ಪಹಲ್ಗಾಮ್‌ ಉಗ್ರರ ದಾಳಿ : ಸೈನಿಕರ ಕೊರತೆ ಕಾರಣ – ಮಾಜಿ ಜನರಲ್‌ ಬಕ್ಷಿ

ಮ್ಮು ಮತ್ತು ಕಾಶ್ಮೀರ: ಏಪ್ರಿಲ್‌ 22 ಮಂಗಳವಾರದಂದು ಬೈಸರನ್‌ ಕಣಿವೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ ಪ್ರವಾಸಿಗರು ಬಲಿಯಾಗಿದ್ದೂ, ಘಟನೆ ದೇಶದ ಜನತೆಯಲ್ಲಿ ಆತಂಕ ಮೂಡಿಸಿದೆ.

ಈ ಘಟನೆ ಸಂಭವಿಸಿದ ಸ್ಥಳ ಇತ್ತೀಚೆಗಷ್ಟೇ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದುಕೊಳ್ಳುತ್ತಿತ್ತು. ಇನ್ಸ್ಟಾಗ್ರಾಮ್‌ ರೀಲ್‌ಗಳಲ್ಲಿ ಈ ಸ್ಥಳಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಣದಲ್ಲಿ ಹರಿದಾಡಿದ್ದವು. ಉಗ್ರ

ಹೀಗೆ ಜಮ್ಮು ಕಾಶ್ಮೀರ ಹಿಂಸೆಯಿಂದ ಮುಕ್ತಿ ಹೊಂದಿ ಸಾಮಾನ್ಯ ಜೀವನದತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಈ ಭಯಾನಕ ದಾಳಿ ನಡೆದಿರುವುದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಇನ್ನು ಸ್ಥಳಕ್ಕೆ ಗೃಹಸಚಿವ ಅಮಿತ್‌ ಶಾ ಬುಧವಾರ ರಾತ್ರಿಯೇ ತಲುಪಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಉಗ್ರ

ಇದನ್ನೂ ಓದಿ: ಸುಂಕ-ದಾಳಿ: ಬರಿದೇ ಟ್ರಂಪ್ ‘ಹುಚ್ಚುತನ’ ವಲ್ಲ!

ಅತ್ತ ಸೇನ್‌ ಕೂಂಬಿಂಗ್‌ ಕಾರ್ಯಾಚರಣೆ ಆರಂಭಿಸಿದೆ. ಘಟನೆ ಬಗ್ಗೆ ನಿವೃತ್ತ ಸೇನೆ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ದಕ್ಷ ಸೇನಾಧಿಕಾರಿಯಾಗಿದ್ದ ನಿವೃತ್ತ ಮೇಯನ್‌ ಜನರಲ್‌ ಗಗನ್‌ ದೀಪ್‌ ಬಕ್ಷಿ ಸಹ ಈ ಕುರಿತು ಮಾತನಾಡಿದ್ದು, ಪಾಕ್‌ ಆಕ್ರಮಿತ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಮಯ ಬಂದಿದೆ ಎಂದು ಗುಡುಗಿದರು.

ರಿಪಬ್ಲಿಕ್‌ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದ ಬಕ್ಷಿ ಈ ಚಾನೆಲ್‌ ಮೂಲಕ ನನ್ನದೊಂದು ಮನವಿಯನ್ನು ಮಾಡುವುದಿದೆ ಎಂದು ಮಾತನ್ನು ಆರಂಭಿಸಿ, “ಸೇನೆಯಲ್ಲಿ ಸೈನಿಕರ ಕೊರತೆ ಇದೆ” ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಕೊವಿಡ್‌ ಸಮಯದಲ್ಲಿ ಮೂರು ವರ್ಷಗಳ ಕಾಲ ಸೇನೆಗೆ ಯಾವುದೇ ನೇಮಕಾತಿ ನಡೆದಿಲ್ಲ. ಸೇನೆಯಲ್ಲಿ 1,80,0000 ಸೈನಿಕರು ಕಡಿಮೆಯಾಗಿದ್ದಾರೆ.

ಇಂತಹ ನಿರ್ಧಾರವನ್ನು ತೆಗೆದುಕೊಂಡ ಬುದ್ದಿವಂತ ಯಾರು? ದುಡ್ಡು ಉಳಿಸಲು ಇಂತಹ ನಿರ್ಧಾರ ತೆಗೆದುಕೊಂಡ್ರಾ? ಈಗ ಜನರ ಜೀವವನ್ನು ಈ ರೀತಿ ಬಲಿ ಕೊಡಲು ಈ ನಿರ್ಧಾರ ಕೈಗೊಂಡ್ರಾ ಎಂದು ಬಕ್ಷಿ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ದೇಶವನ್ನು ರಕ್ಷಿಸಲು ಇಂತಹ ಸ್ಥಳಗಳಿಗೆ ಸೈನಿಕರು ಬೇಕು, ಬೆಟ್ಟ, ಗುಡ್ಡಗಳ ಮೇಲೆ ಸೈನಿಕರು ಇರಬೇಕು, ನಾನು ಈ ಪ್ರಾಂತ್ಯದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇನೆ ಎಂದು ತಮ್ಮ ಅನುಭವದ ಮಾತುಗಳನ್ನಾಡಿ ಸೇನೆ ನೇಮಕಾತಿ ತಡೆದ ವ್ಯಕ್ತಿಯ ವಿರುದ್ಧ ಹೆಸರನ್ನು ಹೇಳದೇ ಬಕ್ಷಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ನೋಡಿ: IPL 2025 | ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? Janashakthi Media

Donate Janashakthi Media

Leave a Reply

Your email address will not be published. Required fields are marked *