ಇಡ್ಲಿ, ದೋಸ ಬದಲು ಪಾರ್ಸಲ್ ಪೊಟ್ಟಣದಲ್ಲಿ ಹಣ – ಮಾಲಕರಿಗೆ ಹಿಂದುರಿಗಿಸಿದ ಶಿಕ್ಷಕ

ಕೊಪ್ಪಳ: ಇಡ್ಲಿ ದೋಸೆ ಪೊಟ್ಟಣದ ಬದಲಿಗೆ ಬಂದಿದ್ದ ಹಣವನ್ನು  ಮರಳಿಸುವ ಮೂಲಕ ​ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಶಿಕ್ಷಕ ಮಾದರಿಯಾಗಿದ್ದಾರೆ. ಕುಷ್ಟಗಿ ಪಟ್ಟಣದಲ್ಲಿ ರಸೂಲ್ ಸಾಬ ಸೌದಾಗರ್ ಎಂಬುವರು ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಅಂತ ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ​ನ್ನು ಹೋಟೆಲ್ ನಲ್ಲಿಟ್ಟಿದ್ದರು. ಆಹಾರ

ಮುಂಜಾನೆ ಕುಷ್ಟಗಿ ಪಟ್ಟಣದ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಮೋದಿ-ಶಾ, ಯೋಗಿ, ಭಾಗವತ್ ಮತ್ತು ಕಾರ್ಪೊರೆಟ್ ಗಳು

ಮನೆಯಲ್ಲಿ ಮಕ್ಕಳ ಜೊತೆ ಉಪಹಾರ ಸೇವಿಸಬೇಕು ಅಂತ ಕವರ್ ಬಿಚ್ಚಿ ನೋಡಿದರೆ ಇಡ್ಲಿ, ವಡೆ, ‌ದೋಸೆ ಬದಲಾಗಿ, ಹಣವಿತ್ತು. ಹೋಟೆಲ್ ಮಾಲೀಕ ಅಚಾತುರ್ಯದಿಂದ ಹಣದ ಕವರ್ ನೀಡಿದ್ದಾನೆ ಅಂತ ತಿಳಿದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಹೋಟೆಲ್ ಮಾಲೀಕನ ಬಳಿ ಹೋಗಿ ಹಣವಿದ್ದ ಕವರ್​​ ಅನ್ನು ಮರಳಿ ನೀಡಿದ್ದಾರೆ.

ಹಣವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರದಿದ್ದಾರೆ. ಶಿಕ್ಷಕನ ಪ್ರಮಾಣಿಕತೆಗೆ ಹೋಟೆಲ್ ಮಾಲೀಕ ಧನ್ಯವಾದಗಳನ್ನು ಹೇಳಿ, ನಿಮ್ಮ ಪ್ರಮಾಣಿಕತೆ ಹಲವರಿಗೆ ಮಾದರಿಯಾಗಿದೆ ಅಂತ ಅಭಿನಂದಿಸಿದ್ದಾರೆ.

ಇದನ್ನೂ ನೋಡಿ: ಏಕಾಏಕಿ ಕತ್ತು ಹಿಡಿದು ತಳ್ಳಿದರೆ ನಮ್ಮ ಬದುಕು ಬೀದಿಗೆ ಬರುತ್ತೆ – ಬಿಡಿಎ ಖಾಸಗೀಕರಣದ ವಿರುದ್ಧ ವರ್ತಕರ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *