ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಾಂಶುಪಾಲೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಶಾಲೆಯ ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಹಿಗ್ಗಾ-ಮುಗ್ಗಾ ಥಳಿಸಿ, ಕೈ ಮತ್ತು ಕಾಲುಗಳ ಮೇಲೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಡೆದಿದೆ.

ವಿಶೇಷ ಚೇತನ ವಿದ್ಯಾರ್ಥಿಯ ಸಹಾಯಕ್ಕೆ ಧಾವಿಸಲಿಲ್ಲ ಅಂತ ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಕೈ ಮತ್ತು ಕಾಲುಗಳ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

ಇದನ್ನೂ ಓದಿ: ಮಗುವನ್ನು ವಿಶ್ವಮಾನವನ್ನಾಗಿ ರೂಪಿಸುವುದು ಶಿಕ್ಷಣದ ಕರ್ತವ್ಯ: ಕಾರ್ಯದರ್ಶಿ ಅಹಮದ್

ಮಗಳಿಗೆ ಹಿಗ್ಗಾಮುಗ್ಗ ಹೊಡೆದಿರುವುದನ್ನು ಖಂಡಿಸಿ ಪ್ರಾಂಶುಪಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ಸಂಬಂಧ ಪ್ರಾಂಶುಪಾಲೆ ಉಷಾ ಕಿರಣ್ ಮಾತನಾಡಿ, ತರಗತಿಯಲ್ಲಿ ನಡೆಯಲು ಆಗದ ವಿಶೇಷ ಚೇತನ ಮಗು ಇದೆ. ವಿಶೇಷ ಚೇತನ ಮಗುವಿನ ಬಳಿ ಯಾರು ಹೋಗಬಾರದು, ಮಾತನಾಡಬಾರದು ಅಂತ ಕೆಲ ಮಕ್ಕಳು ಹೇಳುತ್ತಿದ್ದರಂತೆ.

ಆ ಮಗುವಿಗೆ ಸಹಾಯಕ್ಕೆ ಆಯಾ ಇದ್ದಾರೆ. ಆದರೆ ಕೆಲವೊಮ್ಮೆ ಮಕ್ಕಳ ಸಹಾಯ ಬೇಕಾಗುತ್ತದೆ. ಮಗುವಿನ ಸಹಾಯಕ್ಕೆ ಕರೆದಾಗ “ನಾವು ಆಳುಗಳಾ” ಎಂದು ಇತರ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

“ಕಳೆದ ಮೂರು ತಿಂಗಳಿನಿಂದ ಇದೇ ರೀತಿ ನಡೆಯುತ್ತಿದ್ದು, ನಿನ್ನೆಯೂ ಹೀಗೆ ಆಗಿದೆ. ಹೀಗಾಗಿ, ನಾನು ಆ ಮಗುವಿನ ಕೈ ಮತ್ತು ಕಾಲಿಗೆ ಹೊಡೆದಿದ್ದೇನೆ. ನಾನು ಆ ರೀತಿ ಹೊಡೆಯಬಾರದಿತ್ತು ತಪ್ಪಾಗಿದೆ. ವಿಶೇಷಚೇತನ ಮಗುವಿಗೆ ಹೀಗಾಗುತ್ತಿದೆ ಅಂತ ಹೊಡೆದೆ. ವಿದ್ಯಾರ್ಥಿನಿಯ ಪೋಷಕರಿಗೆ ನಾನು ಹೇಳಬೇಕಿತ್ತು, ಆದರೆ ಆ ಕ್ಷಣದಲ್ಲಿ ಆ ರೀತಿ ಮಾಡಿದ್ದೇನೆ” ಎಂದು ವಿಷಾಧ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ವಚನಾನುಭವ 19| ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು | ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *