ಮುಂಬೈ: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಫಲಿತಾಂಶ ಹಿನ್ನಲೆಯಲ್ಲಿ ಮಂಗಳವಾರ ಷೇರು ಮಾರುಕಟ್ಟೆಯ ಆರಂಭದಲ್ಲಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿನಲ್ಲಿ ಭಾರಿ ಇಳಿಕೆಯಾಗಿದೆ.
ಸೆನ್ಸೆಕ್ಸ್ 1,300 ಅಂಕ ಕುಸಿದು 75,149ಕ್ಕೆ, ನಿಫ್ಟಿ 354ಅಂಕ ಕುಸಿದು 22,909ಕ್ಕೆ ತಲುಪಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಮತ್ತು ಬಿಜೆಪಿ+ 279 ಸ್ಥಾನಗಳಲ್ಲಿ ಮುನ್ನಡೆ ತೋರಿಸುವ ಆರಂಭಿಕ ಟ್ರೆಂಡ್‌ಗಳ ನಡುವೆ ಸೆನ್ಸೆಕ್ಸ್ ಮತ್ತು ನಿಫ್ಟಿನಲ್ಲಿ ಕುಸಿತ ಕಂಡಿದೆ.
ಇದನ್ನೂ ಓದಿ: ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದ ಸಿಕೆಎಂ
ಸೋಮವಾರ, ಸೆನ್ಸೆಕ್ಸ್ 2,507 ಅಂಕಗಳ ಏರಿಕೆಯೊಂದಿಗೆ 76,468ಕ್ಕೆ ಸ್ಥಿರಗೊಂಡರೆ, ನಿಫ್ಟಿ ೭೩೩ ಪಾಯಿಂಟ್ ಏರಿಕೆಯಾಗಿ 23,263ಕ್ಕೆ ತಲುಪಿದೆ.
ಇದನ್ನೂ ನೋಡಿ: ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media