ಬೆಳಗಾವಿ | ಗೋಮಾಳದ ಜಾಗಕ್ಕಾಗಿ ಗಲಾಟೆ – ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿದ ಸವರ್ಣೀಯರು

ಬೆಳಗಾವಿ: ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗಕ್ಕಾಗಿ ನಡೆದ ಘರ್ಷಣೆ ವೇಳೆ ಸವರ್ಣೀಯ ಕುಟುಂಬದ ಸದಸ್ಯರು ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮುಗಳಖೋಡ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಿತ್ತು.

ಗೋಮಾಳ ಜಾಗದಲ್ಲಿ ಶಡ್ ಹಾಕಿಕೊಂಡಿದ್ದ ಮಹಾದೇವ ಮಾದರ್ ಕುಟುಂಬ ಸುಮಾರು 12 ಗುಂಟೆ ಗೋಮಾಳ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿತ್ತು. ಈ ಗುಡಿಸಲುಗಳಿಗೆ ಮಹಾವೀರ ಕುರಾಡೆ ಕುಟುಂಬದವರು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕಂಬಾಲಪಲ್ಲಿಯ ಕತ್ತಲು ಕೊಪ್ಪಳದಲ್ಲಿ ನೀಗಲಿದೆಯೇ? ಜಾತಿ ಪ್ರಜ್ಞೆಯನ್ನು ಅಣಕಿಸುವ ಮರಕುಂಬಿ ತೀರ್ಪು ಭವಿಷ್ಯದಲ್ಲಿ ಭರವಸೆ ಹುಟ್ಟಿಸಬಹುದೇ?

ಬಹಳ ದಿನಗಳಿಂದಲೂ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ತಡರಾತ್ರಿ ಬೆಂಕಿ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ. ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನ ಪೊಲೀಸರು ತಿಳಿಗೊಳಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನ ನಡೆದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮರಕಂಬಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಘಟನೆಯಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿರುವುದನ್ನು ನೋಡಿದರೆ ಈ ವ್ಯವಸ್ಥೆ ದಲಿತರಿಗೆ ದಕ್ಕಿದ ನ್ಯಾಯವನ್ನು ಸಹಿಸುವುದಿಲ್ಲ ಎಂಬಂತಿದೆ.  ಕಾನೂನಿನ ಜೊತೆಯಲ್ಲಿ ಜನರಿಗೆ ಅರಿವು ಬರುವವರೆಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಲ್ಲುವುದಿಲ್ಲ ಎಂಬ ಚರ್ಚೆಗಳು ಕೇಳಿ ಬಂದಿವೆ.

ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ

 

Donate Janashakthi Media

Leave a Reply

Your email address will not be published. Required fields are marked *