ಹೈದರಾಬಾದ್:ದುಷ್ಕರ್ಮಿ ಒಬ್ಬನು ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಜವಾಹರ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ.
ಯುವತಿ ಬಟ್ಟೆ ಅಂಗಡಿಯಿಂದ ಹಿಂದಿರುಗುತ್ತಿದ್ದಾಗ ಅಡ್ಡಗಟ್ಟಿದ ವ್ಯಕ್ತಿ ಒಡ್ಡಿದಾಗ ಆಕ್ರಮಣಕಾರಿಯಾಗಿ ವರ್ತಿಸಿದ ಆತ ರಸ್ತೆಯಲ್ಲಿಯೇ ಯುವತಿಯ ಬಟ್ಟೆ ಕಿತ್ತೆಸೆದು ಅವುಗಳನ್ನು ಹರಿದು ಹಾಕಿದ್ದಾನೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದು ಆಕೆ ಜೊತೆಯೂ ದುರ್ವರ್ತನೆ ತೋರಿದ್ದಾನೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ದುರ್ವತನೆ ತೋರಿದ ಪೆದ್ದುಮಾರಯ್ಯ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 354(ಬಿ),323,506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿವಸ್ತ್ರಗೊಂಡ ಯುವತಿ 20 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆಯಲ್ಲೇ ದಿಕ್ಕು ಕಾಣದೆ ನಿಂತಿದ್ದರು. ಆಗ ಸಾಹಯಕ್ಕೆ ದಾವಿಸಿ ಬಂದ ಕೆಲವು ಮಹಿಳೆಯರು ಪ್ಲಾಸ್ಟಿಕ್ ಪೇಪರ್, ಬಟ್ಟೆ, ಹೊದಿಕೆಯನ್ನು ನೀಡಿದ್ದಾರೆ. ಇತ್ತೀಚೆಗಷ್ಟೆ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ, ಮೆರವಣಿಗೆ ನಡೆಸಿದ ಘಟನೆ ಮಾಸುವ ಮುನ್ನವೆ ಹೈದ್ರಾಬಾದ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ.