ಪ್ಯಾಲೇಸ್ತೀನ್: ಯುದ್ದೋನ್ಮಾದದ ಭೀಕರತೆಗೆ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಗಾಜಾ ನಗರದಲ್ಲಂತೂ ಪರಿಸ್ಥಿತಿ ಕೈ ಮೀರಿದೆ. ಯುದ್ಧದ ಭೀಕರತೆ ನಡುವೆ ಪುಟ್ಟ ಬಾಲಕಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಯ
ಬಾಲಕಿ ರಸ್ತೆಯಲ್ಲಿ ತನ್ನ ಪುಟ್ಟ ತಂಗಿಯನ್ನ ಹೊತ್ತಿಕೊಂಡು ನಡೆದು ಹೋಗುತ್ತಿದ್ದು, ಬಾಲಕಿಯ ಅಸಹಾಯಕತೆ ಕರುಳು ಹಿಂಡುತ್ತಿದೆ. ಕಾರು ಡಿಕ್ಕಿಯಾಗಿ ತನ್ನ ತಂಗಿ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆ ಟ್ರೀಟ್ ಮೆಂಟ್ ಗೆ ಕರೆದೊಯ್ಯುತ್ತಿರೋದಾಗಿ ವಿಡಿಯೋದಲ್ಲಿ ಬಾಲಕಿ ಹೇಳಿದ್ದಾಳೆ. ಗಾಯ
ಇದನ್ನೂ ಓದಿ: ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ಸಾಧ್ಯವಿಲ್ಲ – ಕುಮಾರಸ್ವಾಮಿ
ಗಾಜಾ ನಗರದ ರಸ್ತೆಯಲ್ಲಿ ಬಾಲಕಿ ನಡೆದುಕೊಂಡು ಹೋಗುವಾಗ ಸಂದರ್ಶಕರ ಕೈಗೆ ಬಾಲಕಿ ಸಿಕ್ಕಿದ್ದಾಳೆ. ತಂಗಿಯನ್ನು ಹೊತ್ತು ಸಾಗಿಸಲು ನಿನಗೆ ಆಯಾಸವಾಗುತ್ತಿಲ್ಲವೇ ಎಂಬ ಪ್ರಶ್ನೆಗೆ, ಬಹಳ ಸುಸ್ತಾಗುತ್ತಿದೆ. ಆದರೆ ಅವಳು ನಡೆಯಲು ಸಾಧ್ಯವಿಲ್ಲ. ಹಾಗಾಗಿ ಹೊತ್ತೊಯ್ಯುತ್ತಿದ್ದೇನೆ ಎಂದು ಬಾಲಕಿ ಉತ್ತರಿಸಿದ್ದಾಳೆ.
ನಂತರ ತಮ್ಮ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಡ್ರಾಪ್ ಮಾಡಿದ್ದಾರೆ. ತನ್ನ ಪ್ರೀತಿಯ ತಂಗಿಗೋಸ್ಕರ ಅಕ್ಕ ಈ ಪರಿ ನಡೆದುಕೊಂಡು ಕಷ್ಟ ಪಡುವ ದೃಶ್ಯದ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಕಮೆಂಟ್ಸ್ ಮೂಲಕ ಕಾಳಜಿ ಮೆರೆದಿದ್ದಾರೆ. ವಿಶ್ವ ಸಂಸ್ಥೆ ಮಧ್ಯ ಪ್ರವೇಶಿಸಿ ಇಸ್ರೇಲಿ ಸೇನೆ ಅಕ್ರಮಣಕ್ಕೆ ಕಡಿವಾಣ ಹೇರುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ನೋಡಿ: ಬೆಂಗಳೂರು | ಭಾರಿ ಮಳೆ; ಸಂಚಾರ ಅಸ್ತವ್ಯಸ್ತ – ಇಬ್ಬರು ಮಕ್ಕಳ ಸಾವು Janashakthi Media