ಬೆಂಗಳೂರು: ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸಲು ಆಗದಿದ್ದಕ್ಕೆ ಟ್ವಿಟ್ವರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದ ಭಾರತೀಯ ಮೂಲದ ಅಮೇರಿಕ ಟೆಕ್ಕಿಯೊಬ್ಬರಿಗೆ ನೆರವು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದಾರೆ.
ಈ ಕುರಿತು ಜುಲೈ-27 ರಂದು ಟ್ವೀಟ್ ಮಾಡಿದ್ದ ಟೆಕ್ಕಿ ಬ್ರಿಜ್ ಸಿಂಗ್ ಎನ್ನುವವರು, ಎರಡು ತಿಂಗಳು ಕಳೆದರೂ ಬೆಂಗಳೂರಿನಲ್ಲಿ ನನ್ನ ಕಂಪನಿ ನೋಂದಾಣಿ ಮಾಡೋಕೆ ಆಗಲಿಲ್ಲ. ಭಾನುವಾರ ಹೃದಯದಿಂದ ಅಮೆರಿಕಕ್ಕೆ ವಾಪಸ್ ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‍ಎಸ್‍ನವರು ಭಾಗಿಯಾಗಿಲ್ಲ-ಬ್ರಿಟಿಷರೊಂದಿಗೆ ಇದ್ರು: ಎಂ.ಬಿ.ಪಾಟೀಲ್
ಬೆಂಗಳೂರು, ಭಾರತವನ್ನು ಪ್ರೀತಿಸುತ್ತೇನೆ. ಆದರೆ, ಮನೆಗೆ ಬಂದ ನಂತರ ಸಾಕಷ್ಟು ಅನುಭವ ಆಗಿದೆ. ಭಾರತದಲ್ಲಿ ಕಂಪನಿ ನೋಂದಾಯಿಸಲು ಎರಡು ತಿಂಗಳು ಗತಿಸಿದರೂ ಆಗಿಲ್ಲ. ಇದರಿಂದ ಕಂಪನಿ ಹೂಡಿಕೆದಾರರು, ಸಹ ಸಂಸ್ಥಾಪಕರು ಹಾಗೂ ಗ್ರಾಹಕರ ಪ್ರತಿಕ್ರಿಯೆ ವಿಭಿನ್ನ ಮಟ್ಟದಲ್ಲಿ ಕಂಡು ಬಂದಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ನಾನು ಅಮೆರಿಕಕ್ಕೆ ಹೃದಯದಿಂದ ಹೇಳುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ಬ್ರಿಜ್‌ಸಿಂಗ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ,ನಿಮ್ಮ ಸಮಸ್ಯೆಯ ಬಗ್ಗೆ ಕೇಳಲು ಕ್ಷೇಮೆಯಾಚಿಸುತ್ತೇನೆ. ಕಂಪನಿಗಳ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳನ್ನು ಸಾಮಾನ್ಯವಾಗಿ ಸಿಎಸ್‌ಗಳು ನೋಡಿಕೊಳ್ಳುತ್ತಾರೆ. ಸಂಬಂಧಪಟ್ಟ ಕಂಪನಿಗಳ ರಿಜಿಸ್ಟ್ರಾರ್ (ಆರ್‌ಓಸಿ)ಕಡತಗಳನ್ನು ತೆರವುಗೊಳಿಸಲು 15-20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ. ಆದಾಗ್ಯೂ, ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಾವು ಅದನ್ನು ಪರಿಹರಿಸುತ್ತೇವೆ ಎಂದು ಹೇಳಿದ್ದಾರೆ.