ಕೃಷಿಯನ್ನು ಸರ್ವನಾಶ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಸುನಿಲ್ ಕುಮಾರ್ ಬಜಾಲ್

ಉಳ್ಳಾಲ: ನಗರೀಕರಣಕ್ಕೆ ನಮ್ಮಿಂದ ಎಂದಿಗೂ ವಿರೋಧವಿಲ್ಲ. ಆದರೆ ನಗರೀಕರಣದ ನೆಪದಲ್ಲಿ ರೈತರ ಜೀವನಾಡಿಯಾಗಿರುವ ಕೃಷಿಯನ್ನು ಸರ್ವನಾಶ ಮಾಡಿದರೆ ದೇಶದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಕೃಷಿ ಅದರಲ್ಲೂ ಭತ್ತ ಕೃಷಿ ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಭತ್ತ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಜತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಸೆಪ್ಟೆಂಬರ್‌ 7ರಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. ನಾಶ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಭತ್ತ ಕೃಷಿಕರಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಶ

ಆರ್ಥಿಕ ಕ್ಷೇತ್ರಗಳ ಇತಿಮಿತಿ ಮೀರಿ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದೋ ಅವೆಲ್ಲವನ್ನೂ ಮಾಡಬಹುದು ಎಂಬುದಕ್ಕೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಮಾಡಿ ತೋರಿಸುತ್ತಿದೆ. ವೈವಿಧ್ಯಮಯ ಚಟುವಟಿಕೆಗಳೊಂದಿಗೆ ಸಮಾಜಮುಖಿ ಕೆಲಸವನ್ನು ಈ ಸಹಕಾರಿ ಸಂಘವು ಮಾಡುತ್ತಿದ್ದು, ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ನಾಶ

ಇದನ್ನೂ ಓದಿ: ನವದೆಹಲಿ | ಇಂಡಿಯಾ ಮೈತ್ರಿಕೂಟದ ಸುದರ್ಶನ್ ರೆಡ್ಡಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಬೆಂಬಲ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೋಮೇಶ್ವರ ಪುರಸಭೆ ಅಧ್ಯಕ್ಷರಾದ ಕಮಲ ಕಾರ್ಯಕ್ರಮ ಉದ್ಘಾಟಿಸಿದರು. ಭತ್ತ ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಒಂದು ಎಕರೆಗೆ 5 ಸಾವಿರ ರೂ.ಗಳಂತೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಕಳೆದ ಮೂರು ವರುಷ ಗಳಿಂದ ಅಡಿಕೆ ಬೆಳೆಗೆ ಮೈಲುತುತ್ತನ್ನು ಉಚಿತವಾಗಿ ನೀಡುತ್ತಿದ್ದೇವೆ.

ನಮ್ಮ ಕಾರ್ಯವ್ಯಾಪ್ತಿಗೆ ಒಳಪಟ್ಟ 14 ಗ್ರಾಮಗಳಲ್ಲಿ ಒಂದು ಸರಕಾರಿ ಶಾಲೆಯನ್ನು ಗುರುತಿಸಿ ಅಲ್ಲಿನ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್, ಕೊಡೆ ಇನ್ನಿತರ ಕಲಿಕಾ ಪರಿಕರ ಪೂರೈಸುತ್ತಿದ್ದೇವೆ. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ.

ಈ ಬಾರಿ ಸಂಘದ ವತಿಯಿಂದ ಪಿಲಾರಿನ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿದ್ದಲ್ಲದೆ, ಇತ್ತೀಚೆಗೆ ಬೀರಿಯಲ್ಲಿ ನಡೆದ ಹಲಸು ಮೇಳ ಜಿಲ್ಲಾಮಟ್ಟದಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿದರು.

ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಮೀದ್ ಹಸನ್ ಮಾಡೂರು, ಕೋಟೆಕಾರು ಪಟ್ಟಣ ಪಂಚಾಯತ್‌ ಸದಸ್ಯರಾದ ರಾಘವ ಗಟ್ಟಿ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕೆ.ಬಿ.ಅಬುಸಾಲಿ ಕಿನ್ಯಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್, ನಿರ್ದೇಶಕರಾದ ಗಂಗಾಧರ ಯು.ಕೆ., ಕೃಷ್ಣಪ್ಪ ಸಾಲಿಯಾನ್, ಉದಯಕುಮಾರ್‌ ಶೆಟ್ಟಿ ಕೊಂಡಾಣಗುತ್ತು, ಅರುಣ್ ಕುಮಾರ್ ಯು., ರಾಘವ ಆರ್.ಉಚ್ಚಿಲ್, ರಾಘವ ಸಿ.ಉಚ್ಚಿಲ್, ಸುರೇಖಾ ಚಂದ್ರಹಾಸ್, ಸುನೀತಾ ಲೋಬೊ, ಕೃಷ್ಣಪ್ಪ ಬಾಬುನಾಯ್ಕ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಮತ್ತಿತರರು ಹಾಜರಿದ್ದರು. ಅರುಣ್ ಕುಮಾರ್ ಯು. ವಂದಿಸಿದರು. ಹರೀಶ್ ನೀಲಿಪಾಲು ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ನೋಡಿ: ಸರ್‌ (SIR) ಅಂದ್ರೆ ಮತದಾರರನ್ನು ಹೊರದಬ್ಬುವುದೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *