ದಿ ಕೇರಳ ಸ್ಟೊರಿ’ ಸಿನಿಮಾ: ಕೇರಳ ಮತ್ತು ಮುಸಲ್ಮಾನರೇ ಅವರ ಗುರಿ

ಸಿ.ಸಿದ್ದಯ್ಯ

 

ಕೇರಳ ಹೈಕೋರ್ಟ್‍  ಪ್ರಶ್ನಿಸಿದಾಗ ಸಿನೆಮಾದ ಟೀಸರ್‍ ನಲ್ಲಿದ್ದ 32000 ಬಿಡುಗಡೆಯಾಗುವ ವೇಳೆಗೆ 3 ಕ್ಕೆಇಳಿಯಿತು. ಸುಪ್ರಿಂಕೋರ್ಟ್‍ ಪ್ರಶ್ನಿಸಿದ ಮೇಲೆ “ಹಿಂದೆಂದೂ ಹೇಳಿರದ ಮೈ ನಡುಗಿಸುವ ನಿಜಕತೆ”  “ಪ್ರಮಾಣಿ ತದತ್ತಾಂಶವನ್ನು ಆಧರಿಸಿರದ ಒಂದು ಕಾಲ್ಪನಿಕ ಆವೃತ್ತಿ ”ಯಾಗಿದೆ . ಇದೇ ಈ  ‘ಸ್ಟೋರಿ’ ಯ ನಿಜವಾದ ಕತೆ ಏನು ಎಂಬುದನ್ನು ಸೂಚಿಸುತ್ತದೆ.

 

ಕಾಶ್ಮೀರದ ಮುಸ್ಲೀಮರ ವಿರುದ್ದ ದ್ವೇಷ ಬಿತ್ತುವ ‘ದಿ ಕಾಶ್ಮೀರ್  ಫೈಲ್ಸ್’ ನಂತರ ಈಗ ಕೇರಳದ ಮುಸ್ಲೀಮರ ವಿರುದ್ದ ದ್ವೇಷ ಬಿತ್ತುವ ‘ದಿಕೇರಳಸ್ಟೋರಿ’ ಸಿನಿಮಾ ಬಂದಿದೆ. ಕೇರಳವನ್ನು ವಶಪಡಿಸಿಕೊಳ್ಳುವ ಆರ್‌ಎಸ್‌ಎಸ್‌ನ ಷಡ್ಯಂತ್ರ ‘ದಿಕೇರಳ ಸ್ಟೋರಿ’ಸಿನಿಮಾ ಹಿಂದೆ ಕೆಲಸ ಮಾಡುತ್ತಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ನಿಜವಾದ ಧಾರ್ಮಿಕ ಸಾಮರಸ್ಯ, ಸಹೋದರತ್ವ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೇರಳ ಜನರನ್ನು ಕಂಡರೆ ಹಿಂದುತ್ವ ವಾದಿಗಳಿಗೆ ಎಲ್ಲಿಲ್ಲದ ಸಂಕಟ. ಕೇರಳದ ಜನತೆಯ ಕೋಮು ಸೌಹಾರ್ಧತೆಯನ್ನು ಒಡೆದು, ಅಲ್ಲಿನ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಶಕ್ತಿಕ್ಷೀಣಿಸುವಂತೆ ಮಾಡಿ, ಆ ಮೂಲಕ ರಾಜಕೀಯ ಅಧಿಕಾರ ಹಿಡಿಯುವ ಹಿಂದುತ್ವ ವಾದಿಗಳ ಮುಂದು ವರಿದ ಪ್ರಯತ್ನವೇ  ಈ ‘ಕೇರಳ ಸ್ಟೋರಿ’ ಸಿನಿಮಾ.

ವಿವೇಕ್ ರಂಜನ್ ಅಗ್ನಿಹೋತ್ರಿಯವರು ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ತೊರೆದ  ವಿಷಯವಾಗಿ ಸಿನಿಮಾ ಮಾಡಿದಾಗ, ಚಿತ್ರದುದ್ದಕ್ಕೂ ಮೂರು ವಿಷಯಗಳನ್ನು ಗುರಿಯಾಗಿಸಲು ಪ್ರಯತ್ನಿಸಿದರು, ಒಂದು, ಕಾಶ್ಮೀರದ ಎಲ್ಲಾ ಸಮಸ್ಯೆಗಳಿಗೆ ಆರ್ಟಿಕಲ್ 370 ಕಾರಣ, ಎರಡು, ಜೆಎನ್‌ಯು ಸೇರಿದಂತೆ ವಿದ್ಯಾರ್ಥಿಗಳ ಮುಷ್ಕರಗಳನ್ನುಭಯೋತ್ಪಾದಕರಿಂದ ಪ್ರಾಯೋಜಿಸಲಾಗುತ್ತಿದೆ., ಮೂರು, ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಆಜಾದಿ ಘೋಷಣೆಗಳು ಮತ್ತು ಕಾಶ್ಮೀರಿ ಪಂಡಿತರನ್ನು ಕೊಂದ ಭಯೋತ್ಪಾದಕರು.

