ದಾವಣಗೆರೆ| ಫೈನಾನ್ಸ್ ಸಂಸ್ಥೆಗೆ ಮೋಸ ಮಾಡಿದ್ದ ಕಂಪೆನಿ ವ್ಯವಸ್ಥಾಪಕ ಬಂಧನ

ದಾವಣಗೆರೆ: ಗ್ರಾಹಕರ ಚಿನ್ನ ಒತ್ತೆಯಾಗಿಟ್ಟುಕೊಂಡು ಸಾಲ ನೀಡುವ ಜಗಳೂರು ಪಟ್ಟಣದ ಕೆಎಲ್ಎಂ ಆಕ್ಸಿವ್ ಫಿನ್ ವೆಸ್ಟ್ ಫೈನಾನ್ಸ್ ಸಂಸ್ಥೆಗೆ ಮೋಸ ಮಾಡಿದ್ದ ಕಂಪೆನಿ ವ್ಯವಸ್ಥಾಪಕ ಅರವಿಂದ ಹನುಮಂತ ಎಂಬುವನನ್ನು ಬಂಧಿಸಲಾಗಿದೆ.

ಸ್ನೇಹಿತರ ಹೆಸರಿನಲ್ಲಿ ಖಾತೆಗಳನ್ನು ತೆರೆದು ನಕಲಿ ಬಂಗಾರದ ಆಭರಣಗಳನ್ನು ಅಡವಿಟ್ಟು ಬರೋಬ್ಬರಿ 42 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿದ್ದ. ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರು ಜಗಳೂರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಇಂದಿನ ಭಾರತದಲ್ಲಿ ಬಳಕೆ-ಆಧಾರಿತ ಜಿಡಿಪಿ ಬೆಳವಣಿಗೆ ಸಾಧ್ಯವೇ?

ದೂರು ದಾಖಲಿಕೊಂಡ ಪೊಲೀಸರು, ಅರವಿಂದ ಹನುಮಂತನನ್ನು ಬಂಧಿಸಿದ್ದಾರೆ. ಸಿಪಿಐ ರಾಷ್ಟ್ರಪತಿ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ಆಶಾ ನೇತೃತ್ವದ ತಂಡವು ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ನೋಡಿ: ಬಹುರೂಪಿ | ಆದಿವಾಸಿ ಸಮುದಾಯದ ವರ್ತಮಾನದ ತಲ್ಲಣಗಳು Janashakthi Media

Donate Janashakthi Media

Leave a Reply

Your email address will not be published. Required fields are marked *