ನೇಜಾರು ಕೊಲೆ ಪ್ರಕರಣ| ಆರೋಪಿಯ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆಯಾಗಲಿ – ಸಿಪಿಐ(ಎಂ) ಆಗ್ರಹ

ಉಡುಪಿ : ನೇಜಾರು ಕೊಲೆ ಪ್ರಕರಣ – ಆರೋಪಿಯ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆಯಾಗಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಕೊಲೆ 

ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದ, ಒಂದೇ ಕುಟುಂಬದ ಮೂವರು ಮಹಿಳೆಯರು ಹಾಗೂ ಬಾಲಕನ ಹತ್ಯೆ ಪ್ರಕರಣದ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿದ ಉಡುಪಿ ಜಿಲ್ಲಾ ಪೋಲೀಸ್ ಇಲಾಖೆಯ ಎಲ್ಲರನ್ನೂ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿನಂದಿಸುತ್ತದೆ. ಅದೇ ಸಂದರ್ಭದಲ್ಲಿ ಏರ್ ಇಂಡಿಯಾ ಸಿಬ್ಬಂದಿಯೂ ಆಗಿರುವ‌ ಆರೋಪಿಯು, ಸಹಪಾಠಿ ಆಗಿರುವ ಐನಾಝ್ ಮೇಲಿನ ಅಸೂಯೆ ಮತ್ತು ದ್ವೇಷವೇ ಕಾರಣವೆಂದು ವಿಚಾರಣೆಯಿಂದ ತಿಳಿದು ಬರುತ್ತದೆ ಎಂದು  ಪೋಲೀಸ್ ಅಧೀಕ್ಷರು ಹೇಳಿರುವುದಾಗಿ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ವಿಚಾರಣೆಯನ್ನು ಅಷ್ಟಕ್ಕೇ ಸೀಮಿತಗೊಳಿಸಿದಲ್ಲಿ ಭಗ್ನಪ್ರೇಮಿಯ ಮಾನಸಿಕ ಅಸ್ವಸ್ಥತೆ ಕಾರಣ ಎಂದು ತೀರಾ ಸರಳ ನಿರ್ಧಾರಕ್ಕೆ ಬಂದಂತೆ ಆಗುತ್ತದೆ. ಆದ್ದರಿಂದ ಆರೋಪಿಯ ಸಂಪೂರ್ಣ ಹಿನ್ನೆಲೆಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯ ಇದೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ:ಉಡುಪಿ|ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್​​​​ ಅರುಣ್​​​ ಚೌಗಲೆ ಬಂಧನ

ಈ ಘಟನೆಯ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೋಲೀಸ್ ಇಲಾಖೆಯ ಕರ್ತವ್ಯದಲ್ಲಿ ಮೂಗು ತೂರಿಸುವುದು ಸಿಪಿಐ(ಎಂ)ನ ಉದ್ದೇಶವಲ್ಲ. ಆದರೆ ವಿವಾಹಿತನೂ ಆಗಿರುವ ಆರೋಪಿ ಇಷ್ಟೊಂದು ಹೀನಾಯ ಭಗ್ನಪ್ರೇಮಿಯಾಗಿ ನಾಲ್ವರ ಹತ್ಯೆಗೆ ಕಾರಣನಾಗುತ್ತಾನೆಯೇ ಎಂಬ ಸಂಶಯ ಸಹಜವಾಗಿಯೇ ಜನರ ಮನಸ್ಸಿನಲ್ಲಿ ಬರುತ್ತದೆ ಎಂದು ಅವರು ಹೇಳಿದರು.

ಹತ್ಯೆಯ ವಿರುದ್ದ ಜಿಲ್ಲೆಯ ಜನತೆ ಒಕ್ಕೊರಲಿನಿಂದ ಖಂಡಿಸುತ್ತಿರುವಾಗ, ಇದೊಂದು ‘ವಿಶ್ವ ದಾಖಲೆ’ ಎಂದು ವಿಜ್ರಂಬಿಸುವ ಮನಸ್ಸುಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳ ಮೇಲೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಈ ಸಂದಿಗ್ದ ಪರಿಸ್ಥಿತಿಯಲ್ಲಿ ಐಕ್ಯತೆಯನ್ನು ಕಾಪಾಡುತ್ತಾ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಬೇಕೆಂದು ಜಿಲ್ಲೆಯ ಜನತೆಯಲ್ಲಿ ಸಿಪಿಐ(ಎಂ) ಮನವಿ ಮಾಡುತ್ತದೆ ಎಂದರು.

ವಿಡಿಯೋ ನೋಡಿ: ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media

 

Donate Janashakthi Media

Leave a Reply

Your email address will not be published. Required fields are marked *