪರಿಶೀಲನೆ ನಡೆದ ಅಧಿಕಾರಗಳು ಹುಳು ಬಿದ್ದಿದ ಕಾಳು ಕಡ್ಡಿ, ಕೊಳೆತ ತರಕಾರಿ ನೋಡಿ ಕೋಪಗೊಂಡು ವಾರ್ಡನ್ ಮೇಲೆ ಕ್ರಮಕೈಗೊಳುತ್ತೆವೆ ಎಂದು ಭರವಸೆ ನೀಡಿದರು.
ಭರವಸೆ ಬೇಡ ಆದೇಶ ಬೇಕು ಅಲ್ಲಿಯವರೆಗೂ ಕೊಳೆತ ತರಕಾರಿ, ಹುಳು ಬಿದ್ದ ಪದಾರ್ಥಗಳನ್ನು ಹಾಸ್ಟೆಲ್ ಮುಂದೆ ಇಟ್ಟು ಧರಣಿ ಮುದುವರೆಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿರು.
ಈ ಸಂದರ್ಭದಲ್ಲಿ ಮಂಜುನಾಥ್ ಹುಲಮನಿ, ವಸಂತ್ ವಡ್ಡರ, ರಘುಪತಿ ಕರಮ್ಮನವರ, ಅರುಣ್ ಮಿನಕಟ್ಟಿ, ಕೃಷ್ಣ ಕೆಸರಹಳ್ಳಿ, ಕುಶಾಲ್ ಲಮಾಣಿ, ಸುನಿಲ್ ಲಮಾಣಿ, ನಾಗೇಂದ್ರ ಎಮ್, ಕಿರಣ್ ಲಮಾಣಿ, ನವೀನ ಬಡ್ಡೆಪ್ಪನವರ, ಅರುಣ್ ಕುಮಾರ್ ನಾಗವತ್, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ನೈಸ್ ಕಂಪನಿ ಪರ ನಿಂತ ಡಿಕೆ ಶಿವಕುಮಾರ್ ವಿರುದ್ಧ ರೈತರ ಪ್ರತಿಭಟನೆ Janashakthi Media