ಪೆನ್​​ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ‌ ಡಿ.ಕೆ. ಶಿವಕುಮಾರ್​ ಅವರ ಕೈವಾಡವಿದೆ; ಕೆ. ಎಸ್. ಈಶ್ವರಪ್ಪ

ಬಾಗಲಕೋಟೆ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಿಡಿಕಾರಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ‌ ಡಿ.ಕೆ. ಶಿವಕುಮಾರ್​ ಅವರ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಡಿಕೆಶಿ ಅನ್ನು ಪೆನ್​​ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ ಎಂದು ಹೇಳಿದರು.

‘ಇದರಲ್ಲಿ ಮಾನ್ಯ ಎಚ್​.ಡಿ. ಕುಮಾರಸ್ವಾಮಿ ಅವರ ಪಾತ್ರ ದೊಡ್ಡದು ಅಂತ ಸಹ ಹೇಳಲ್ಲ. ನಾನು ಹೇಳೋದೇನು ಅಂದ್ರೆ, ಈ ಎಲ್ಲಾ ಘಟನೆಗಳಿಂದ ಕರ್ನಾಟಕ ರಾಜ್ಯದ ಜನತೆ, ದೇಶ ಹಾಗೂ ಪ್ರಪಂಚದ ಮುಂದೆ ಬೆತ್ತಲೆಯಾಗಿ ಬಿಟ್ಟಿದ್ದಾರೆ. ನಮ್ಮಲ್ಲಿ ಹೆಣ್ಣನ್ನು ತಾಯಿ ಅಂತ ಕರೆಯುತ್ತೀವಿ.

ಇದನ್ನು ಓದಿ : ಆರನೇ ಹಂತದಲ್ಲಿ ಹಕ್ಕು ಚಲಾಯಿಸಿದ ಘಟಾನುಘಟಿಗಳು

ತಾಯಿ ಅಂತ‌ ಕರೆಯುವ ಹೆಣ್ಣಿಗೆ ಇಷ್ಟು ಅಪಮಾನ ಆಗಿದ್ದು, ಇದೇ ಮೊದಲನೇ ಬಾರಿ. ಈ ವಿಷಯದಲ್ಲಿ ನಾನು ಸಿದ್ದರಾಮಯ್ಯ, ಗೃಹಮಂತ್ರಿಗೆ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ’ ಎಂದರು.

‘ನಿಮ್ಮ ಕೈಯಲ್ಲಿ ಆಗಲ್ಲ ಎಂಬುದು ಖಚಿತವಾದರೆ ದಯವಿಟ್ಟು ಕೇಸ್​ನ ಸಿಬಿಐಗೆ ಹಸ್ತಾಂತರಿಸಿ. ನಾನು ಡಿ.ಕೆ. ಶಿವಕುಮಾರ್​ ಕುರಿತು ಆಪಾದನೆ ಮಾಡಲ್ಲ. ಕುಮಾರಸ್ವಾಮಿ ಬಗ್ಗೆಯೂ ಆರೋಪ ಮಾಡಲ್ಲ. ನೀವು ಇಬ್ಬರು ಕೂಡ ಒಳ್ಳೆಯವರೆ. ಇಂತಹ ಸಂದರ್ಭ ನಮ್ಮ ರಾಜ್ಯದ ಇತಿಹಾಸದಲ್ಲಿ ಬಂದಿಲ್ಲ. ಅದಕ್ಕೆ ಸಿಬಿಐಗೆ ಕೇಸ್​ ಹಸ್ತಾಂತರಿಸಿ ಎಂದು ಮನವಿ ಮಾಡ್ತಿದ್ದೀನಿ ಅಷ್ಟೇ’ ಎಂದು ಹೇಳಿದ್ದಾರೆ.

ಇದನ್ನು ನೋಡಿ : ರಾಜಸ್ಥಾನ : ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ? ಲೆಕ್ಕಾಚಾರಗಳು ಏನು ಹೇಳುತ್ತಿವೆ! Janashakthi Media

Donate Janashakthi Media

Leave a Reply

Your email address will not be published. Required fields are marked *