ಈ ಮೂಲಕ ಸಿನಿಮಾಗಳು ಹೇಗೆ ಫ್ಯಾಸಿಸ್ಟ್ ಬಳಕೆಯ ಅಸ್ತ್ರವಾಗುತ್ತಿದೆ ಎಂಬುದನ್ನು ನಾವು ನೋಡುತ್ತೇವೆ. ದೇಶದಲ್ಲಿ ಮತೀಯವಾದ ಮತ್ತು ವಿಭಜನೆಯನ್ನು ಸೃಷ್ಟಿಸಲು ಸಿನಿಮಾವನ್ನು ಬಳಸುತ್ತಿರುವವರನ್ನು ಸಮರ್ಥಿಸುವುದು ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಎಂಬುದನ್ನು ಈ ನೆಲವನ್ನು ಕೋಮುವಾದಗೊಳಿಸಲು, ಸುಳ್ಳುಗಳನ್ನು ಸೃಷ್ಟಿಸಲು ಮತ್ತು ಜನರನ್ನು ವಿಭಜಿಸಲು ಪರವಾನಗಿಯಾಗುವುದಿಲ್ಲ.

ಕೃಪೆ: ಸತೀಶಆಚಾರ್ಯ, ಸೌತ್‍ ಫಸ್ಟ್

ಏನಿದು ಕೇರಳ ಸ್ಟೋರಿ?

ಪ್ರತಿಯೊಂದು ಚಿತ್ರಕ್ಕೂ ಒಂದು ಉದ್ದೇಶವಿರುತ್ತದೆ. ಉದ್ದೇಶಿತ ಪ್ರೇಕ್ಷಕರು ಇರುತ್ತಾರೆ. ಅದರಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಒಂದು ಸಂದೇಶ ಇರುತ್ತದೆ. ಸುದೀಪ್ತೋ ಸೇನ್ ಅವರ 138 ನಿಮಿಷಗಳ ಸುದೀರ್ಘ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಇದೆಲ್ಲದಕ್ಕೂ ‘ದ್ವೇ಼ಷ’ ಎಂಬ ಎರಡು ಅಕ್ಷರಗಳಲ್ಲಿ ಉತ್ತರ ಹೇಳಬಹುದು. ಆದರೆ, ಇದು ಏಕೆ ಎಂದು ನಾವು ಅರ್ಥ ಮಾಡಿ ಕೊಳ್ಳಬೇಕಷ್ಟೆ. ಸಂಘ ಪರಿವಾರ ಕ್ಕಾಗಿಯೇ ಮಾಡಿದಂತಿರುವ ಚಿತ್ರಇದು. ನಿರ್ದೇಶಕ ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ’ ಟ್ರೈಲರ್ ಬಿಡುಗಡೆ ಮಾಡಿ, ಕೇರಳದ 32 ಸಾವಿರ ಯುವತಿಯರು ಐಸಿಸ್‌ಗೆ ಹೋಗಿದ್ದಾರೆ ಎಂಬ ಸುದ್ದಿ ಹಬ್ಬಿಸಿದರು. ಇದರ ಸತ್ಯಾಸತ್ಯಾತೆಗಳ ಕುರಿತಾದ ಪ್ರಶ್ನೆಗಳು, ಸವಾಲುಗಳು ಎದುರಾದಾಗ, 32 ಸಾವಿರ ಯುವತಿಯರ ಸಂಖ್ಯೆಯನ್ನು ಮೂರಕ್ಕೆ ಇಳಿಸಿ, ತಮ್ಮ ಪ್ರಚಾರ ಮುಂದುವರಿಸಿದ್ದಾರೆ.

ಈ  ಚಿತ್ರದ ನಿರ್ಮಾಪಕ ವಿಪುಲ್ ಅಮೃತ್ ಲಾಲ್‌ ಶಾ ಅವರು ಚಿತ್ರ ಕಥೆ ಬರೆದಿದ್ದಾರೆ . ಹಿಂದಿ, ತೆಲುಗು,  ಮಲೆಯಾಳಂ ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗಿದೆ. ಶಾಲಿನಿ ಉನ್ನಿ ಕೃಷ್ಣನ್  ಅವರ ಪಾತ್ರದಲ್ಲಿ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.

ಐಸಿಸ್ ನಿಂದ ತಪ್ಪಿಸಿಕೊಂಡು ಯು ಎನ್ ಕೋರ್ ತಲುಪಿದ ಶಾಲಿನಿ ಉನ್ನಿಕೃಷ್ಣನ್ಅವರ ಕಥೆಯನ್ನು ರೇಖಾತ್ಮಕವಲ್ಲದ ಶೈಲಿಯಲ್ಲಿ, ಸಾಕ್ಷ್ಯ ಚಿತ್ರದಂತೆ ಕಥೆ ಹೇಳಲು ಹೊರಟಿದೆ ‘ಕೇರಳ ಸ್ಟೋರಿ’.  ಕೇರಳದಲ್ಲಿ ಮೂವರು ಹುಡುಗಿಯರ ಬ್ರೈನ್  ವಾಶ್ ಮಾಡಿ  ಅವರನ್ನು ಬಲೆಗೆ ಬೀಳಿಸಿ ಐಸಿಸ್ ಗೆ ಕರೆದೊಯ್ದು, ಅಲ್ಲಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುವುದೇ ಸಿನಿಮಾದ ಕಥೆ. ತಪ್ಪು ತಪ್ಪಾದ ಅಂಕಿ ಅಂಶಗಳು, ತಪ್ಪಾದ ಅನುವಾದಗಳು, ತಪ್ಪು ಉಲ್ಲೇಖಗಳು, ಸಂಬಂಧವಿಲ್ಲದ ಅಂಕಿ ಅಂಶಗಳ ತಪ್ಪು ನಿರೂಪಣೆಗಳು ಚಿತ್ರದುದ್ದಕ್ಕೂ ಎದ್ದು ಕಾಣುತ್ತವೆ.

ಕುರಿಯ ತಲೆ ಕಡಿದು ರಕ್ತ ಸುರಿಯುವುದರೊಂದಿಗೆ ಆರಂಭವಾಗುವ ಚಿತ್ರದಲ್ಲಿ ಹಿಂಸೆಗೆ ವಿಶೇಷ ಸ್ಥಾನವಿದೆ. ಸಿನಿಮಾದ ಸಂದೇಶ ಏನು ಮತ್ತು ಅದು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಈ ಆರಂಭದ ದೃಶ್ಯವೇ ಹೇಳುತ್ತದೆ.  ಚಿತ್ರದ ಯಾವ ಹಂತವನ್ನು ಪ್ರೇಕ್ಷಕರಿಗೆ ಅಸಹನೀಯವಾಗುವ ರೀತಿಯಲ್ಲಿ ಬಳಸಬೇಕು ಎಂಬ ಬುದ್ದಿವಂತಿಕೆ ನಿರ್ದೇಶಕರಿಗೆ ಇದೆ.

ಗರ್ಭಿಣಿ ಶಾಲಿನಿಯನ್ನು ಪತಿ ವಿವಸ್ತ್ರಗೊಳಿಸಿ ಹಿಂದಿನಿಂದ ಬಲಾತ್ಕಾರ ಮಾಡುವ ದೃಶ್ಯ, ಪುನರಾವರ್ತಿತ ಬಲಾತ್ಕಾರ ದೃಶ್ಯಗಳು, ತಲೆ ಅಲ್ಲಾಡಿಸುವುದು ಮತ್ತು ಕೈಯಿಂದ ಹೊಡೆಯುವುದು ಪ್ರೇಕ್ಷಕರನ್ನು ವಿಚಲಿತಗೊಳಿಸುತ್ತದೆ. ಇದನ್ನು ಗುರುತಿಸ ಬಲ್ಲವರಿಗೆ ಹಿನ್ನೆಲೆ ಸಂಗೀತ ಅಸಹನೀಯವಾಗುತ್ತದೆ ಮತ್ತು ವಿಶ್ವಾಸ ಇಟ್ಟು ಬಂದವರಿಗೆ ಗೊಂದಲವನ್ನುಂಟು ಮಾಡುತ್ತದೆ.[ಶಾಲಿನಿ ಐಸಿಸ್ ಗೆ ಬ್ರೈನ್ ವಾಶ್ ಆಗಿದ್ದಾಳೆ ಎಂದು ಹೇಳುವ ಈ ಚಿತ್ರ, ಎರಡು ಗಂಟೆ ಹದಿನೆಂಟು ನಿಮಿಷಗಳ ಕಾಲ ಇಸ್ಲಾಂ ಹಿಂಸಾಚಾರದ ಧರ್ಮ, ಅದರಲ್ಲಿ ಉಗ್ರವಾದವಲ್ಲದೆ ಬೇರೇನೂ ಇಲ್ಲ ಎಂಬ ನಂಬಿಕೆಯನ್ನು ಪ್ರೇಕ್ಷಕರಿಗೆ ಚುಚ್ಚುವ ಮೂಲಕ ಬ್ರೈನ್ ವಾಶ್ ಮಾಡುತ್ತಿದೆ.]

ಆದರೆ ಚಿತ್ರದಲ್ಲಿನ ಇಷ್ಟೆಲ್ಲ ಹಿಂಸೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಇದು ಐಸಿಸ್ ಅನ್ನು ಮಾತ್ರ ತೋರಿಸುತ್ತದೆ ಎಂದು ಕೆಲವರು ಹೇಳಬಹುದು. ಆದರೆ ‘ದಿ ಕಾಶ್ಮೀರ ಫೈಲ್’ ನಂತೆ ಕೇರಳ ಸ್ಟೋರಿಯನ್ನೂ ನೋಡಿದರೆ, ಭಯೋತ್ಪಾಧಕನಲ್ಲದ, ಯಾವುದೇ ಗೂಢ ಉದ್ದೇಶವಿಲ್ಲದ ಮುಸಲ್ಮಾನ ವ್ಯಕ್ತಿಯನ್ನುಸಾಮಾನ್ಯನಂತೆ ನೀವು ನೋಡಲಾಗದಿದ್ದಾಗ ಇಂತಹ ಸಮರ್ಥನೆಯು ಅಪ್ರಸ್ತುತವಾಗುತ್ತದೆ. ಅಥವಾ ಒಬ್ಬ ಮುಸಲ್ಮಾನನಾದರೆ ದೇಶಪ್ರೇಮವನ್ನು ಸಾಬೀತುಪಡಿಸುವ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊಂದಿರುವಂತೆ ರೂಢಿಗತವಾಗಿರುವ ದೇಶದಲ್ಲಿ ಅದು ಇಸ್ಲಾಮೋಫೋಬಿಯಾಕ್ಕೆ ಇಂಧನವಾಗುತ್ತದೆ

ಟೈಮ್ ಬಾಂಬ್ ನ ಟಿಕ್-ಟಿಕ್ ಶಬ್ದ   !!

ಕೇರಳವು ಭಯೋತ್ಪಾದನೆಯಿಂದ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದಾದ ಟೈಮ್ ಬಾಂಬ್ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಅದಕ್ಕಾಗಿಯೇ ಸಿನಿಮಾ ಪ್ರಾರಂಭದಿಂದ ಕೊನೆಯವರೆಗೆ ಹಿನ್ನೆಲೆ ಸಂಗೀತವಾಗಿ ಟಿಕ್-ಟಿಕ್ ಶಬ್ದವನ್ನು ಸೇನ್ ಬಳಸುತ್ತಾರೆ ಎಂದು ತೋರುತ್ತದೆ. 32,000 ಅಲ್ಲ, 50,000 ಕ್ಕೂ ಹೆಚ್ಚು ಹೆಣ್ಣುಮಕ್ಕಳು ವಂಚನೆಗೊಳಗಾಗಿದ್ದಾರೆ. ವಿನಾಶದತ್ತ ಕೇರಳ ಸಾಗುತ್ತಿದೆ ಎಂದು ಹೇಳಲು, ಟೀಸರ್‌ನಲ್ಲಿ, ಉಪಶೀರ್ಷಿಕೆಗಳಲ್ಲಿ ಮತ್ತು ವಿಎಸ್ ಅವರ ಸಂಭಾಷಣೆಯಲ್ಲೂ, ಸೇನ್ ವಿಭಿನ್ನ ಅರ್ಥವನ್ನು ನೀಡಿದ್ದಾರೆ. ಇಂತಹ ಸುಳ್ಳುಗಳೇ ಚಿತ್ರದಲ್ಲಿ ಸಂಭಾಷಣೆಯಾಗಿದೆ.

ಕೇರಳ ಸ್ಟೋರಿಯ ಸಾರ್ವಜನಿಕ ‘ವಿಮರ್ಶೆ’ಗಳಲ್ಲಿ,  ಥಿಯೇಟರ್‌ನಿಂದ ಹೊರಬಂದ ಮಹಿಳೆಯೊಬ್ಬರು ಕ್ಯಾಮೆರಾವನ್ನು ನೋಡುತ್ತಾ, ನನಗೆ ಇಬ್ಬರು ಹೆಣ್ಣು ಮಕ್ಕಳಿರುವುದರಿಂದ ನಾನು ಚಿತ್ರ ನೋಡಲು ಬಂದಿದ್ದೇನೆ ಎಂದು ಹೇಳುತ್ತಾರೆ. ನನ್ನ ಹೆಣ್ಣು ಮಕ್ಕಳನ್ನು ಯಾವುದೇ ಕಾಗೆ ತೆಗೆದುಕೊಂಡು ಹೋಗಬಾರದು ಎಂದು ನಾನು ಜಾಗೃತೆಯಿಂದ ಇರುತ್ತೇನೆ. ಹೆಣ್ಣುಹೆತ್ತವರೆಲ್ಲಾ ಈ ಸಿನಿಮಾ ನೋಡ ಬೇಕು ಎನ್ನುತ್ತಾರೆ. ಅಂತಹ ನಂಬಿಕೆಗಳನ್ನು ಆಧರಿಸಿ,  ಮೃದು ಮತೀಯವಾದದಲ್ಲಿ ಮುಳುಗಿ, ತೀವ್ರ ಮತೀಯವಾದದ ಕಡೆಗೆ ತಿರುಗುವ ಚೆಂಚಲ ಮನಸ್ಥಿತಿ ಇರುವವರು, ‘ಕಾಶ್ಮೀರ್  ಫೈಲ್ಸ್’  ಸಿನಿಮಾ ನೋಡಿ ಚಪ್ಪಾಳೆ ತಟ್ಟಿದವರು, ಕೇರಳದಿಂದ 32,000 ಮಂದಿ ಐಸಿಸ್  ಸೇರಿದ್ದಾರೆ ಎಂಬ ಸುದ್ದಿಯನ್ನು ವಾಟ್ಸಾಪ್ನಲ್ಲಿ ಓದಿ ನಿಜ ಅಂದು ಕೊಂಡವರು, ಇಂತಹ ಎಲ್ಲಾ ಕುಟುಂಬಗಳಲ್ಲಿ ಖಂಡಿತವಾಗಿಯೂ  ಈ  ಸಿನಿಮಾ ಭಯವನ್ನು ಉಂಟು ಮಾಡುತ್ತದೆ.

ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಲಾಭ ಪಡೆಯುವ ಯತ್ನ;

ಕರ್ನಾಟಕದಲ್ಲಿ ಸಂಘ ಪವಾರದವರು ಮತ್ತೊಂದು ರೀತಿಯಲ್ಲಿ ಪ್ರಚಾರ ಮಾಡ ತೊಡಗಿದ್ದಾರೆ. ವಿಧಾನಸ ಭಾಚುನಾವಣೆ ಕೇವಲ ಐದು ದಿನಗಳಿದ್ದಾ ಗಲೇ ಸಿನಿಮಾ ಬಿಡುಗಡೆ ಮಾಡಿ, ಇದರಲ್ಲಿ ಚುನಾವಣಾ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸಿತು. ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಬಳ್ಳಾರಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಾತ್ಮಕ ಚಲನಚಿತ್ರ  ‘ದಿ ಕೇರಳ ಸ್ಟೋರಿ’ ಅನ್ನು ಉಲ್ಲೇಖಿಸಿ, “ದಿ ಕೇರಳ ಸ್ಟೋರಿ’ ಚಿತ್ರವು  ಭಯೋತ್ಪಾದನೆಯ  ಪಿತೂರಿಯನ್ನು  ಆಧರಿಸಿದೆ. ಆ ಸುಂದರ ರಾಜ್ಯದಲ್ಲಿ ಏನಾಗುತ್ತದೆ ಎಂಬುದನ್ನುಆಧರಿಸಿದೆ. ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ಹುನ್ನಾರವನ್ನು ಬಹಿರಂಗ ಪಡಿಸುತ್ತದೆ.  ಭಯೋತ್ಪಾದನೆಯ ಮೇಲೆ ನಿರ್ಮಿಸಲಾದ ಮತ್ತು ಭಯೋತ್ಪಾದಕ ಪ್ರವೃತ್ತಿಯೊಂದಿಗೆ ನಿಂತಿರುವ ಚಿತ್ರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.  ವೋಟ್  ಬ್ಯಾಂಕಿಗಾಗಿ ಕಾಂಗ್ರೆಸ್ ಭಯೋತ್ಪಾದನೆಯನ್ನು ರಕ್ಷಿಸಿದೆ’ ಎಂದು ಹೇಳಿದರು.

“ಕಾಂಗ್ರೆಸ್ ತನ್ನ ಮತಬ್ಯಾಂಕ್‌ಗಾಗಿ ಭಯೋತ್ಪಾದನೆಗೆ ಶರಣಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ, ಅಂತಹ ಪಕ್ಷವು ಕರ್ನಾಟಕವನ್ನು ಎಂದಾದರೂ ಉಳಿಸಬಹುದೇ? ಭಯೋತ್ಪಾದನೆಯ ವಾತಾವರಣದಲ್ಲಿಇಲ್ಲಿನ ಉದ್ಯಮ, ಐಟಿ ಉದ್ಯಮ, ಕೃಷಿ, ವೈಭವದ ಸಂಸ್ಕೃತಿ ನಾಶವಾಗುತ್ತದೆ. ಕರ್ನಾಟಕವನ್ನು ದೇಶದ ನಂಬರ್ ಒನ್‌ ರಾಜ್ಯವನ್ನಾಗಿಸಲು ಭದ್ರತಾವ್ಯವಸ್ಥೆ, ಕಾನೂನು ಸುವ್ಯವಸ್ಥೆ ಅತ್ಯಂತ ಪ್ರಮುಖ ಅವಶ್ಯಕತೆಯಾಗಿದೆ. ಕರ್ನಾಟಕಕ್ಕೆ ಭಯೋತ್ಪಾದನೆ ಮುಕ್ತವಾಗಿರುವುದು ಅಷ್ಟೇಮುಖ್ಯ. ಬಿಜೆಪಿ ಯಾವಾಗಲೂ ಭಯೋತ್ಪಾದನೆ ವಿರುದ್ಧ ಕಠಿಣವಾಗಿದೆ. ಆದರೆಭಯೋತ್ಪಾದನೆ ಬಗ್ಗೆ ಕ್ರಮ ಕೈ ಗೊಂಡಾಗಲೆಲ್ಲಾ ಕಾಂಗ್ರೆಸ್‌ಗೆ ಹೊಟ್ಟೆ ನೋವು ಬರುತ್ತದೆ.”ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು ಸಿನಿಮಾ ನೋಡಿ, ಅದನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಿ, ಸಿನಿಮಾ ಸಮಾಜಕ್ಕೆ ಒಂದು ಉತ್ತಮ ಮಾಹಿತಿ ಕೊಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಂಘಪರಿವಾರದ ಸಾಮಾಜಿಕ ಜಾಲತಾಣದ ಮಾದ್ಯಮಗಳ ಸಿಬ್ಬಂದಿ, ಥೀಯೇಟರ್ಗಳ ಹೊರಗೆ ಕ್ಯಾಮರಾ ಹಿಡಿದು ನಿಂತು, ಸಂಘ ಪರಿವಾರದ ‘ವೀಕ್ಷಕ’ ರಿಂದಲೇ ಅಭಿಪ್ರಾಯ ಪಡೆದು, ಮುಸಲ್ಮಾನರ ವಿರುದ್ದ ಮತ್ತು ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟರು ಮತ್ತು ಕೇರಳದ ವಿರುದ್ದ ಆಕ್ರೋಶದ ಹೇಳಿಕೆಗಳನ್ನು ಕೊಡಿಸಿ ಪ್ರಚಾರ ಮಾಡ ತೊಡಗಿದ್ದಾರೆ. ಇವರಲ್ಲಿ ಬಹುತೇಕರು ಮಾತಿನ ನಡುವೆ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಹೊಗಳಿ ಮಾತನಾಡುತ್ತಾರೆ. ಇವೆಲ್ಲವನ್ನೂ ನೋಡಿದಾಗ ಇದರಲ್ಲಿ ಆರೆಸ್ಸೆಸ್ ನ ಪಾತ್ರ ಸ್ವಷ್ಟವಾಗಿ ಎದ್ದು ಕಾಣುತ್ತದೆ.

