ಮಹಾರಾಷ್ಟ್ರ| ಜಿಬಿಎಸ್ ಎಂಬ ವಿಚಿತ್ರ ರೋಗ ಹೆಚ್ಚಳ; ಮೊದಲ ಸಾವು ದಾಖಲು

ಪುಣೆ: ಗುಯಿಲಿನ್-ಬಾರ್ರೆ ಸಿಂಡ್ರೋಮ್ (GBS) ಎಂಬ ವಿಚಿತ್ರ ರೋಗದ ಲಕ್ಷಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಜಿಬಿಎಸ್ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆ ಕಾಯಿಲೆ ಆಗಿದ್ದೂ, ಇದು ವ್ಯಕ್ತಿಯೊಬ್ಬನ ನರಗಳ ಮೇಲೆ ದಾಳಿ ಮಾಡುತ್ತದೆ.

ಈ ಕಾಯಿಲೆ ವಿಪರೀತವಾದ ನಂತರ ನರಗಳ ಭಾಗ ಹಾನಿಗೊಳಿಸುತ್ತದೆ ಮತ್ತು ಸ್ನಾಯು ದೌರ್ಬಲ್ಯ, ಜುಮ್ಮೆನಿಸುವಿಕೆ, ನಿಶ್ಯಕ್ತಿ ಸೇರಿ ಪಾರ್ಶ್ವವಾಯುಗೆ ರೋಗಿ ತುತ್ತಾಗುತ್ತಾನೆ. ಇದೇ ರೋಗದ ಕಾರಣಕ್ಕೆ ಇದೀಗ ಮಹಾರಾಷ್ಟ್ರದಲ್ಲಿ ಮೊದಲ ಸಾವು ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರು| ಬೇಸಿಗೆಗೆ 80 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ: IISc ಮತ್ತು BWSSB ವರದಿ

ಮಹಾರಾಷ್ಟ್ರದಲ್ಲಿ ಕೆಲವೇ ದಿನಗಳಲ್ಲಿ ಈ ರೋಗದ ಲಕ್ಷಣ ಇರುವ 100ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಪುಣೆ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು, ಜಿಬಿಎಸ್ ರೋಗಕ್ಕೆ ಬಲಿಯಾಗಿದ್ದಾರೆ.

ಇದೀಗ ಜಿಬಿಎಸ್ ರೋಗಕ್ಕೆ ಜೀವ ಕಳೆದುಕೊಂಡಿರುವ ವ್ಯಕ್ತಿ ಸೋಲಾಪುರದ ತಮ್ಮ ಹಳ್ಳಿಗೆ ಹೋಗಿ ಬಂದಿದ್ದರು. ಹೀಗೆ ಹಳ್ಳಿಯಿಂದ ಬಂದ ನಂತರ ಅತಿಸಾರದಿಂದ ಬಳಲುತ್ತಿದ್ದರು. ಇದಕ್ಕೂ ಮೊದಲು ಶಂಕಿತ ಜಿಬಿಎಸ್ ಕಾಯಿಲೆಗೆ ವ್ಯಕ್ತಿಯು ಬಲಿಯಾಗಿದ್ದರೂ ಪ್ರಕರಣ ದೃಢವಾಗಿರಲಿಲ್ಲ, ಆದರೆ ಇದೀಗ ಜಿಬಿಎಸ್ ರೋಗಕ್ಕೆ ಮೊದಲ ಬಲಿ ಆಗಿದ್ದು ಭಯದ ವಾತಾವರಣ ಸೃಷ್ಟಿ ಮಾಡಿದೆ.

ಇದನ್ನೂ ನೋಡಿ: LIVE: ಸಾಂಸ್ಕೃತಿಕ ಸಂವಿಧಾನ ಪರಿಷೆ

Donate Janashakthi Media

Leave a Reply

Your email address will not be published. Required fields are marked *