“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ಶ್ರಮಜೀವಿಗಳ ಬೇಡಿಕೆಗಳ ತಿರಸ್ಕಾರ ಎಲ್ಲರನ್ನು ಒಳಗೊಂಡ ಆಭಿವೃದ್ಧಿಯ ಘೋಷಣೆಗೆ ವಿರುದ್ಧ ಹೆಜ್ಜೆ ಹಾಕಿದ ರಾಜ್ಯ ಸರ್ಕಾರ – ಸಿಐಟಿಯು ಅಸಮಾಧಾನ

 ಬೆಂಗಳೂರು : ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಯಲ್ಲಿ ಮಾನ್ಯ ಸಿದ್ದರಾಮಯ್ಯರವರ ೧೬ನೇ ಬಜೆಟ್ ಹಾಗೂ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಎರಡನೆಯ ಬಜೆಟ್ ಜನ ಸಾಮಾನ್ಯರಲ್ಲಿ ನಿರೀಕ್ಷೆಯನ್ನು ಮೂಡಿಸಿತ್ತು. ಬಡಜನರ, ಶ್ರಮಿಕರ ಹಾಗು ರೈತರಿಗೆ ನಿರಾಶೆ ಮೂಡಿಸಿದ ಬಜೆಟ್ ಇದಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿಯು ಟೀಕಿಸಿದೆ.

ಬಜೆಟ್‌ ಕುರಿತು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಜಂಟಿ ಹೇಳಿಕೆ ನೀಡಿದ್ದು, ಕೇಂದ್ರ ಸರಕಾರದ ರಾಷ್ಟ್ರೀಯ ನಗದೀಕರಣದ ಪೈಪ್ ಲೈನ್ (ಎನ್.ಎಂ.ಪಿ.ಎಲ್) ಮಾದರಿಯಲ್ಲೇ ಸಾರ್ವಜನಿಕ ಆಸ್ತಿಗಳನ್ನು ಕಾರ್ಪೊರೇಟ್ ಬಂಡವಾಳಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ೧೦ ಕಬ್ಬಿಣ ಅದಿರು ಪ್ರದೇಶಗಳನ್ನು ಖಾಸಗಿಯವರಿಗೆ ವರ್ಗಾಯಿಸುವ ಮೂಲಕ ೫೮೪೭ ಕೋಟಿ ರೂಪಾಯಿಗಳು ಸರ್ಕಾರಕ್ಕೆ ಆದಾಯವಾಗಲಿದೆ ಎಂದು ಪ್ರಕಟಿಸಲಾಗಿದೆ. ಸರ್ಕಾರವೇ ಈ ಪ್ರದೇಶಗಳನ್ನು ನಿರ್ವಹಿಸಲು ಸಾಧ್ಯವಾದರೆ ಈ ಮೊತ್ತಕ್ಕಿಂತಲು ಹಲವು ಪಟ್ಟು ಹೆಚ್ಚು ಆದಾಯವನ್ನು ರಾಜ್ಯಸರ್ಕಾರ ಪಡೆಯಲು ಸಾಧ್ಯವಾಗುತ್ತಿತ್ತು. ಸಾರ್ವಜನಿಕರಿಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಖಾತರಿ ಪಡಿಸುವ ಬಜೆಟ್ ಇದಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಪಾಪಿಗಳು

ದೇಶದಲ್ಲೇ ಮೊದಲಬಾರಿಗೆ, ವಿದೇಶಿ ಹಾಗು ಸ್ವದೇಶಿ ಬಂಡವಾಳ ಹೂಡಿಕೆದಾರರು ಮಾಡುವ ಅಪರಾಧಗಳನ್ನು ಕಾನೂನುಬದ್ಧಗೊಳಿಸುವ ಜನವಿರೋಧಿ ಪ್ರಸ್ತಾಪಗಳು ಬಜೆಟ್ಟಿನಲ್ಲಿ ವ್ಯಕ್ತವಾಗಿರುವುದು ಆಘಾತಕಾರಿಯಾಗಿದೆ. ಉದ್ಯೋಗದಾತರು ಮಾಡುವ ಷರತ್ತುಗಳ ಉಲ್ಲಂಘನೆ ಹಾಗು ಅಪರಾಧಗಳನ್ನು ಕ್ರಿಮಿನಲ್‌ ವ್ಯಾಪ್ತಿಯಿಂದ ಹೊರತರಲು ಅನುಕೂಲವಾಗುವ ಮಸೂದೆಗಳನ್ನು ಜಾರಿಗೆ ತರುವುದಾಗಿ ಪ್ರಕಟಿಸಲಾಗಿದೆ. ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡ ರೈತ -ಕೃಷಿ ಕೂಲಿಕಾರ್ಮಿಕರಿಗೆ ಉದ್ಯೋಗ ಅವಕಾಶದ ನಿರಾಕರಣೆ, ಅಕ್ರಮವಾಗಿ ಗುತ್ತಿಗೆ ಆದಾರದಲ್ಲಿನ ಕೆಲಸಕ್ಕೆ ಮಾತ್ರ ನೇಮಕ ಮಾಡುವುದು ಮತ್ತು ಹಲವು ರೀತಿಯ ಕಾನೂನು ಉಲ್ಲಂಘನೆ ಮಾಡುವ ಮಾಲಕರಿಗೆ ಸರ್ಕಾರವೇ ರಕ್ಷಣೆಯಾಗಿ ನಿಲ್ಲುತ್ತದೆ. ಬೇಲಿಯೇ ಎದ್ದು ಹೊಲ ಮೇಯುವಂತೆ ಇದು ಸರ್ಕಾರವೆ ಅಪರಾಧಗಳನ್ನು ಕಾನೂನು ಬದ್ಧಗೊಳಿಸುವ ನೀತಿಯಾಗಿದೆ ಎಂದಿದ್ದಾರೆ.