ಆದರೆ ಇದಕ್ಕೆ ಕರ್ನಾಟಕದ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ.

ಗೃಹ ಮಂತ್ರಿಗಳ ಸಲಹೆಯಂತೆ ಕರ್ನಾಟಕದ ಮತದಾರ ಪಕ್ಕದ ಕೇರಳವನ್ನು ನೋಡಿದಾಗ

ಈ ಮಧ್ಯೆ ಕೇರಳವನ್ನು ಬಲ್ಲವರು ಏನು ಮಾಡುತ್ತಾರೆ?

ಚಿತ್ರದ ಕೊನೆಯಲ್ಲಿ ಕೇರಳವನ್ನು ಐಸಿಸ್ ನೇಮಕಾತಿ ಕೇಂದ್ರವಾಗಿ ಹೊರ ಜಗತ್ತಿಗೆ ಹೇಳಲಾಗಿದೆ. ಇದು ನೈಜ ಜೀವನದ ಅನುಭವಗಳಿಂದ  ಪ್ರೇರಿತವಾಗಿದೆ ಎಂದು ಹೇಳಲು, ಮತ್ತು ತಾವು ಹೇಳುವುದನ್ನು ನಂಬಿಸುವ ಪ್ರಯತ್ನದಲ್ಲಿ ಸಿನಿಮಾ ಮಂದಿ ಶ್ರಮಿಸಿದ್ದಾರೆ.  ಸಿನಿಮಾದ ಉದ್ದೇಶ ಮತ್ತು ಶೇಕಡ 100 ರಷ್ಟು ದ್ವೇಷವನ್ನು ಹರಡುವ ಗುರಿಯಾಗಿರುವುದರಿಂದ ಕೇರಳ ಸ್ಟೋರಿ ನಿಧಾನವಾಗಿ ಆ ಗುರಿಯನ್ನು ಸಾಧಿಸಬಯಸುತ್ತವೆ. ಮತ್ತು ಸಿನಿಮಾ ಕಥೆಯ ಕುರಿತಾಗಿ ಪ್ರಧಾನಿಯಂತವರ ಸಮರ್ಥನೆಯ ಮಾತುಗಳು ಅದನ್ನು ಮತ್ತಷ್ಟು ತ್ವರಿತಗೊಳಿಸುತ್ತವೆ.

ಮಲಪ್ಪುರಂನಲ್ಲಿ ಬಾಂಬ್ ಹಾಕಿ ಆನೆ ಸತ್ತಿಲ್ಲ ಎಂದು ಸಾಬೀತುಪಡಿಸಲು ಮಲೆಯಾಳಿಗಳು ಇನ್ನೂ ವಾದ ಮಾಡಬೇಕಾಗಿದೆ.  ಚರ್ಚ್ ಕಮಿಟಿ ನಡೆಸುವ ಹಿಂದೂ ಮದುವೆಗಳು ಲವ್ ಜಿಹಾದ್ ಅಲ್ಲ ಎಂದು ಅವರು ನಿರಂತರವಾಗಿ ವಾದಿಸಬೇಕಾಗುತ್ತದೆ. ಸಂಘಪರಿವಾರದ ಗುರಿಗಳಲ್ಲಿ ಒಂದು ಕೇರಳ. ಆದರೆ ಕೇರಳದ ಸೆಕ್ಯುಲರಿಸಂನ ಬುನಾದಿ ಈ ಸಿನಿಮಾದಿಂದ ಒಡೆದುಹೋಗುವುದಿಲ್ಲ. ಎಷ್ಟೇ ಕೇರಳ ಸ್ಟೋರಿಗಳು ಮತ್ತು ಫೈಲ್‌ಗಳನ್ನು ರಚಿಸಿದರೂ, ಅದರಿಂದ ಹಾನಿಯಾಗುವುದಿಲ್ಲ. ಏಕೆಂದರೆ ನಿಜವಾದ ಧಾರ್ಮಿಕ ಸಾಮರಸ್ಯ ಸಹೋದರತ್ವದ ಭಾರತೀಯ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೇರಳ ಕಥೆಗಳು ಅವರಿಗೆ ತಿಳಿದಿವೆ.

ಕೆಲವು ರಾಜ್ಯಗಳಲ್ಲಿ ನಿಷೇದ, ಒಂದೆರಡು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ;

ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಸರ್ಕಾರ  ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಿದೆ. ತಮಿಳುನಾಡಿನಲ್ಲಿ ಸಿನಿಮಾ ವಿರುದ್ದ ಪ್ರತಿಭಟನೆಗಳು ಮತ್ತು ಪ್ರೇಕ್ಷಕರ ನಿರಾಶಕ್ತಿ ಕಾರಣದಿಂದ ಥೀಯೇಟ ರ್ಮಾಲೀಕರು ಸಿನಿಮಾ ಪ್ರದರ್ಶನ ಮಾಡುತ್ತಿಲ್ಲ. ಕೇರಳದಲ್ಲಿ  ವಿರೋಧಿಸಿದೆ ಯಾದರೂ ಪ್ರದರ್ಶನಕ್ಕೆ ತಡೆ ನೀಡಿಲ್ಲ. ಆದರೆ, ಅಲ್ಲಿನಜನರು ಚಿತ್ರವೀಕ್ಷಣೆಗೆ ಆಸಕ್ತಿತೋರಿಸುತ್ತಿಲ್ಲ. ಬಿಜೆಪಿ ಆಡಳಿತ ವಿರುವ ಮಧ್ಯ ಪ್ರದೇಶದಲ್ಲಿ  ಈ ಚಿತ್ರಕ್ಕೆ ಪ್ರದರ್ಶನ ತೆರಿಗೆ ವಿನಾಯಿತಿ ನೀಡಿತಾದರೂ, ‘ಎ’ ಸರ್ಟಿಫಿಕೆಟ್  ಡೆದ ಸಿನಿಮಾ ಎಂಬ ಕಾರಣಕ್ಕೆ ವಿನಾಯಿತಿ ವಾಪಸ್ಪಡೆದಿದೆ ಎಂದು ವರದಿಯಾಗಿದೆ.  ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಸುಪ್ರಿಂ ಕೋರ್ಟ್  ಪೀಠ ‘ದಿ ಕೇರಳ ಸ್ಟೋರಿ’  ಚಲನಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರಕಾರದ ನಿಷೇಧಕ್ಕೆ ತಡೆಯಾಜ್ಞೆ ನೀಡಿದೆ ಎಂದು ಈಗ ವರದಿಯಾಗಿದೆ

ಚಲನ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರಕಾರದ ನಿಷೇಧಕ್ಕೆ ತಡೆಯಾಜ್ಞೆ ನೀಡಿದೆ ಎಂದು ಈಗ ವರದಿಯಾಗಿದೆ. ಆದರೆ ಅದೇ ವೇಳೆಗೆ, ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಪಿ. ಎಸ್.ನರಸಿಂಹ ಮತ್ತು ನ್ಯಾಯ ಮೂರ್ತಿ ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ಪೀಠ, ನಿಷೇಧದ ವಿರುದ್ಧದ ಮನವಿಯನ್ನು ಪರಿಗಣಿಸುವಾಗ ಮೌಖಿಕವಾಗಿ  “ನಾವಂತೂ ವಾಕ್ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ, ಹಾಗಂತ ನೀವು ಒಂದು ಸಮುದಾಯವನ್ನು ನಿಂದಿಸಲು ಸಾಧ್ಯವಿಲ್ಲ” ಎಂದು ನಿಷೇಧವನ್ನು ತೆಗೆಯ ಬೇಕೆಂದು ಮನವಿ ಮಾಡಿರುವ ಅರ್ಜಿದಾರರಿಗೆ ಮೌಖಿಕವಾಗಿ ಹೇಳಿರುವುದಾಗಿಯೂ ವರದಿಯಾಗಿದೆ.

“ಕಾಲ್ಪನಿಕ ಆವೃತ್ತಿ”!

32,000 ಅಂಕಿಯ ಬಗ್ಗೆ ಚಲನಚಿತ್ರ ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್  ಸಾಳ್ವೆ ಅವರನ್ನು ಕೇಳಿದಾಗ, ಸಾಳ್ವೆಯವರು ಮೇ 20ರ ಸಂಜೆ  5  ಗಂಟೆ ಒಳಗೆ, ಚಿತ್ರದಲ್ಲಿ “ಮತಾಂತರ ಗೊಳಿಸಿದವರ ಸಂಖ್ಯೆ 32000 ಅಥವಾ ಯಾವುದೇ ಇತರ ಅಂಕಿಯನ್ನು ಸಮರ್ಥಿಸಲು ಯಾವುದೇ ಪ್ರಮಾಣಿತ ದತ್ತಾಂಶ ಇಲ್ಲ; ಚಲನಚಿತ್ರವು ಈ ವಿಷಯದ ಒಂದು ಕಾಲ್ಪನಿಕ ಆವೃತ್ತಿಯನ್ನು ಪ್ರತಿನಿಧಿಸುತ್ತದೆ​” ಎಂಬ ನಿರಾಕರಣೆ ಘೋಷಣೆಯನ್ನು ಸೇರಿಸಲು ಒಪ್ಪಿಕೊಂಡರು ಎಂದೂ ವರದಿಯಾಗಿದೆ.

ಆದರೂ ‘ಸಾವಿರಾರು’ ಮಲಯಾಳಿಗಳು ಐಸಿಸ್ ಸೇರಿದ್ದಾರೆಂದು ಸಂಘಪರಿವಾರದ ಗ್ಯಾಂಗ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದು ನಿಂತಿಲ್ಲ. US ಇಲಾಖೆಯ ಪ್ರಕಾರ, ಒಟ್ಟು 66 ಭಾರತೀಯರು IS ಗೆ ಸೇರಿದ್ದಾರೆ. ಇದರಲ್ಲಿ ಮಲಯಾಳಿಗಳ ಪ್ರತ್ಯೇಕ ಲೆಕ್ಕವಿಲ್ಲ. ಸ್ಟಾನ್ಲಿ ಜಾನಿ ಅವರ 2018 ರ ಪುಸ್ತಕ ದಿ ISIS ಕ್ಯಾಲಿಫೇಟ್, ದಿ ಇಂಡಿಯನ್ ಕನೆಕ್ಷನ್‌ಎಂಬ ಐದನೇ ಅಧ್ಯಾಯವು ಭಾರತದೊಂದಿಗೆ ISIS ನ ಸಂಪರ್ಕವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಬ್ರೂಕಿಂಗ್ಸ್ ಇಂಡಿಯಾ ಪ್ರಕಾರ, ಒಟ್ಟು 142 ಭಾರತೀಯರು IS ನೊಂದಿಗೆ ಸಂಪರ್ಕ ಹೊಂದಿದ್ದಾರೆ (ಸೇರಿಲ್ಲ, ಆದರೆ ಸಂಪರ್ಕಗಳನ್ನು ಹೊಂದಿದ್ದಾರೆ). ಅದರಲ್ಲಿ 37 ಮಲೆಯಾಳಿಗಳು.  “ಲವ್ ಜಿಹಾದ್” ಆರೋಪಗಳನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯವೂ ತಿರಸ್ಕರಿಸಿವೆ.  ಲವ್ ಜಿಹಾದ್ ಅಂತೇನೂ ಇಲ್ಲ ಎಂದು ಸಂಸತ್ತಿನಲ್ಲಿ ಸರಕಾರದ ವಕ್ತಾರರೇ ಉತ್ತರಿಸಿದ್ದಾರೆ. ಇನ್ನು, ಸಾಮಾಜಿಕ ಸೂಚ್ಯಂಕಗಳಲ್ಲಂತೂ ಕೇರಳದ್ದು ಭಾರತಕ್ಕೆ ಮಾದರಿಯಾದ ಮಾನವ ಅಭಿವೃದ್ಧಿ ಸಾಧನೆಗಳು ಎಂಬುದು ಈಗ ಎಲ್ಲರಿಗೂ ತಿಳಿದಿದೆ.

ಕೃಪೆ: ಮಂಜುಲ್, ನ್ಯೂಸ್‍ ಲಾಂಡ್ರಿ

ಸುಳ್ಳುಕತೆಗೆ ತೆರಿಗೆ ವಿನಾಯ್ತಿ – ನಿಜ ಕತೆಗೆ ಬ್ಯಾನ್!

ಕೇರಳವನ್ನು ಜಗತ್ತಿನ ಮುಂದೆ ಅವಮಾನಿಸುವ, ಕೇರಳದಲ್ಲಿ ಧಾರ್ಮಿಕ ಸೌಹಾರ್ದ ವಾತಾವರಣವನ್ನು ಹಾಳು ಮಾಡಿ ಕೋಮುವಾದದ ವಿಷಬೀಜ ಬಿತ್ತುವ ಉದ್ದೇಶದಿಂದ ಮಾತ್ರ ಸಿನಿಮಾದಲ್ಲಿ ಈ ಸುಳ್ಳು ಆರೋಪವನ್ನು ಪ್ರಧಾನ ಕಥೆಯನ್ನಾಗಿ ಮಾಡಲಾಗಿದೆ.   ಇದು ಕೇರಳದ ನೈಜ ಕಥೆಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿಲ್ಲ. ಈಗ ಚಿತ್ರ ನಿರ್ಮಾಪಕರೇ ಒಪ್ಪಿರುವಂತೆ ಇದು “ಯಾವುದೇ  ಪ್ರಮಾಣಿತ ದತ್ತಾಂಶವನ್ನು ಆಧರಿಸಿರದ ಐಸಿಸ್‍ ಸೇರಿದ ಭಾರತೀಯರು ಎಂಬ ವಿಷಯದ ಮೇಲಿನ ಒಂದು ಕಾಲ್ಪನಿಕ ಆವೃತ್ತಿ’- ಅಷ್ಟೇ.!

Donate Janashakthi Media

Leave a Reply

Your email address will not be published. Required fields are marked *