ಮಹಾಕುಂಭದ ನದಿಯಲ್ಲಿ ನೀರು ಕಲುಷಿತವಾಗಿದೆ!

ಉತ್ತರ ಪ್ರದೇಶ: ಭಾರತದ ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಮಹಾಕುಂಭದ ನದಿಯಲ್ಲಿ “ಪುಣ್ಯ ಸ್ನಾನ” ಮಾಡಿದ ಗಂಗಾ ನದಿಯ ನೀರಿನಲ್ಲಿ “ಮಾನವ ಹಾಗೂ ಪ್ರಾಣಿಗಳ ಮಲವಿಸರ್ಜನೆಯ ಅಂಶಗಳು ಕಂಡುಬಂದಿವೆ” ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್) ಯ ಆದೇಶದ ಮೇರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸೆಂಟ್ರಲ್ ಪಲ್ಯುಷನ್ ಕಂಟ್ರೋಲ್ ಬೋರ್ಡ್) ನಡೆಸಿದ ತನಿಖಾ ವರದಿ ತಿಳಿಸಿದೆ.

ಉತ್ತರ ಪ್ರದೇಶ ಸರ್ಕಾರದ ವರದಿಯ ಪ್ರಕಾರ ಮಹಾಕುಂಭದ ನದಿಯಲ್ಲಿ ಕೋಟ್ಯಾಂತರ ಭಕ್ತರು ” ಪುಣ್ಯ ಸ್ನಾನ” ಮಾಡಿದ್ದಾರೆ. ಅಷ್ಟೊಂದು ದೊಡ್ಡ ಸಂಖ್ಯೆಯ ಜನರು ಸೀಮಿತ ಪ್ರದೇಶದಲ್ಲಿ ಸ್ನಾನ ಮಾಡಿದರೆ ಸಹಜವಾಗಿಯೇ ನೀರು ಕಲುಷಿತಗೊಳ್ಳುತ್ತದೆ ಎನ್ನುವ ಸಾಮಾನ್ಯ ತಿಳುವಳಿಕೆ ಎಂತಹ ಪಾಮರರಿಗೂ ಗೊತ್ತು.

ಆದರೆ ಭಕ್ತಾಗ್ರೇಸರರು ದಿನಬೆಳಗಾದರೆ ‘ಪವಿತ್ರ ಸ್ನಾನ ” ಎಂದು ಹೇಳುತ್ತಲೇ “ಗಂಗೆಯ ನೀರು” ಪವಿತ್ರ ಎಂದು ಸಂಗ್ರಹಿಸಿ ತಮ್ಮ ಮನೆಗಳಿಗೆ ತಂದಿದ್ದಾರೆ ಎಂಬ ವರದಿಗಳೂ ಇವೆ.

ಇದನ್ನೂ ಓದಿ: ಕೆನಡಾ ಪ್ರಧಾನಿ ಹುದ್ದೆಗೆ ಕರ್ನಾಟಕ ಮೂಲದ ಸಂಸದ ಸ್ಪರ್ಧೆ

ಅಂತಹ ಕಲುಷಿತ ನೀರಿನ ಸೇವನೆ ಮಾಡಿದರೆ ಏನೇನೆಲ್ಲಾ ರೋಗಗಳು ಬರುತ್ತದೆ ಎನ್ನುವುದು ಅನುಭವಿಸಿದವರಿಗೆ ಮತ್ತು ಆರೋಗ್ಯ ಇಲಾಖೆಯವರಿಗೆ ಗೊತ್ತು.

ಇಂತಹ ಅವೈಜ್ಞಾನಿಕ ಆಚರಣೆಗಳನ್ನು ದೇಶದ ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಆ ನದಿಯಲ್ಲಿ ‘ಪುಣ್ಯ ಸ್ನಾನ’ ಮಾಡಿ ಏನು ಸಂದೇಶ ಸಾರಿದರು ? ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ.

ಆದರೆ ಇಂತಹ ಅವೈಜ್ಞಾನಿಕ ಅನಾರೋಗ್ಯಕರ “ಪುಣ್ಯ ಸ್ನಾನ” ಗಳ ಮೂಲಕ “ಸಾಂವಿಧಾನಿಕ ಸ್ಥಾನ” ವನ್ನು ಅಲಂಕರಿಸಿರುವ ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಗಳೇ ಸಂವಿಧಾನ ವಿರೋಧಿ ಧೋರಣೆ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ ? ಎಂಬ ಚರ್ಚೆಗಳು ಎದ್ದಿವೆ.

ಇದನ್ನೂ ನೋಡಿ: ತನುವಿನೊಳಗೆ ಅನುದಿನವಿದ್ದುJanashakthi Media

Donate Janashakthi Media

Leave a Reply

Your email address will not be published. Required fields are marked *