ಮೈಸೂರು | ಹೂವುಗಳಿಂದ ಹಾಗೂ ಸಿರಿಧಾನ್ಯಗಳಿಂದ ಅರಮನೆ ಆವರಣದಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ!

ಮೈಸೂರು: ಸಿರಿಧಾನ್ಯಗಳಿಂದ ತಯಾರಿಸಿರುವ ಸಾಲುಮರದ ತಿಮ್ಮಕ್ಕ, 3.50 ಲಕ್ಷ ಬಿಡಿ ಹೂವುಗಳಿಂದ ತಯಾರಿಸಿರುವ ಶೃಂಗೇರಿ ದೇವಸ್ಥಾನದ ಜನರನ್ನು ಸೆಳೆಯುತ್ತಿದೆ. ಮಾಗಿ ಉತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಅರಮನೆ ಮಂಡಳಿ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ.

ಮೈಸೂರು ಸಂಸ್ಥಾನದ ಮಹಾರಾಜ ಮುಮ್ಮುಡಿ ಕೃಷ್ಣರಾಜ ಒಡೆಯರ್ ಮಾದರಿ, ಭಾರತ ಸಂವಿಧಾನದ ಪೀಠಿಕೆ, ಕೃಷ್ಣ ಮತ್ತು ರಾಧೆ ಉಯ್ಯಾಲೆ, ವಿಶ್ವಕಪ್ ವಿಜೇತ ಟೀಂ ಇಂಡಿಯಾ ಮಹಿಳಾ ತಂಡ, ಕ್ರಿಕೆಟ್, ಖೋ-ಖೊ, ಕಬಡ್ಡಿ, ವಿಶ್ವಕಪ್ ವಿಜೇತ ಅಂದ ಕ್ರಿಕೆಟ್ ಆಟಗಾರರ ಚಿತ್ರಗಳು ಹಾಗೂ ಮಾದರಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಇದನ್ನೂ ಓದಿ : ಬೆಂಗಳೂರು | ಮನರೇಗಾ ಹೆಸರು ಬದಲಿಸಿದ ಬಿಜೇಪಿಗರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ – ಡಿ.ಕೆ. ಶಿವಕುಮಾರ್

ಜಮ್ಮು-ಕಾಶ್ಮೀರದ ಪೆಹಲ್ಗಾಮ್ ದಾಳಿಗೆ ಪ್ರತ್ಯುತ್ತರ ಕೊಟ್ಟ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್​​ನಲ್ಲಿ ಭಾಗವಹಿಸಿದ್ದ ಯುದ್ಧ ಟ್ಯಾಂಕರ್, ಹಡಗು, ನ್ಯಾವಿಗೇಟರ್ ಜೆಟ್ ಮಾದರಿಗಳು, ಹೂವುಗಳಿಂದ ಅಲಂಕೃತವಾಗಿ ನಿಂತಿರುವ ನವಿಲು ಮಾದರಿಗಳು ಸೊಗಸಾಗಿ ಮೂಡಿಬಂದಿವೆ.

ಎರಡು ಹಂಸ ಮಾದರಿಯ ಸೆಲ್ಫಿ ಪಾಯಿಂಟ್‌ಗಳು, ಮಕ್ಕಳನ್ನು ಸೆಳೆಯಲು ನಿರ್ಮಿಸಿರುವ ಕೊಕ್ಕರೆಗಳು, ಕೊಂಬೆಯಲ್ಲಿ ಕುಳಿತಿರುವ ಪಕ್ಷಿಗಳು, ದುಂಬಿ, ಕ್ಯಾರೆಟ್‌ ಹಿಡಿದಿರುವ ಮೊಲದ ಮಾದರಿಗಳನ್ನು ಇಲ್ಲಿ ನೋಡಬಹುದು. ಥರ್ಮಾಕೋಲ್ ಹಾಗೂ ಹೂವುಗಳಿಂದ ನಿರ್ಮಾಣಗೊಂಡಿರುವ ಛೋಟಾ ಭೀಮ್, ಕಾಳಿಂಗ ಹಾವಿನ ತಲೆ, ಕೃಷ್ಣನ ಅವತಾರದ ಅಲಂಕಾರಗಳು ಆಕರ್ಷಕವಾಗಿವೆ.

ಔಷಧಿಯುಕ್ತ ಗಿಡಗಳಾದ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ, ಚಕ್ರಮುನಿ ಗಿಡಗಳೂ ಇವೆ. ಇವುಗಳನ್ನು ಗಣ್ಯರು ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ.

ಹರ ಹರ ಮಹಾದೇವ, ಸಂಪೂರ್ಣ ರಾಮಾಯಣ, ಶಿವಕೇಶವಾಮೃತಸಾರ, ದೇವನೊಬ್ಬ-ನಾಮ ಹಲವು, ತಿರುಪತಿ ಶ್ರೀನಿವಾಸನ ವೈಭವ ಮಾದರಿ ಗೊಂಬೆಗಳು ಆಕರ್ಷಣೆಯಾಗಿದೆ.

ಸುಮಾರು 25,000 ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, (ಮೆರಿಗೋಲ್ಡ್, ಸಾಲ್ವಿಯ, ಡೇಲಿಯಾ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯಾ, ವರ್ಬಿನಾ, ಡೈಂಥ್ಸ್‌ಘಿ, ಜಿನಿಯಾ ಪೆಲಂಬೂಡಿಯ, ಸನ್‌ಪ್ಲವರ್, ಜಪಾನ್‌ಸನ್‌ಪ್ಲವರ್, ಆಲೇಕ್ ಸಿನೇರಿಯಾ, ಕಾಸ್‌ಮಸ್, ಪ್ಲಾಕ್ಸ್‌, ಕ್ಯಾಲೂಂಡಲ, ಗೋಪರಿಯನ್, ಮ್ಯಾಂಡೂವಿಲ, ಪಾಂಚಿಟಿಯ, ತುರೂನಿಯಂ, ಬಾಲ್ಲಂ, ಕಾಕ್ಸಕೊಂಬ್, ನಸ್ಪರ್‌ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ 35 ಜಾತಿಯ ಹೂವಿನ ಗಿಡಗಳು) ಅಂದಾಜು 4 ಲಕ್ಷ ವಿವಿಧ ಗುಲಾಬಿ ಹೂಗಳು, ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡೈಸಿ ಹಾಗೂ ಇತರೆ ಅಲಂಕಾರಿಕ ಹೂವುಗಳನ್ನು ಬಳಸಲಾಗಿದೆ.

ಅರಮನೆ ಮಂಡಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಜಿ.ಕೆ.ಯೋಗೇಶ್ ಅವರು ಮಾತನಾಡಿ, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. 1.20 ಲಕ್ಷ ಸಸಿಗಳನ್ನು ನಾವು ಇಲ್ಲಿ ಬೆಳೆಸಿದ್ದೇವೆ. ಅದರೊಂದಿಗೆ 7 ಲಕ್ಷ ಬಿಡಿ ಹೂಗಳಿಂದ ವಿವಿಧ ಮಾದರಿಗಳನ್ನು ಮಾಡಿದ್ದೇವೆ” ಎಂದು ತಿಳಿಸಿದರು. “ಡಿ. 21ರಿಂದ ಡಿ.31ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದೇವೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ : ಕೊಂದವರು ಯಾರು? ಅಭಿಯಾನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ – ಜ್ಯೋತಿ ಎ Janashakthi

 

Donate Janashakthi Media

Leave a Reply

Your email address will not be published. Required fields are marked *