ಬಿಹಾರ: ರಾಜ್ಯದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ – ಜೆಡಿಯು ಮೈತ್ರಿಕೂಟದ ಒಟ್ಟು 31 ಶಾಸಕರು ಮೇ 7ರಂದು ಪ್ರಮಾಣ ವಚನ ಸ್ವೀಕರಿಸಿದರು. ಸಭೆ
ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆ ಪ್ರವೇಶಿಸಿದ್ದ ನಿತಿಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸಹ ಈ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಹಗರಣ: ಇಡಿ ದಾಳಿ ವೇಳೆ ಕಿಟಕಿಯಿಂದ ಹಣ ಎಸೆದ ಆರೋಪಿಗಳು
ನಿಶಾಂತ್ ಕುಮಾರ್‌ಗೆ ಸಾಮ್ರಾಟ್ ಚೌಧರಿ ಸರ್ಕಾರದಲ್ಲಿ ಆರೋಗ್ಯ ಸಚಿವ ಸ್ಥಾನ ದೊರಕಿದೆ. ಹಲವು ವರ್ಷಗಳ ಕಾಲ ಕಾರ್ಯಕರ್ತರು ಎಷ್ಟೇ ಮನವಿ ಮಾಡಿಕೊಂಡರೂ ರಾಜಕೀಯಕ್ಕೆ ಬಾರದಿದ್ದ ನಿಶಾಂತ್ ಕುಮಾರ್ ಇದೀಗ ಮಂತ್ರಿಯಾಗಿ ವಿಧಾನಸಭೆ ಪ್ರವೇಶಕ್ಕೆ ಸಜ್ಜಾಗಿರುವುದು ನಿತಿಶ್ ಕುಮಾರ್ ಬೆಂಬಲಿಗರಲ್ಲಿ ಸಂತಸವನ್ನುಂಟುಮಾಡಿದ್ದರೆ, ಈ ಆಯ್ಕೆ ಸಾಮಾನ್ಯ ಜನರಿಗೆ ಹಾಸ್ಯಾಸ್ಪದವಾಗಿದೆ.
ಹೌದು, ನಿಶಾಂತ್ ಕುಮಾರ್ ಆರೋಗ್ಯ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ವಿಡಿಯೊಗಳನ್ನು ಹಂಚಿಕೊಂಡಿದ್ದು, ಮೊದಲು ಈತನ ಆರೋಗ್ಯ ಸರಿ ಮಾಡಿಕೊಳ್ಳಲು ಹೇಳಿ ಎಂದು ಕಾಲೆಳೆದಿದ್ದಾರೆ. ಪಕ್ಷದ ಸಭೆಯಲ್ಲಿ ವ್ಯಕ್ತಿಯೋರ್ವ ಭಾಷಣ ಮಾಡುತ್ತಿದ್ದರೆ ಪಕ್ಕದಲ್ಲಿದ್ದ ಕುರ್ಚಿ ಮೇಲೆ ಕುಳಿತಿದ್ದ ನಿಶಾಂತ್ ಕುಮಾರ್ ನಶೆಯಲ್ಲಿ ತೇಲಾಡಿದ್ದ ವಿಡಿಯೊ ಹಂಚಿಕೊಂಡಿದ್ದು, ಇಂಥವರಿಗೆ ಹೇಗೆ ಆರೋಗ್ಯ ಸಚಿವನ ಸ್ಥಾನ ಕೊಡಲು ಸಾಧ್ಯ ಎಂದು ಟೀಕಿಸಿದ್ದಾರೆ.
ಅಲ್ಲದೇ ನಿಶಾಂತ್ ಕುಮಾರ್ ದೇಹದ ಪರಿಸ್ಥಿತಿ ಬಗ್ಗೆಯೂ ಸಹ ಕಾಮೆಂಟ್ ಮಾಡಲಾಗಿದ್ದು, ಅನಾರೋಗ್ಯಕ್ಕೆ ತುತ್ತಾದಂತಿರುವ ಈತ ಜನರ ಆರೋಗ್ಯ ಸುಧಾರಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.
ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media