ಅಮಾನವೀಯ ಗುತ್ತಿಗೆ ಪದ್ಧತಿ, ಹಂಗಾಮಿ ಕೆಲಸದ ಪದ್ಧತಿಗಳನ್ನು ನಿಗ್ರಹಗೊಳಿಸುವ “ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಮಾತಿ ಖಾತರಿಪಡಿಸುವ” ಕಾನೂನು ಜಾರಿಗೆ ಕಾರ್ಮಿಕ ಸಂಘಗಳು ಹಲವು ವರ್ಷಗಳಿಂದ ಮಂಡಿಸುತ್ತಿರುವ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ರಾಜ್ಯದ ಕಾರ್ಮಿಕರಿಗೆ ಖಾಯಂ ಉದ್ಯೋಗ ಸೃಷ್ಟಿ ಮಾಡುವ ಯಾವ ಪ್ರಸ್ತಾಪಗಳೂ ಈ ಬಜೆಟಿನಲ್ಲಿ ಇಲ್ಲವಾಗಿದೆ. ನಾಡು-ನುಡಿ-ಜನತೆಯ ಕುರಿತ ಬರಿಮಾತಿನ ಕಾಂಗ್ರೆಸ್ ಪಕ್ಷದ ನೀತಿಯು ಬಯಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಮುನಿಸಿಪಲ್‌ ಕರ‍್ಮಿಕರ ನೇರ ಪಾವತಿಗೆ ತರುವ ನಿರೀಕ್ಷೆಗಳನ್ನು ಸಹ ಹುಸಿ ಮಾಡಿ, ರ‍್ಕಾರದ ಖಜಾನೆಗೆ ಆಗುತ್ತಿದ್ದ ೩೦% ಉಳಿಕೆಯನ್ನು ಸಹ ಮಾಡದೆ ಗುತ್ತಿಗೆದಾರರ ಹಿತ ರಕ್ಷಣೆಗೆ ಮುಂದಾಗಿದೆ ಎಂದು ಸಿಐಟಿಯು ಆರೋಪಿಸಿದೆ. ಗಾರ್ಮೆಂಟ್ ಕಾರ್ಮಿಕರ ಕನಿಷ್ಟ ವೇತನವನ್ನು ದಶಕಗಳಿಂದ ಪರಿಷ್ಕರಣೆ ಮಾಡಲಾಗದ ರಾಜ್ಯ ಸರ್ಕಾರ, ಸಿದ್ಧ ಉಡುಪು ತಯಾರಿಸುವ ಕಾರ್ಖಾನೆಗಳ ಮಾಲಕರಿಗೆ ರಿಯಾಯಿತಿಗಳನ್ನು ಘೋಷಿಸಿದೆ. ಬಹು ಪಾಲು ಮಹಿಳೆಯರ ಶ್ರಮದ ಶೋಷಣೆಗೆ ಅವಕಾಶ ಮಾಡಿಕೊಡುವುದು ಯಾವ ರೀತಿಯ ಸ್ತ್ರೀ ಶಕ್ತಿ ಯೋಜನೆ ಎಂಬುದನ್ನು ಸರ್ಕಾರ ಜನತೆಗೆ ವಿವರಿಸಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ. ಕೌಶಲ್ಯ ಅಭಿವೃದ್ಧಿಯ ನೆಪದಲ್ಲಿ ಅಗ್ಗದ ಕೂಲಿಗೆ ರಾಜ್ಯದ ಯುವಕರನ್ನು ಶೋಷಣೆ ಮಾಡಲು ಕಾರ್ಪೊರೇಟ್ ಬಂಡವಾಳಕ್ಕೆ ಅವಕಾಶ ನೀಡಲಾಗಿದೆ. ಸಂಘಟಿತ ಹಾಗೂ ಐಟಿ ಬಿಟಿ ಕ್ಷೇತ್ರದ ಕಾರ್ಮಿಕರ ಕೆಲಸದ ಅವಧಿಯನ್ನು ವಿಸ್ತರಿಸುವ, ಕಾರ್ಮಿಕ ಕಾನೂನುಗಳಿಂದ ನೀಡಿರುವ ವಿನಾಯಿತಿಗಳನ್ನು ಹಿಂಪಡೆಯುವ ಯಾವುದೇ ಸೂಚನೆಗಳಿಲ್ಲ. ಹಾಗು ಅಸಂಘಟಿತ ವಲಯದಲ್ಲಿ ದುಡಿಯುವ ವಿವಿಧ ರಂಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ವಿಚಾರದಲ್ಲಿ ೫೦೦ ಕೋಟಿ ಅನುದಾನ ನೀಡುವ ಮೂಲಕ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಇಚ್ಚಾ ಶಕ್ತಿಯನ್ನು ರ‍್ಕಾರ ತೋರದೆ ಇರುವುದು ಅಸಂಘಟಿ ಕರ‍್ಮಿಕರಿಗೆ ಮಾಡಿದ ಅನ್ಯಾಯ ಎಂದು ಸಿಐಟಿಯು ಆಪಾದಿಸುತ್ತದೆ. ಈ ಬಜೇಟ್‌ ನಲ್ಲಿ ಅಸಂಘಟಿತ ಕರ‍್ಮಿಕರಿಗೆ ಯಾವುದೇ ಕಲ್ಯಾಣ ಯೋಜನೆಗಳ ಪ್ರಸ್ತಾಪಗಳು ಇಲ್ಲ. ಸ್ಕೀಂ ನೌಕರರಲ್ಲಿ, ಆಶಾ, ಅಂಗನವಾಡಿ ಹಾಗು ಅಕ್ಷರ ದಾಸೋಹ ಕಾರ್ಮಿಕರಿಗೆ ಅತ್ಯಲ್ಪ ಪ್ರಮಾಣದ ವೇತನ ಹೆಚ್ಚಳವನ್ನು ನೀಡಲಾಗಿದೆ. ಚುನಾವಣೆಗೆ ಮೊದಲು ಅಸಂಘಟಿತ ಹಾಗು ಯೋಜನಾ ಕಾರ್ಮಿಕರಿಗೆ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಮರೆತಿದೆ ಎಂದಿದ್ದಾರೆ.

