ಬೆಂಗಳೂರು : ಗ್ರಾಹಕರು ಇನ್ಮುಂದೆ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಯೋಚಿಸುವಂತಾಗಿದೆ. ಈಗಾಗಲೇ ಊಟ ಉಪಾಹಾರದ ಬೆಲೆ ಹೆಚ್ಚಳವಾಗಿದೆ ಹೀಗಿದ್ದು, ಇದೀಗ ಗ್ಯಾಸ್ ದರ ಏರಿಕೆ ಹಿನ್ನೆಲೆ ಹೋಟೆಲ್‌ಗಳಲ್ಲಿ ಊಟ ತಿಂಡಿ ಬೆಲೆ ಇನ್ನಷ್ಟು ಹೆಚ್ಚಳವಾಗಲಿದ್ದು ಗ್ರಾಹಕರಿಗೆ ಶಾಕ್ ಎದುರಾಗಿದೆ.
ಹೌದು, ನಿರಂತರವಾಗಿ ಗ್ಯಾಸ್ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕರು ಊಟ, ತಿಂಡಿ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಗ್ಯಾಸ್ ದರ ಹೆಚ್ಚಳ ಆಗಿರುವ ಕುರಿತು ಕೇಂದ್ರ ಸಚಿವರ ಜೊತೆ ಹೋಟೆಲ್ ಮಾಲೀಕರು ಮಾತುಕತೆ ನಡೆಸಿದ್ದಾರೆ. ದರ ಏರಿಕೆಯಿಂದ ಉಂಟಾಗ್ತಿರೋ ತೊಂದರೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಕೇಂದ್ರದಿಂದ ಯಾವುದೇ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನಲೆ ಹೋಟೆಲ್ ಮಾಲೀಕರು ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಹೋಟೆಲ್ ನಡೆಸೋದೆ ಕಷ್ಟ ಎನ್ನುತ್ತಿರೋ ಹೋಟೆಲ್ ಮಾಲೀಕರು ಹೀಗಾಗಿ ಶೇ.10ರಷ್ಟು ಏರಿಕೆ ಮಾಡುವ ಬಗ್ಗೆ ಹೋಟೆಲ್ ಮಾಲೀಕರು ಚರ್ಚೆ ನಡೆಸಿದ್ದಾರೆ. ಈಗಾಗಲೇ ಈ ಬಗ್ಗೆ ಸಭೆ ನಡೆಸಿರೋ ಬೆಂಗಳೂರು ಹೋಟೆಲ್ ಮಾಲೀಕರ ಸಂಘ. ಇನ್ನು ಕೆಲವೇ ದಿನಗಳಲ್ಲಿ ಬೆಲೆ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಹೋಟೆಲ್‌ಗಳಲ್ಲಿನ ದರ ಏರಿಕೆ ಪರಿಹಾರವಲ್ಲ: ಸಿಪಿಐ(ಎಂ)
ಗ್ರಾಹಕರ ಜೇಬಿಗೆ ಕತ್ತರಿ : ಈಗಾಗಲೇ ಗ್ರಾಹಕರಿಗೆ ಬಾಯಿ ಸುಡುತ್ತಿರುವ ಹೊಟೆಲ್ ತಿಂಡಿ ತಿನಿಸುಗಳು. ಒಂದು ಟೀ ಬೆಲೆ 12-15ರೂ ದಾಟಿದೆ. ಊಟ ಉಪಾಹಾರದ ಬೆಲೆ ನೂರರ ಗಡಿ ದಾಟಿದೆ. ಇದೀಗ ಗ್ಯಾಸ್ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆ ಹೋಟೆಲ್ ಮಾಲೀಕರು ಶೇ.10ರಷ್ಟು ಬೆಲೆಏರಿಕೆ ಮಾಡಲು ಹೊರಟಿರುವುದು ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ.