ಲಿಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬೆಂಗಾಜಿಯಿಂದ 18 ಭಾರತೀಯ ಪ್ರಜೆಗಳನ್ನು ಭಾರತಕ್ಕೆ ವಾಪಾಸ್ ಕಳುಹಿಸಲು ಅನುಕೂಲ ಮಾಡಿಕೊಟ್ಟಿದೆ. ಈ 18 ಜನ ಹಲವಾರು ವಾರಗಳಿಂದ ಬೆಂಗಾಜಿ ನಗರದಲ್ಲಿ ಸಿಲುಕಿಕೊಂಡಿದ್ದರು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಲಿಬಿಯಾದಲ್ಲಿ ಸಿಲುಕಿಕೊಂಡಿದ್ದ 18 ಭಾರತೀಯರು ಹಿಂತಿರುಗಿರುವುದನ್ನು ದೃಢಪಡಿಸಿದ್ದಾರೆ.
ಲಿಬಿಯಾದ ಬೆಂಗಾಜಿಯಿಂದ 18 ಭಾರತೀಯ ಪ್ರಜೆಗಳನ್ನು ಹಿಂದಿರುಗಿಸಲು ಲಿಬಿಯಾ ದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅನುಕೂಲ ಮಾಡಿಕೊಟ್ಟಿದೆ. ಅವರು ಇಂದು ಭಾರತಕ್ಕೆ ಆಗಮಿಸಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ 18 ಭಾರತೀಯರು ಲಿಬಿಯಾದಲ್ಲಿ ಕೆಲಸಕ್ಕೆ ಹೋಗಿದ್ದರು. ಅಲ್ಲಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿದ್ದರಿಂದ ಹಲವಾರು ವಾರಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಅಗತ್ಯವಿರುವ ಅಧಿಕಾರ ಮತ್ತು ಪ್ರಯಾಣ ದಾಖಲೆಗಳೊಂದಿಗೆ ಭಾರತೀಯ ಕಾರ್ಮಿಕರಿಗೆ ಸಹಾಯ ಮಾಡಿತು” ಎಂದು ಅವರು ಹೇಳಿದ್ದಾರೆ.
ಲಿಬಿಯಾದ ಬೆಂಗಾಜಿಯಲ್ಲಿ ಹಲವು ವಾರಗಳ ಕಾಲ ಸಿಲುಕಿಕೊಂಡಿದ್ದ ಒಟ್ಟು 18 ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಲಿಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೆಲಸಕ್ಕಾಗಿ ಲಿಬಿಯಾಕ್ಕೆ ಹೋಗಿ ಹಲವಾರು ವಾರಗಳ ಕಾಲ ಸಿಲುಕಿಕೊಂಡಿದ್ದ ಭಾರತೀಯರ ಮರಳುವಿಕೆಯನ್ನು ಸುಗಮಗೊಳಿಸಿದೆ ಎಂದು ಹೇಳಿದರು. ರಾಯಭಾರ ಕಚೇರಿಯು ಭಾರತೀಯರೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಲಿಬಿಯಾ ಅಧಿಕಾರಿಗಳ ಬೆಂಬಲ ಮತ್ತು ಸಹಕಾರಕ್ಕಾಗಿ ಜೈಸ್ವಾಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ
“ರಾಯಭಾರ ಕಚೇರಿಯು ಲಿಬಿಯಾದಲ್ಲಿ ಸಿಲುಕಿದ್ದವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅವರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಅವರಿಗೆ ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳನ್ನು ಪೂರೈಸಿತು. ರಾಯಭಾರ ಕಚೇರಿಯ ಸಹಾಯದಿಂದ ಅದೇ ಗುಂಪಿನ ಇತರ ಮೂವರು ಭಾರತೀಯ ಪ್ರಜೆಗಳು ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳಿದ್ದರು” ಎಂದು ಜೈಸ್ವಾಲ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
2014ರಲ್ಲಿ ಪ್ರಾರಂಭವಾದ ಅಂತರ್ಯುದ್ಧದ ನಂತರ ಲಿಬಿಯಾದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿದೆ. ಇದಕ್ಕೂ ಮೊದಲು, ಭಾರತ ಸರ್ಕಾರವು ಭಾರತೀಯ ಪ್ರಜೆಗಳ ಮೇಲೆ ಲಿಬಿಯಾಕ್ಕೆ ಪ್ರಯಾಣ ನಿಷೇಧವನ್ನು ವಿಧಿಸಿತು. ಇತ್ತೀಚಿನ ತಿಂಗಳುಗಳಲ್ಲಿ ಅಲ್ಲಿನ ಭದ್ರತಾ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಭಾರತ ಮತ್ತು ಲಿಬಿಯಾವನ್ನು ಸಂಪರ್ಕಿಸುವ ಯಾವುದೇ ನೇರ ವಿಮಾನಗಳಿಲ್ಲ.