ಬೆಂಗಳೂರು: ಭಾನುವಾರ, ಪ್ರೊ. ಬರಗೂರು ರಿಗೆ 75 ವರ್ಷ ದಾಟಿದ ಹಿನ್ನೆಲೆಯಲ್ಲಿ ನಾಡೋಜ ಪ್ರೊ. ಬರಗೂರು ಸ್ನೇಹಬಳಗ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ “ಸಾಂಸತಿಕ ಸ್ನೇಹ ಗೌರವ ಪುಸ್ತಕಗಳ ಜನಾರ್ಪಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಂ. ವೀರಪ್ಪ ಮೊಯಿಲಿ, ಭಾಷಾ ಅಭಿವೃದ್ಧಿಗೆ ಆಯಾ ರಾಜ್ಯಗಳು ನೀತಿ ರೂಪಿಸಿದರೆ ಎಲ್ಲ ಭಾಷೆ, ಸಂಸತಿಗೆ ಪ್ರಾಮುಖ್ಯತೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಭಿವೃದ್ಧಿ
ಭಾಷಾ ಅಭಿವೃದ್ಧಿಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉಪಯುಕ್ತ ಯೋಜನೆ ರೂಪಿಸುವ ತುರ್ತು ಅಗತ್ಯವಿದೆ. ನಮ್ಮ ಸಂಸತಿ, ಭಾಷೆ ಶ್ರೇಷ್ಠ ಎಂಬ ಹೋರಾಟಗಳು ಇಂದಿನ ದಿನಮಾನಗಳಲ್ಲಿ ಹೆಚ್ಚಿವೆ. ಹಾಗಾಗಿ, ದೇಶ ಅಥವಾ ರಾಜ್ಯಕ್ಕೆ ಒಂದೇ ಸಂಸತಿ ಇಲ್ಲ. ಎಲ್ಲೆಡೆ ಬಹುಸಂಸತಿ ಇದೆ ಎಂದು ಪ್ರತಿಪಾದಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪ ರನ್ನು ಬಂಡಾಯ ಸಾಹಿತ್ಯಕ್ಕೆ ಸೀಮಿತಗೊಳಿಸಬಾರದು. ಮಾನವೀಯತೆ ಮೆಚ್ಚುವ ಪ್ರತಿಯೊಬ್ಬರು ಅವರ ವಿಚಾರಧಾರೆ ಒಪ್ಪಿದ್ದಾರೆ ಎಂದರು.
ಬದ್ಧತೆ ವೈಯಕ್ತಿಕವಾಗಿಬಾರದು. ಅದು ಇಡೀ ಭಾರತೀಯತೆಯನ್ನು ಒಳಗೊಂಡಾಗ ಮಾತ್ರ ಎಲ್ಲ ವರ್ಗದವರನ್ನು ಸೇರುತ್ತದೆ. ಅಂತಹ ಪ್ರಜಾಸತ್ತಾತ್ಮಕ, ಪ್ರಗತಿಶೀಲ ವಿಚಾರಧಾರೆಯಿಂದ ಬರಗೂರು ಬಹುಸಂಸತಿ ರಾಷ್ಟ್ರದ ವಕ್ತಾರರಾಗಿದ್ದಾರೆ. ನಾಡಿನ ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿರುವ ಅವರು, ಮಾನವೀಯ ಮುನ್ನಡೆಯಿಂದ ಅರ್ಥೈಸಿಕೊಂಡಿದ್ದಾರೆ.
ಇದನ್ನೂ ಓದಿ: ಭೂಹಳ್ಳಿಯ ಬುದ್ಧೇಶ್ವರ – ಚನ್ನಪಟ್ಟಣದ ಜೀವೇಶ್ವರ!
ಅವರ ಬರವಣಿಗೆ, ಚಿಂತನೆಗಳು, ವಿಚಾರ, ವಿಮರ್ಶೆ&ಪರಾಮರ್ಶೆಗಳು ಬಹುಮುಖಿಯಾಗಿವೆ ಹೊರತು ಏಕಮುಖಿಯಾಗಿಲ್ಲ. ಆದ್ದರಿಂದ, ವಿದ್ವತ್ ವಲಯದಲ್ಲಿನ ಯಾವುದೇ ಗುಂಪಿಗೆ ಸೇರಿಲ್ಲ. ಸಾಮಾಜಿಕ, ಸೈದ್ಧಾಂತಿಕ ಬದ್ಧತೆಯಿಂದ ನಾಡಿಗೆ ಮೇಲ್ಪಂತಿಯ ಸಾಂಸತಿಕ ಬರವಣಿಗೆ ನೀಡಿದ್ದಾರೆ ಎಂದು ಮೊಯಿಲಿ ತಿಳಿಸಿದರು. ಲೇಖಕರಾದ ಡಾ.ಯಲ್ಲಪ್ಪ ಹಿಮ್ಮಡಿ ಬರೆದಿರುವ “ಬರಗೂರ್ ಬುಕ್’, ಡಾ.ರಾಜು ಗುಂಡಾಪುರ ಮತ್ತು ಬಿ.ರಾಜಶೇಖರಮೂರ್ತಿ ರಚಿಸಿರುವ “ನಮ್ಮ ಬರಗೂರ್ ಮೇಷ್ಟ್ರು’ ಪುಸ್ತಕಗಳನ್ನು ಬಿಡಗಡೆ ಮಾಡಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸತ ಚಂದ್ರಶೇಖರ ಕಂಬಾರ, ಎಂಎಲ್ಸಿ ಪುಟ್ಟಣ್ಣ ಮತ್ತಿತರರಿದ್ದರು.
ವಿವಿಧತೆಯಲ್ಲಿ ಏಕತೆ:
ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತೀಯತೆ. ಆದರೆ, ಇಂದು ಭಾಷೆ, ಸಂಸತಿ, ಧರ್ಮ, ಜಾತಿ ಆಧಾರ ಮೇಲೆ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಇದನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನೆಲೆಗಟ್ಟಿನಲ್ಲಿದ್ದುಕೊಂಡು ಹೊಡೆದೊಡಿಸುವ ಕೆಲಸ ಮಾಡಬೇಕಿದೆ. ಅಂತಹ ಕೆಲಸವನ್ನು ಬರಗೂರು ರಾಮಚಂದ್ರಪ್ಪನವರು ತಮ್ಮ ಬರವಣಿಗೆ, ವಿಚಾರ&ವಿಮರ್ಶೆ, ಸಿನಿಮಾಗಳು, ಹಾಡುಗಳ ಮೂಲಕ ಮಾಡಿ ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಕೇರಳದ ಮಾಜಿ ಸಚಿವೆ ಶೈಲಜ ಟೀಚರ್ ಪ್ರಶಂಸೆ ವ್ಯಕ್ತಪಡಿಸಿದರು.
ದೇಶದ ನಾನಾ ಭಾಗಗಳಲ್ಲಿ ಪ್ರಗತಿಶೀಲ ಹಾಗೂ ದಲಿತ ಸಾಹಿತಿಗಳು ನಡುವೆ ಹೊಂದಾಣಿಕೆ ಇಲ್ಲ. ಒಳಜಗಳವೇ ಹೆಚ್ಚು. ಆದರೆ, ಕರ್ನಾಟಕದಲ್ಲಿ ಇಂತಹ ವಾತಾವರಣವಿಲ್ಲ. ಅದಕ್ಕೆ ಬರಗೂರು ಅವರ ಕೊಡುಗೆ ಸಾಕಷ್ಟಿದೆ. ತಮ್ಮ ಬರವಣಿಗೆ ಮೂಲಕ ಕನ್ನಡಕ್ಕೆ ಹೊಸ ಆಯಾಮು ನೀಡಿದ್ದಾರೆ.
ಇದನ್ನೂ ನೋಡಿ: ರಾಜ್ಯ ಸರ್ಕಾರದಿಂದ ಡೆಂಗ್ಯೂ ಮಾರ್ಗಸೂಚಿ ಪ್ರಕಟJanashakthi Media