ಬೆಂಗಳೂರು : ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್ ಒಪ್ಪಿದ್ರೆ ದಲಿತ ಸಮಾವೇಶ ಮಾಡೋದಾಗಿ ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ದಲಿತ ಸಮಾವೇಶ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಏನು ಹೇಳಿಲ್ಲ. ಸಮಾವೇಶ ಮಾಡಬೇಕು ಅಂತ ರಾಜಣ್ಣ, ಪರಮೇಶ್ವರ್ ಸೇರಿ ಹಲವರ ಮನವಿ ಮಾಡಿದ್ದಾರೆ.ಈ ಹಿಂದೆ SC-ST ಸಮಾವೇಶ ಚಿತ್ರದುರ್ಗದಲ್ಲಿ ಮಾಡಿರೋ ಸಮಾವೇಶ ಯಶಸ್ವಿಯಾಗಿತ್ತು.ಅದರಿಂದ ನಮಗೆ ಹೆಚ್ಚು ಲಾಭ ಆಗಿತ್ತು. ಚಿತ್ರದುರ್ಗದಲ್ಲಿ ಸಮಾವೇಶ ಮಾಡಬೇಕು ಅಂತ ಹೈಕಮಾಂಡ್ ನಾಯಕರೇ ಹೇಳಿದ್ರು.ಸಮಾವೇಶ ಮಾಡಿ ಅದು ನಮಗೆ ಯಶಸ್ವಿಯಾಗಿತ್ತು.ಹೀಗಾಗಿ ಅಭಿನಂದನೆ ಹೆಸರಿನಲ್ಲಿ ಸಮಾವೇಶ ಸಮಾವೇಶ ಮಾಡಬೇಕು ಅಂತ ಇದೆ ಅಂತ ತಿಳಿಸಿದರು.
ಇದನ್ನು ಓದಿ :ಡ್ರೈನೇಜ್ ಅವ್ಯವಸ್ಥೆ ಹಾಗೂ ತಡೆಗೋಡೆ ಭೀತಿಯಿಂದ ಬೆಳ್ಮ ಗ್ರಾಮಸ್ಥರಿಂದ ಪಂಚಾಯತ್ ಕಚೇರಿಯೆದುರು ಪ್ರತಿಭಟನೆ
ಸಮಾವೇಶ ಮಾಡೋ ಬಗ್ಗೆ ಹೈಕಮಾಂಡ್ ಮನವಿ ಮಾಡಲಾಗಿದೆ. ಸಮಾವೇಶ ಮಾಡೋದು ಅವಶ್ಯಕತೆ ಇದೆ. ಸಮಾವೇಶ ಮಾಡೋ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಅಂತ ತಿಳಿಸಿದರು