ಬೆಂಗಳೂರು: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿರಬೇಕಾದ ಕೆಲ ಪೊಲೀಸರು ಕಳ್ಳರೊಂದಿಗೆ ಸೇರಿ ಕಳ್ಳತನಕ್ಕೆ ಇಳಿದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬ ಮನೆಗಳ್ಳತನಕ್ಕೆ ಇಳಿದು ಸಿಕ್ಕಿ ಹಾಕಿಕೊಂಡಿದ್ದಾನೆ. ಯಲ್ಲಪ್ಪ ಬಂಧಿತ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾನೆ. ಪ್ರಕರಣ
ಜ್ಞಾನಭಾರತಿ ಪೊಲೀಸರು ಕಾನ್ಸ್‌ಟೇಬಲ್ ಯಲ್ಲಪ್ಪನನ್ನು ಬಂಧಿಸಿದ್ದು, ಒಟ್ಟು ಮೂರು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಚಂದ್ರಾಲೇಔಟ್, ಚಿಕ್ಕಜಾಲದಲ್ಲೂ ಯಲ್ಲಪ್ಪ ಕೈ ಚಳಕ ತೋರಿಸಿದ್ದಾನೆ. ಈ ಹಿಂದೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ:ಗನ್ ತೋರಿಸಿ ಮನೆ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಈ ಹಿಂದೆ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್‌ಟೇಬಲ್ ಆಗಿದ್ದ ಯಲ್ಲಪ್ಪ ಕಳ್ಳತನ ಮಾಡಿಸಿ ಅಮಾನತಾಗಿದ್ದ. ಆರೋಪಿಗಳ ವಿಚಾರಣೆ ವೇಳೆ ಯಲ್ಲಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಯಲ್ಲಪ್ಪನ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಲಾಗಿತ್ತು. ಇಷ್ಟಾದರೂ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ ಯಲ್ಲಪ್ಪ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆತ್ಮಹತ್ಯೆ ಬೆದರಿಕೆ:
ಯಲ್ಲಪ್ಪನನ್ನು ಬಂಧಿಸಿ, ಕದ್ದ ವಸ್ತುಗಳನ್ನು ರಿಕವರಿಗೆ ಕರೆದುಕೊಂಡು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಊರಿಗೆ ಮಾತ್ರ ಕರೆದು ಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.
ವಿಡಿಯೋ ನೋಡಿ:ಒಂದು ದೇಶ ಒಂದು ಚುನಾವಣೆ : ದೇಶದ ಭದ್ರತೆಯನ್ನು ನಾಶ ಮಾಡುವ ಪ್ರಸ್ತಾಪ – ಎ ನಾರಾಯಣ Janashakthi Media