ರಾಯಚೂರು : ದೇಶದ ಮುಂಚೂಣಿ ಮಹಿಳಾ ಸಂಘಟನೆಯಾಗಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12 ನೇ ರಾಜ್ಯ ಸಮ್ಮೇಳನ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆ ಪತ್ರಿಕಾ ಹೆಳಿಕೆ ನಿಡಿದೆ.
ಇದನ್ನೂ ಓದಿ: “ಬಿಹಾರ ಎಸ್‍ಐ ಆರ್: ಕೈಬಿಡಲಾದ ಹೆಸರುಗಳ ಪಟ್ಟಿಯನ್ನು ಕಾರಣ ಸಹಿತ ಆಗಸ್ಟ್ 19ರ ಸಂಜೆಯೊಳಗೆ ಪ್ರಕಟಿಸಿ”
ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯಡಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12 ನೇ ರಾಜ್ಯ ಸಮ್ಮೇಳನವು ಮಹಿಳೆಯರ ವಿರುದ್ಧದ ಎಲ್ಲ ದೌರ್ಜನ್ಯಗಳ ನಿರ್ಮೂಲನೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೌರ್ಜನ್ಯಗಳಿಗೆ ತುತ್ತಾದ ಈ ಮಣ್ಣಿನ ಎಲ್ಲ ಹೆಣ್ಣು ಮಕ್ಕಳಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತ ಸಾಂಕೇತಿಕವಾಗಿ ಬಿಜಾಪುರದಿಂದ ದಾನಮ್ಮ, ಬೆಳ್ತಂಗಡಿ ಯಿಂದ ಪದ್ಮಲತಾ, ವೇದವಲ್ಲಿ, ಯಮುನಾ,ಸೌಜನ್ಯ ಮತ್ತಿತರ ಹತ್ಯೆಗೊಳಗಾಗಿ ಅಸಹಜ ಸಾವಿನ ಹಣೆಪಟ್ಟಿ ಕಟ್ಟಿ ಹೂತು ಹಾಕಿದ ಮಹಿಳೆಯರ ನೆನಪಿನಲ್ಲಿ ಸಂಘರ್ಷದ ಮೂಲಕ ಕೃಷಿ ಭೂಮಿಯನ್ನು ಉಳಿಸಿಕೊಂಡು ಪ್ರಾಮಾಣಿಕ ಹೋರಾಟದಿಂದ ಗಳಿಸುವ ಯಶಸ್ಸಿನ ಸಂಕೇತವಾಗಿ ದೇವನಹಳ್ಳಿಯ ನೆಲದಿಂದ ಹೀಗೆ ಎಲ್ಲಕಡೆಯ ಹಿಡಿಮಣ್ಣು ಸಂಘರ್ಷದ ಸಂದೇಶ ಹೊತ್ತು ಸಿಂದನೂರು ತಲುಪಲಿದೆ ಎಂದು ಮುಖಂಡರು ಪತ್ರಿಕಾ ಹೆಳಿಕೆ ನಿಡಿದರು.
ಇದನ್ನೂ ನೋಡಿ: FRS ಗೆ ಯಾಕೆ ವಿರೋಧ? ಐಸಿಡಿಎಸ್ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers
