ಬೆಂಗಳೂರಿನ ರಸ್ತೆಗಳಲ್ಲಿನ ವಾಹನದಟ್ಟಣೆ ಮತ್ತು ಅದರಿಂದ ಉಂಟಾಗುವ ಜನರ ಬವಣೆ ಈಗ ಜಗತ್ತಿಗೇ ತಿಳಿದಿರುವ ವಿಚಾರ. ಇದು ಜನರ ಪ್ರಾಣಗಳನ್ನು ತೆಗೆದುಕೊಳ್ಳುವ ಭೂತವಾಗಿಯೂ ಕಾಡುತ್ತಿದೆ. ಇತ್ತೀಚಿಗಿನ ಮಳೆಗಳಿಂದಾದ ಗುಂಡಿಗಳ ವಿಷಯವಂತೂ ಬಹು ದೊಡ್ಡ ಚರ್ಚೆಯ ವಿಷಯವಾಗಿದೆ. ಏನೇ ಆದರೂ ಈ ರಸ್ತೆಗಳಲ್ಲಿ ಓಡಾಡುವ ಜನರಿಗೆ ಇದು ಕೊನೆ ಇಲ್ಲದ ನೋವಿನ ಕೂಪವಾಗಿ ಪರಿಣಮಿಸಿದೆ. ಬೆಂಗಳೂರಿಗೆ
-ಜಿ. ಎಸ್. ಮಣಿ
ಜನಪರವಾಗಿ ಚಿಂತಿಸುವವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುವುದೊಂದೇ ಇದಕ್ಕಿರುವ ಪರಿಹಾರ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇವರಲ್ಲಿ ಈ ವಿಷಯದಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ವೈಜ್ಞಾನಿಕ ಚಿಂತಕರು ಮತ್ತು ಪರಿಣತರು ಹಲವರಿದ್ದಾರೆ. ಆದರೆ ಪರಿಹಾರ ಈ ದಿಕ್ಕಿನಲ್ಲಿ ಮೂಡಿ ಬರುತ್ತಿಲ್ಲ. ಬದಲಿಗೆ ಅತಿ ದುಬಾರಿಯಾದ ಪರಿಸರಕ್ಕೆ ದೊಡ್ಡ ಪ್ರಮಾಣದ ಹಾನಿ ಮಾಡಬಹುದಾದ ಜೊತೆಗೆ ಜನರ ಜೇಬುಗಳನ್ನು ದಿನನಿತ್ಯ ಕತ್ತರಿಸುವ ದಿಕ್ಕಿನಲ್ಲಿ ಯೋಜನೆಗಳು ಬರುತ್ತಿವೆ. ಅಂತಹ ಒಂದು ಯೋಜನೆ ಈ ಸುರಂಗ ರಸ್ತೆ ಯೋಜನೆ. ಬೆಂಗಳೂರಿಗೆ
ದೊಡ್ಡ ಖರ್ಚಿನ ಯೋಜನೆ
ಸುಮಾರು 17000 ದಿಂದ 19000 ಕೋಟಿ ರೂಪಾಯಿಗಳ ಖರ್ಚಿನ ಸುರಂಗ ರಸ್ತೆ ನಿರ್ಮಾಣ ಈ ಯೋಜನೆ. ಹೆಬ್ಬಾಳದ ಎಸ್ಟೀಮ್ ಮಾಲ್ ಹತ್ತಿರದಿಂದ ಸಿಲ್ಕ್ ಸಂಸ್ಥೆ ವರೆಗೆ ಸುಮಾರು 16.7 ಕಿ ಮೀ ನಷ್ಟು ಉದ್ದದ ಸುರಂಗ ರಸ್ತೆ ಮಾಡುವ ಯೋಜನೆ ಇದು. ಇದು ಬೆಂಗಳೂರಿನ ಉಸಿರ/ ಹಸಿರು ತಾಣ ಎಂದು ಹೆಸರಾದ ಲಾಲ್ ಬಾಗ್ ನಡಿ 50 ರಿಂದ 100 ಅಡಿಗಳ ಕೆಳಗೆ ಹಾದು ಹೋಗುತ್ತದೆ. ಬೆಂಗಳೂರಿಗೆ
ಇದನ್ನೂ ಓದಿ: ಇಂಡಿ |ನಾದ ಕೆಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏಳು ನೂರಕ್ಕೂ ಹೆಚ್ಚು ಗಿಡಮರ ನೆಟ್ಟು ಹಸಿರು ವಾತಾವರಣ ನಿರ್ಮಾಣ
ಹೀಗೆ ಹಾದು ಹೋಗುವುದರಿಂದ ಲಾಲ್ ಬಾಗ್ ನ ಆರು ಎಕರೆಯಷ್ಟು ಕ್ಷೇತ್ರ ಹಾಳಾಗಬಹುದೆಂಬ ಅಂದಾಜು ಪರಿಣತರ ಸಂದೇಹ. ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಇಂತಹ ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸುವ ಕೆಲಸ ಆಗಿಲ್ಲವೆಂದು ಹೇಳಲಾಗುತ್ತಿದೆ. ನಾಗರಿಕರಿಗಾಗಿ ನಾಗರಿಕರು (C4C) ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಎಂಬ ಸ್ವಯಂ ಸಂಸ್ಥೆಗಳು ತಮ್ಮ ವರದಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಬೆಂಗಳೂರಿಗೆ
ಲಾಲ್ ಬಾಗ್ ಗೆ ಅಪಾಯ
ವಿಸ್ತೃತ ಯೋಜನಾ ವರದಿ ಪ್ರಕಾರ ಈ ರಸ್ತೆ ಲಾಲ್ಬಾಗ್ ನ ಅಡಿ 700 ಮೀಟರುಗಳಷ್ಟು ಮಾತ್ರ ಹಾಡು ಹೋಗುವುದಾದರೂ, 50 ಅಡಿ ವ್ಯಾಸದ ಎರಡು ಸುರಂಗಗಳು 50 ರಿಂದ 100 ಅಡಿ ಕೆಳಗೆ ಹಾಡು ಹೋಗುವುದಾದರೂ, ಎರಡು ಉದ್ದದ ರಾಂಪ್ ಗಳ ಅಳವಡಿಕೆ ಇತ್ಯಾದಿಗಳಲ್ಲ ಸೇರಿ ಸುಮಾರು 23800 ಚದರು ಮೀಟರುಗಳ ಕ್ಷೇತ್ರದಲ್ಲಿ ಇದು ವ್ಯಾಪಿಸುತ್ತದೆ. ಇದನ್ನು ಎಕರೆಗಳಿಗೆ ಪರಿವರ್ತಿಸಿದರೆ ಅದು ಆರು ಎಕರೆಗಳಷ್ಟು ಆಗುತ್ತದೆ. ಇಂತಹ ಯೋಜನೆಗಳಲ್ಲಿ ಸಣ್ಣ ಪುಟ್ಟ ನ್ಯೂನತೆಗಳು ಸೇರಿಕೊಂಡರೂ ಅದರಿಂದ ಅತಿ ಇಕ್ಕಟ್ಟಿನ ದಾರಿಗಳು ನಿರ್ಮಾಣವಾಗಿ ವಾಹನದಟ್ಟಣೆ ನರಕದಂತಹ ಸ್ಥಿತಿಯನ್ನು ನಿರ್ಮಿಸಬಹುದು ಎಂಬುದು ಚಳುವಳಿಗಾರರ ಸಂದೇಹ. ಬೆಂಗಳೂರಿಗೆ
ಲಾಲ್ ಬಾಗ್ ನ ಸ್ಮಾರಕ ಬಂಡೆಗೆ ಅಪಾಯ
ಇನ್ನೊಂದು ಅತಿ ದೊಡ್ಡ ಕಾಳಜಿಯ ವಿಷಯವೆಂದರೆ ಲಾಲ್ ಬಾಗ್ ನ ಮೂರು ದಶಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆಯೂ ಅಪಾಯಕ್ಕೆ ಎರವಾಗಬಹುದೆಂಬ ವಿಷಯ. ಇದು ಭೂವೈಜ್ಞಾನಿಕ ಸ್ಮಾರಕ ಎಂದೂ ಘೋಷಿತವಾದ ಬಂಡೆ. ಹದಿನಾರನೇ ಶತಮಾನದಲ್ಲಿ ಬೆಂಗಳೂರನ್ನು ಆಳಿದ ಕೆಂಪೇಗೌಡರು ಇದನ್ನು ಕೋಟೆಯ ವೀಕ್ಷಣಾ ಗೋಪುರವಾಗಿ ಬಳಸುತ್ತಿದ್ದರು ಎಂಬುದೂ ಗಮಾರ್ಹ ವಿಚಾರ.
ಇದನ್ನೂ ನೋಡಿ: ಕರ್ನಾಟಕಕ್ಕೆ ಕಾಲಿಟ್ಟ SIR |NRC ಜಾರಿಗಾಗಿ ಹಿಂಬಾಗಿಲಿನ ಪ್ರಯತ್ನ – ಕೆ. ಪ್ರಕಾಶ್ Janashakthi Media
ಇದಲ್ಲದೆ 40 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಲಾಲ್ ಬಾಗ್ ಕೆರೆ ಮತ್ತು ಅದು ಪೋಷಿಸುತ್ತಿರುವ ಜೀವ ಮತ್ತು ಜಲ-ಜಗತ್ತಿಗೂ (ಕೆರೆಗಳು, ಅಂತರ್ಜಲ, ಬಾವಿಗಳು, ಕೊಳವೆಬಾವಿಗಳು ಇತ್ಯಾದಿ) ಈ ಯೋಜನೆ ಅಪಾಯ ಒಡ್ಡಬಹುದೆಂಬ ತೀವ್ರ ಸಂದೇಹ ವ್ಯಕ್ತವಾಗಿದೆ. ಲಾಲ್ ಬಾಗ್ ನ 3000 ಕ್ಕೂ ಹೆಚ್ಚು (ಅವುಗಳಲ್ಲಿ ಹಲವು ವಿಶಿಷ್ಟ ಮತ್ತು ಅಪರೂಪದವು) ಸಸ್ಯ ಪ್ರಭೇದಗಳೂ ಅಪಾಯದಲ್ಲಿವೆ ಎಂಬುದೂ ಸ್ಪಷ್ಟ.
ಪರಿಸರಕ್ಕೂ ಅಪಾಯ
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತರ ಪ್ರಕಾರ ಈ ಯೋಜನೆ ಅನುಷ್ಟಾನದಿಂದ ನೆರೆ, ವಾಯು ಮಾಲಿನ್ಯ, ಅಂತರ್ಜಲ ಇತ್ಯಾದಿ ಪ್ರತಿಕೂಲ ಪರಿಣಾಮಗಳು ಆಗುವ ಸಾಧ್ಯತೆ ತೀವ್ರವಾಗಿ ಇದೆ. ಬೆಂಗಳೂರಿಗೆ
ಜಾಗೃತ ಸಂಘಟನೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಕರಾರು ಸಲ್ಲಿಸಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಗಲೇ ರಾಜ್ಯದ ಅನುಷ್ಠಾನ ಸಂಸ್ಥೆಗಳು, ಕೇಂದ್ರ ಪರಿಸರ ಮಂತ್ರಾಲಯ ಇತ್ಯಾದಿಗಳಿಗೆ ನೋಟಿಸ್ ನೀಡಿದೆ.
ಉಳ್ಳವರಿಗೆ ಮಾತ್ರ ಅನುಕೂಲ
ವಿಸ್ತೃತ ಯೋಜನಾ ವರದಿ ಪ್ರಕಾರ ಈ ರಸ್ತೆಗೆ ಒಂದು ದಿಕ್ಕಿನ ಟೋಲ್ 330 ರೂಪಾಯಿಗಳು. ಇದು ವರ್ಷಕ್ಕೆ ಶೇ 5 ರ ಪ್ರಮಾಣದಲ್ಲಿ ಹೆಚ್ಚಲಿದೆ. ಮೇಲಿನ ದರ ಕಾರುಗಳಿಗೆ ಮಾತ್ರ. ಇತರ ವಾಹನಗಳ ಟೋಲ್ ದರ ವರದಿಯಲ್ಲಿ ಕಾಣಿಸಲಾಗಿಲ್ಲ. ಇದರ ಅರ್ಥ ಈ ಯೋಜನೆ ಜನಸಾಮಾನ್ಯರಿಗೆ ಯಾವುದೇ ಅನುಕೂಲತೆ ನೀಡಲಾರದು. ಉಳ್ಳವರಿಗೆ ಅನುಕೂಲ ಮಾಡಿಕೊಡಬಹುದು. ಬೆಲೆ ಬಹಳ ದೊಡ್ಡದು. ಅನುಕೂಲ ಬಹಳ ಚಿಕ್ಕದು.
ಉಪ ಮುಖ್ಯ ಮಂತ್ರಿಗಳ ಮೆಚ್ಚಿನ ಯೋಜನೆ?
ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಈ ಯೋಜನೆಯ ಹಿಂದೆ ತಮ್ಮ ಪೂರ್ತಿ ಒಲವನ್ನು ಬೀರಿದ್ದಾರೆ ಎಂದು ಹೇಳಲಾಗುತ್ತಿದೆ. ಯೋಜನೆಯನ್ನು ಅನುಷ್ಠಾನ ಮಾಡಲೇಬೇಕು ಎಂಬ ಹಠ ಅವರಿಗೆ ಇರುವಂತೆ ಅವರ ಮಾತುಗಳಿಂದ ಗೊತ್ತಾಗುತ್ತದೆ. ಈ ಯೋಜನೆ ತಂದೊಡ್ಡಬಹುದಾದ ಸಂಕಷ್ಟಗಳ ಬಗೆಗೆ ಅವರಿಗೆ ಅರಿವಿದೆ ಮತ್ತು ಸಂಬಂಧಿತ ಜನ ಕಾಳಜಿ ಅವರಿಗೆ ಇದೆ ಎಂದು ನಾವು ಭಾವಿಸಬಹುದಾದರೂ ವಾಸ್ತವ ಹಲವು ವಿಪರೀತ ಪರಿಣಾಮಗಳನ್ನೇ ಹೇಳುತ್ತಿವೆ.
(ಆಧಾರ: ದಿ ಹಿಂದು ಪತ್ರಿಕೆಯ ವರದಿ)
