ಬೆಂಗಳೂರು: ರಾಜ್ಯ ಸರಕಾರವು ತಮ್ಮ ಅಧಿಕಾರವನ್ನೇ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ (ಆರ್‌ಡಿಪಿಆರ್) ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಮಸೂದೆಗೆ ಸ್ಪಷ್ಟನೆ ಕೇಳಿರುವ ರಾಜ್ಯಪಾಲರ ಮೇಲೆ ಅಂತಿಮ ಒತ್ತಡ ತರಲು ಮುಂದಾಗಿದೆ. ಬೆಂಗಳೂರು
ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೂ ಎಲ್ಲ ವಿಶ್ವ ವಿದ್ಯಾಲಯಗಳಂತೆ ಪ್ರಸ್ತುತ ರಾಜ್ಯಪಾಲರೇ ಕುಲಾಧಿಪತಿಯಾಗಿದ್ದು, ತಿದ್ದುಪಡಿ ಮಸೂದೆಯ ಪರಿಣಾಮದಿಂದಾಗಿ ಈ ಕುಲಾಧಿಪತ್ಯವು ಮುಖ್ಯಮಂತ್ರಿಗಳ ಪಾಲಾಗಲಿದೆ. ಬೆಂಗಳೂರು
ವಿ.ವಿ.ಗೆ ಕುಲಪತಿ ನೇಮಿಸುವ ಅಧಿಕಾರ ಸೇರಿದಂತೆ ಎಲ್ಲ ಸ್ತರದ ಅಧಿಕಾರವೂ ರಾಜ್ಯಪಾಲರ ಕೈತಪ್ಪಿ ಸಿಎಂ ಕೈವಶವಾಗುತ್ತದೆ. ಹೀಗಾಗಿ ಈ ತಿದ್ದುಪಡಿ ಮಸೂದೆಯನ್ನು 2ನೇ ಬಾರಿ ಸ್ಪಷ್ಟನೆ ಕೇಳಿ ರಾಜ್ಯ ಸರಕಾರಕ್ಕೆ ಮರಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರಕಾರ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಲು ಎಸ್ಎಫ್ಐ ಒತ್ತಾಯ
ಒಂದು ವೇಳೆ ರಾಜ್ಯಪಾಲರು ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದ್ದರೆ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆದು ರಾಜ್ಯಪಾಲರ ಅನುಮತಿ ಇಲ್ಲದೆಯೇ ಅಧಿಸೂಚನೆ ಹೊರಡಿಸುವ ಮೂಲಕ ಕಾನೂನು ಜಾರಿ ಮಾಡುವ ಅವಕಾಶವೂ ಸರಕಾರಕ್ಕೆ ಇದೆ. ರಾಷ್ಟ್ರಪತಿ ಅವರ ಗಮನಕ್ಕೆ ತಂದು ಈ ಕೆಲಸ ಮಾಡಬಹುದಿತ್ತು. ಆದರೆ ರಾಜ್ಯಪಾಲರು ಒಂದೇ ಮಸೂದೆಗೆ 2 ಬಾರಿ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿರುವುದರಿಂದ ಇನ್ನೊಮ್ಮೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸುವ ಸಾಧ್ಯತೆಗಳು ಕಡಿಮೆ.
ಹೀಗಾಗಿ ರಾಜಭವನದೊಂದಿಗೆ ಸಮರ ಸಾರುವ ಬದಲು ಒತ್ತಡ ಹೇರುವ ತಂತ್ರಕ್ಕೆ ಸರಕಾರ ಮುಂದಾಗಿದೆ. ಮತ್ತೊಂದು ಬಾರಿ ಸ್ಪಷ್ಟನೆಯೊಂದಿಗೆ ಮರು ಸಲ್ಲಿಕೆ ಮಾಡಿದರೆ, ಅದನ್ನು ಮರಳಿಸುವುದಿಲ್ಲ ಎನ್ನುವ ಖಚಿತತೆಯೊಂದಿಗೆ 2-3 ದಿನದಲ್ಲಿ ಸ್ಪಷ್ಟನೆಯೊಂದಿಗೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರಿಗೆ ಮರು ಸಲ್ಲಿಕೆ ಮಾಡಲು ನಿರ್ಧರಿಸಿದೆ.
ಸಂವಿಧಾನದ ಆರ್ಟಿಕಲ್ 20ರ ಅನ್ವಯ ತಿದ್ದುಪಡಿ ಮಸೂದೆಯನ್ನು ಸರಕಾರಕ್ಕೆ ಮರಳಿಸಿದ್ದಾರೆಯೇ ಹೊರತು, ಆರ್ಟಿಕಲ್ 200ರ ಪ್ರಕಾರ ತಿರಸ್ಕರಿಸಿಲ್ಲ. ಹೀಗಾಗಿ ಅದನ್ನು ಹಿಂಪಡೆದು ಅಧಿವೇಶನದಲ್ಲಿ ಮಂಡನೆ ಮಾಡುವ ಚಿಂತನೆ ನಡೆಸಿಲ್ಲ. ಕಾನೂನು ಪ್ರಕಾರ ಅವರು ಕೇಳಿರುವ ಸ್ಪಷ್ಟನೆಸಹಿತ 3 ದಿನದೊಳಗೆ ಮರುಸಲ್ಲಿಕೆ ಮಾಡಿ, ಅನುಮೋದನೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ರಾಜ್ಯಪಾಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ ವಾಪಸ್ ಕಳುಹಿಸಿದ್ದಾರೆ. ಈ ಹಿಂದೆ ಅರ್ಚಕರಿಗೆ ಸಹಾಯ ಮಾಡಲು, “ಸಿ’ ದರ್ಜೆ ದೇವಸ್ಥಾನಕ್ಕೆ ಸಹಾಯ ಮಾಡಲು ಕಳುಹಿಸಿದ್ದ ಮಸೂದೆಯನ್ನೂ ವಾಪಸ್ ಕಳುಹಿಸಿದ್ದರು. ಅವರು ಕೇಳಿದ ಸ್ಪಷ್ಟನೆ ಕೊಟ್ಟರೂ ವಾಪಸ್ ಕಳುಹಿಸಿದ್ದಾರೆ. ನಾನೇ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇದನ್ನೂ ನೋಡಿ: ಬಹುರೂಪಿ : ಶರಣ ಚಳವಳಿಯ ಕನ್ನಡಿಯಲ್ಲಿ ವರ್ತಮಾನದ ಬಿಕ್ಕಟ್ಟುಗಳು ಹಾಗೂ ಬಿಡುಗಡೆಯ ದಾರಿ Janashakthi Media