ಅನಿರ್ದಿಷ್ಟಾವಧಿ ಧರಣಿಗೆ ಮಣಿದ ಪುರಸಭೆ ; ನಿವೇಶನ ಹಂಚಿಕೆಗೆ ಒಪ್ಪಿಗೆ

ಬಳ್ಳಾರಿ : ಕಳೆದ 12 ವರ್ಷಗಳಿಂದ ನಿವೇಶನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ನಿರಾಶ್ರಿತರ ಹೋರಾಟಕ್ಕೆ ಜಯ ಸಿಕ್ಕಿದೆ. ಕುರುಗೋಡು ಪುರಸಭೆಯು ನಿವೇಶನ ರಹಿತರಿಗೆ ಮನೆ ನೀಡಲು ಒಪ್ಪಿಗೆಯನ್ನು ಸೂಚಿಸಿದೆ.

ಹೌದು, ನಿವೇಶನಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದಲೂ ಮಾಡಿದ ಅನಿರ್ದಿಷ್ಟಾವಧಿ ಧರಣಿಗೆ ಕುರುಗೋಡು ಪುರಸಭೆ ಆಡಳಿತ ಕೊನೆಗೂ ಭೂ ಪರಿವರ್ತನೆ ಮಾಡಿ ಅಭಿವೃದ್ಧಿಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದೆ. ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗಿದೆ. ಹೋರಾಟದ ಸಂದರ್ಭದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿವೆ. ಹೋರಾಟ ನಿರತರ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಆದರೂ ಪಟ್ಟು ಬಿಡದೇ ಹೋರಾಟ ನಡೆಸಿದ ಭಾಗವಾಗಿ ಇಂದು 680 ಜನರಿಗೆ ಹಂಚಿಕೆ ನೀಡಲು ಪುರಸಭೆ ತೀರ್ಮಾನವನ್ನು ಮಾಡಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜೆ ಸತ್ಯಬಾಬು ತಿಳಿಸಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ ಹೋರಾಟವನ್ನು ಹಿಂಪಡೆಯಲಾಗಿದೆ. ಹೋರಾಟದ ಮೂಲಕ ಹಕ್ಕನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಈ ಹೋರಾಟ ಸಾಕ್ಷಿಯಾಗಿದೆ ಎಂದು  ಎಂದು ಸಿಪಿಐಎಂ ಮುಖಂಡ  ವಿ ಎಸ್‌ ಶಿವಶಂಕರ ತಿಳಿಸಿದ್ದಾರೆ.

ಇದನ್ನೂ ಓದಿ : ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಯೋಗ್ಯತೇ ಇಲ್ಲದ ಸರ್ಕಾರ – ರೈತ ಸಂಘ ಆರೋಪ

ಈ ಐತಿಹಾಸಿಕ ಹೋರಾಟದ ನೇತೃತ್ವವನ್ನು ಸಿಪಿಐಎಂ ಕುರುಗೋಡು ತಾಲ್ಲೂಕ ಕಾರ್ಯದರ್ಶಿ  ಗಾಳಿ  ಬಸವರಾಜು, ಮುಖಂಡರಾದ ಎನ್ ಸೋಮಪ್ಪ, ಮಹಮದ್ ಖಾನ್, ಯಂಕಮ್ಮ, ನಾಗರತ್ನಮ್ಮ, ಎಂ ಮಂಜುನಾಥ ,ಅಮೀನ್ ಸಾಬ್ ,ಕೆಂಚಪ್ಪ, ಹುಲೆಪ್ಪ, ಶ್ರೀನಿವಾಸ್ ,ಸಿ ರಾಮಣ್ಣ, ಮುದುಕಪ್ಪ ,ಸುಜಾತಮ್ಮ, ರಾಣೆಮ್ಮ ,ಹೊಳೆಮ್ಮ, ಅಲ್ಲಮ್ಮ, ಹನುಮಕ್ಕ ,ಜೈತೂನ್ , ಜಿ ರಾಮಣ್ಣ , ಮೌನೇಶ್ ಮುಂತಾದವರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *