ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆ “ಕುರುಡನ ಹೆಗಲ ಮೇಲೆ ಕುಂಟನ ಸವಾರಿ”ಯಂತಿದೆ! ಕಾಂಗ್ರೆಸ್‌ ಟ್ವೀಟ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಚರ್ಚೆಯ  ಮಾತುಗಳು ಹಲವು ದಿನಗಳಿಂದ ಸುದ್ದಿಯಲ್ಲಿದೆ. ಕಳೆದ ಬಾರಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ ಈ ಬಾರಿ ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಜೆಡಿಎಸ್‌ ಪಕ್ಷವನ್ನು ‘ನಾಗವಲ್ಲಿ’ಗೆ ಹೋಲಿಸಿ ಟ್ವೀಟ್‌ ಮಾಡಿದೆ.

‘ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದಂತೆ ಕಾಣುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ?’ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಎದ್ದು ಕಾಣುತ್ತಿದೆ, ಥೇಟ್. ನಾಗವಲ್ಲಿಯ ತರ !!’ ಎಂದು ವ್ಯಂಗ್ಯ ಮಾಡುವ ಮೂಲಕ ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಬಿಜೆಪಿಗೆ ದಲಿತರ ರಾಜಕೀಯ ಹಾಗೂ ಸಾಮಾಜಿಕ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ? ದಲಿತರ ತಲೆ ಮೇಲೆ ಚಡ್ಡಿ ಹೊರಿಸಿತ್ತು ಬಿಜೆಪಿ ,ಹಣವನ್ನು ದುರುಪಯೋಗ ಮಾಡಿತ್ತು ಬಿಜೆಪಿ. ದಲಿತರಿಗೆ ಮಾತ್ರ ಚಪ್ಪಲಿ ಕಾಯುವ ಟೆಂಡರ್ ಮೀಸಲಿಟ್ಟಿತ್ತು ಬಿಜೆಪಿ, ಸೆಂಟ್ರಲ್ ವಿಸ್ತಾ, ರಾಮಮಂದಿರದ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ ಬಿಜೆಪಿ. ಈಗ ದಲಿತ ಸಮುದಾಯದ ಉಪಸಭಾಪತಿಯ ಮುಖಕ್ಕೆ ಪೇಪರ್ ಎಸೆದು ಅವಮಾನಿಸಿದೆ ಬಿಜೆಪಿ ದಲಿತರನ್ನು  ಯಾಕಿಷ್ಟು ಕೇವಲವಾಗಿ ಕಾಣುತ್ತಿದೆ ಎಂಬುವುದೇ ಪ್ರಶ್ನೆಯಾಗಿದೆ? ಮನುವಾದವೇ ಬಿಜೆಪಿಯ ಪಕ್ಷದ ಬೈಲಾ ಆಗಿದೆಯೇ?  ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

Donate Janashakthi Media

Leave a Reply

Your email address will not be published. Required fields are marked *