ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಘಟನೆಯಲ್ಲಿ ಇಬ್ಬರ ಸಾವು

ಯುನೈಟೆಡ್ ಸ್ಟೇಟ್ಸ್: ಈ ವರ್ಷಾಂತ್ಯದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆಯಲ್ಲಿ ಭಾರತೀಯ ಕಾಲಮಾನ ನಿನ್ನೆ ಶನಿವಾರ ರಾತ್ರಿ ಬಟ್ಲರ್ ಸಿಟಿಯಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದೆ. ಅವರ ಕಿವಿಗೆ ಗಾಯವಾಗಿದೆ. ಅಮೇರಿಕ

ಹಲವು ಸುತ್ತಿನ ಗುಂಡಿನ ದಾಳಿ ನಡೆದಿದ್ದು, 78 ವರ್ಷದ ಡೊನಾಲ್ಡ್ ಟ್ರಂಪ್ ಮುಖಕ್ಕೆ ರಕ್ತವಾಗಿದ್ದು, ಅಂಗಪಕ್ಷಕರು ವೇದಿಕೆಯಿಂದ ಹೊರಗೆ ಕರೆತಂದರು. ಘಟನೆಯಲ್ಲಿ ಬಂದೂಕುಧಾರಿ ಮತ್ತು ಒಬ್ಬ ದಾರಿಹೋಕ ವ್ಯಕ್ತಿ ಮೃತಪಟ್ಟಿದ್ದು, ರ್ಯಾಲಿ ನೋಡಲು ಬಂದಿದ್ದ ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಬುಲ್ಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಮತ್ತು ಗುಂಡಿನ ದಾಳಿಯಾಗುತ್ತಿದ್ದಂತೆ ಟ್ರಂಪ್ ಕುಳಿತರು. ಅವರ ಬೆಂಬಲಿಗರು ಟ್ರಂಪ್ ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ – ದೂರು ದಾಖಲು

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು, ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಘಟನೆ ಬಗ್ಗೆ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅನಾರೋಗ್ಯಕರ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ಘಟನೆಯನ್ನು ಖಂಡಿತಾ ಸಮರ್ಥಿಸುವುದಿಲ್ಲ ಎಂದಿದ್ದಾರೆ.

ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ವೇದಿಕೆಯ ಮೇಲೆ ನುಗ್ಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ನೆಲಕ್ಕೆ ಮುಗ್ಗರಿಸಿದಂತೆ ಆದರು. ಅವರನ್ನು ಸುತ್ತುವರೆದರು ವೇದಿಕೆಯಿಂದ ಹತ್ತಿರದ ವಾಹನಕ್ಕೆ ಬೆಂಗಾವಲು ಮೂಲಕ ಕರೆತಂದರು.

ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯವಾಗಿದೆ ಎಂದು ಟ್ರಂಪ್ ತಮ್ಮ TruthSocial ನೆಟ್‌ವರ್ಕ್‌ನಲ್ಲಿ ಕೆಲವೇ ಗಂಟೆಗಳಲ್ಲಿ ಹೇಳಿದರು. ಹತ್ಯೆಯಾದ ರ್ಯಾಲಿಯ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ದಾಳಿಯು ಪ್ರಪಂಚದಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಅಧ್ಯಕ್ಷ ಬೈಡನ್ ಘಟನೆ ಬಗ್ಗೆ ಟ್ರಂಪ್ ಅವರ ಜೊತೆ ಚರ್ಚಿಸಲಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ರಾಜಕೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿದೆ, ಈ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಅಭ್ಯರ್ಥಿಗಳಿಗೆ ಬಿಗಿ ಭದ್ರತೆ ಇದೆ.ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿಯನ್ನು 1963 ರಲ್ಲಿ ಅವರ ಮೋಟಾರು ವಾಹನದಲ್ಲಿ ಸವಾರಿ ಮಾಡುವಾಗ ಹತ್ಯೆ ಮಾಡಲಾಯಿತು, ಅವರ ಸಹೋದರ ಬಾಬಿ ಕೆನಡಿ ಅವರನ್ನು 1968 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ 1981 ರಲ್ಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದರು.

ಇದನ್ನೂ ನೋಡಿ: ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತ – ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರಗಾಯ Janashakthi Media

Donate Janashakthi Media

Leave a Reply

Your email address will not be published. Required fields are marked *