ರಾಜ್ಯದ ರೈತರು ಹಾಗು ಶ್ರಮ ಜೀವಿಗಳಿಗೆ ನಿರಾಶೆ ಮೂಡಿಸಿದ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರದ ನವ ಉದಾರೀಕರಣದ ಕಾರ್ಪೋರೇಟ್ ಪರ ಒತ್ತಡಗಳಿಗೆ ಕಾಂಗ್ರೆಸ್ ಪಕ್ಷ ಮಣಿದಿರುವುದು ಸ್ಪಷ್ಟವಾಗಿದೆ. ರಾಜ್ಯದ ಸಾಮಾನ್ಯ ಜನರು ಜಿಎಸ್ಟಿ, ಸೆಸ್ಗಳ ಮೂಲಕ ನೀಡುವ ಹಣದಲ್ಲಿ ರಾಜ್ಯದ ಪಾಲನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತದೆ. ಕೇಂದ್ರ ಸರ್ಕಾರದ ಮಲತಾಯಿ ದೋರಣೆಯನ್ನು ವಿರೋಧಿಸುವ ಹಾಗು ರಾಜ್ಯಕ್ಕೆ ನ್ಯಾಯ ಪಡೆಯುವ ಯಾವ ಪ್ರಸ್ತಾಪಗಳು ರಾಜ್ಯ ಬಜೆಟಲ್ಲಿ ಕಾಣುತ್ತಿಲ್ಲ. ರ‍್ಕಾರದ ಯಾವುದೆ ಅನುದಾನ ನೀಡದೆ, ಕಟ್ಟಡ ಕರ‍್ಮಿಕರ ಕಲ್ಯಾಣ ನಿಧಿಯ ಕೆಲ ಯೋಜನೆಗಳನ್ನು ತನ್ನ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ಸರಿಯಾದ ನಡೆಯಾಗದು ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ.

ಇದನ್ನೂ ನೋಡಿ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಕಳ್ಳ ಕಾಕರ ಪಾಲಾಗದಿರಲಿ – ಎಸ್.‌ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *